ಯುವತಿಯರು ಲೈಂಗಿಕ ಕಾಮನೆ ನಿಯಂತ್ರಿಸಿಕೊಳ್ಳಬೇಕು ಎಂದಿದ್ದ ಕೋಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಛೀಮಾರಿ!
ಯುವತಿಯರು ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಹೇಳಿದ್ದಕೋಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಛೀಮಾರಿ ಹಾಕಿದೆ. ಈ ಕಾಮೆಂಟ್ ಆಕ್ಷೇಪಾರ್ಹ ಹಾಗೂ ಅನಪೇಕ್ಷಿತ ಎಂದು ಹೇಳಿದೆ.
ನವದೆಹಲಿ (ಡಿ.8): ಯುವತಿಯರಿಗೆ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಲು ಸಲಹೆ ನೀಡಿದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಆಕ್ಷೇಪಾರ್ಹ ಮತ್ತು ಅನಗತ್ಯ ಎಂದು ಹೇಳಿ ಛೀಮಾರಿ ಹಾಕಿದೆ. ಮುಖ್ಯವಾಗಿ ನ್ಯಾಯಾಧೀಶರು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅಥವಾ ಬೋಧಿಸುವುದು ಇಂಥ ಪ್ರಕರಣದಲ್ಲಿ ಅಗತ್ಯವಾಗಿರುವುದಿಲ್ಲ ನಾವು ಭಾವಿಸುತ್ತೇವೆ" ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಸುಪ್ರೀಂ ಪೀಠ ಹೇಳಿದೆ. ಕೋಲ್ಕತ್ತಾ ಹೈಕೋರ್ಟ್‌ನ ಈ ಅಭಿಪ್ರಾಯಗಳು ದೇಶದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಯುವಕ-ಯುವತಿಯರ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿದೆ. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಸ್ವೀಕಾರ ಮಾಡಿದ್ದಲ್ಲದೆ, ರಾಜ್ಯ ಸರ್ಕಾರ ಮತ್ತು ಇತರರಿಗೆ ನೋಟಿಸ್ಅನ್ನು ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಸಹಾಯ ಮಾಡಲು ಹಿರಿಯ ವಕೀಲೆ ಮಾಧವಿ ದಿವಾನ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಮತ್ತು ಅಮಿಕಸ್‌ಗೆ ಸಹಾಯ ಮಾಡಲು ವಕೀಲ ಲಿಜ್ ಮ್ಯಾಥ್ಯೂ ಅವರನ್ನು ಸುಪ್ರೀಂ ಕೋರ್ಟ್ ನೇಮಿಸಿದೆ.
ಕಲ್ಕತ್ತಾ ಹೈಕೋರ್ಟ್ ಹೇಳಿದ್ದೇನು?: ಅಕ್ಟೋಬರ್ 18 ರಂದು, ಕಲ್ಕತ್ತಾ ಹೈಕೋರ್ಟ್, ಪೋಕ್ಸೋ ಅಡಿಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ 20 ವರ್ಷದ ಯುವಕನ ಮೇಲ್ಮನವಿಯ ವಿಚಾರಣೆ ನಡೆಸುವ ವೇಳೆ, ಯುವತಿಯರು ಕೂಡ ಎರಡು ನಿಮಿಷದ ಸಂತೋಷದ ಆಸೆಗೆ ಬೀಳುವ ಬದಲು ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಬೇಕು. ಇನ್ನು ಹದಿಹರೆಯದ ಹುಡುಗರು ಕೂಡ ಯುವತಿಯರು ಮತ್ತು ಮಹಿಳೆಯರು ಮತ್ತು ಅವರ ಘನತೆ ಮತ್ತು ದೈಹಿಕ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಹೇಳಿತ್ತು.
'ಹೆಣ್ಮಕ್ಕಳ ಮೇಲೆ ರೇಪ್ ಕೇಸ್ ದಾಖಲಿಸಬಹುದೇ..?' ಐಪಿಸಿ 375 ಪರಿಶೀಲನೆಗೆ ಮುಂದಾದ ಸುಪ್ರೀಂ ಕೋರ್ಟ್!
ಏನಿದು ಪ್ರಕರಣ: ನ್ಯಾಯಾಲಯವು ಪೋಕ್ಸೋ ಶಿಕ್ಷೆಯನ್ನು ಈ ವಿಚಾರದಲ್ಲಿ ರದ್ದುಗೊಳಿಸಿದೆ. ಪ್ರಕರಣ ಆಗುವಸಮಯದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಒಪ್ಪಿಗೆಯ ದೈಹಿಕ ಸಂಬಂಧವನ್ನು ಹೊಂದಿದ್ದರು ಮತ್ತು ಅವರು ಈಗ ಮದುವೆಯಾಗಿದ್ದಾರೆ ಎಂಬ ಮೇಲ್ಮನವಿದಾರನ ವಾದವನ್ನು ಅಂಗೀಕರಿಸಿತು. ಆರೋಪಿಯೊಂದಿಗೆ ತನಗೆ ಒಪ್ಪಿಗೆಯ ಸಂಬಂಧವಿತ್ತು ಎಂದು ಬಾಲಕಿ ಹೈಕೋರ್ಟ್‌ಗೆ ತಿಳಿಸಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಸಂಬಂಧಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ತಪ್ಪಿಸಲು ಹದಿಹರೆಯದವರಿಗೆ ಸಮಗ್ರ ಹಕ್ಕು-ಆಧಾರಿತ ಲೈಂಗಿಕ ಶಿಕ್ಷಣಕ್ಕಾಗಿ ಹೈಕೋರ್ಟ್ ಮತ್ತಷ್ಟು ಕರೆ ನೀಡಿತ್ತು.
ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದ..!