'ಹೆಣ್ಮಕ್ಕಳ ಮೇಲೆ ರೇಪ್ ಕೇಸ್ ದಾಖಲಿಸಬಹುದೇ..?' ಐಪಿಸಿ 375 ಪರಿಶೀಲನೆಗೆ ಮುಂದಾದ ಸುಪ್ರೀಂ ಕೋರ್ಟ್!
ಮಹಿಳೆಯ ಮೇಲೆ ರೇಪ್ ಕೇಸ್ ದಾಖಲು ಮಾಡಬಹುದೇ ಎನ್ನುವ ಬಗ್ಗೆ ಪರಿಶೀಲನೆ ಮಾಡಲಿದ್ದೇವೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ವಿಚಾರಣೆಯ ವೇಳೆ ಹೇಳಿದೆ. ಪ್ರಸ್ತುತ ಇರುವ 375 ಸೆಕ್ಷನ್ ರೇಪ್ ಕೇಸ್‌ಅನ್ನು ಪುರುಷರ ಮೇಲೆ ಮಾತ್ರವೇ ದಾಖಲು ಮಾಡಬಹುದಾಗಿದೆ.
ನವದೆಹಲಿ (ಡಿ.1): ಭಾರತೀಯ ದಂಡ ಸಂಹಿತೆಯ 375ರ ಪ್ರಕಾರ ರೇಪ್ ಕೇಸ್‌ಅನ್ನು ಪುರುಷರ ಮೇಲೆ ಮಾತ್ರವೇ ದಾಖಲು ಮಾಡಬಹುದು. ಆದರೆ, ಇದೇ ಸೆಕ್ಷನ್‌ನ ಅಡಿಯಲ್ಲಿ ಮಹಿಳೆಯರ ಮೇಲೆ ರೇಪ್ ಕೇಸ್ ದಾಖಲು ಮಾಡಬಹುದೇ ಎನ್ನುವುದನ್ನು ಪರಿಶೀಲನೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಪ್ರಸ್ತುತ ಇರುವ ಕಾನೂನಿನಲ್ಲಿ, 'ಒಬ್ಬ ಪುರುಷನು ಅತ್ಯಾಚಾರ ಮಾಡುತ್ತಾನೆ ಎಂದು ಹೇಳಲಾಗುವ..' ಅಂಶದಿಂದ ಪ್ರಾರಂಭವಾಗುತ್ತದೆ. ಆ ಬಳಿಕ ಮಹಿಳೆಯೊಬ್ಬಳು ಪುರುಷನ ಮೇಲೆ ಯಾವೆಲ್ಲಾ ಕಾರಣಗಳಿಗಾಗಿ ಅತ್ಯಾಚಾರದ ಆರೋಪಗಳನ್ನು ಮಾಡಬಹುದು ಎನ್ನುವ ವಿವರಣೆಯನ್ನು ನೀಡುತ್ತದೆ. ಮಹಿಳೆಯೊಂದಿಗೆ ಆಕೆಯ ಇಚ್ಛೆಯ ವಿರುದ್ಧವಾಗಿ, ಆಕೆಯ ಒಪ್ಪಿಗೆಯಿಲ್ಲದೆ, ಬಲವಂತದ ಮೂಲಕ ಸಂಭೋಗ ಮಾಡಿದಲ್ಲಿ ಸೇರಿದಂತೆ ಇತರ ಕೆಲವು ಕಾರಣಗಳಿಗೆ ಇದು ಅತ್ಯಾಚಾರ ಎನಿಸಿಕೊಳ್ಳುತ್ತದೆ ಎಂದ ತಿಳಿಸುತ್ತದೆ.
ಮೂಲತಃ ತನ್ನ ಮಗನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿಸಿ 62 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸಂಜಯ್ ಕರೋಲ್ ಅವರ ಪೀಠವು ಮಹಿಳೆಗೆ ವಾದಗಳನ್ನು ಆಲಿಸಲು ಸಮ್ಮತಿಸಿ ಇಂದು ನೋಟಿಸ್ ಜಾರಿ ಮಾಡಿದೆ. ಈ ವಿಷಯ ಇಂದು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಸಂಜಯ್ ಕರೋಲ್ ಅವರ ಪೀಠದ ಮುಂದೆ ಬಂದಿತು, ಅತ್ಯಾಚಾರ ಪ್ರಕರಣದಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂಬ ಬಗ್ಗೆ ನ್ಯಾಯಾಲಯವು ಅನುಮಾನ ವ್ಯಕ್ತಪಡಿಸಿತು. "ನಮ್ಮ ಪ್ರಕಾರ, ಒಬ್ಬ ಪುರುಷನನ್ನು ಮಾತ್ರವೇ ಕೇಸ್‌ನಲ್ಲಿ ಆರೋಪ ಮಾಡಬಹುದಾಗಿದೆ' ಎಂದು ನ್ಯಾಯಾಲಯವು ಮೌಖಿಕವಾಗಿ ತಿಳಿಸಿದೆ. ಪ್ರಕರಣದಲ್ಲಿ ವಿಧವೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದೂಡುವ ಮೊದಲು ನ್ಯಾಯಾಲಯ ನೋಟಿಸ್ ನೀಡಲು ಮುಂದಾಗಿದೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 375 ಭಾರತೀಯ ಕಾನೂನಿನ ಅಡಿಯಲ್ಲಿ "ಅತ್ಯಾಚಾರ" ಅಪರಾಧವನ್ನು ವ್ಯಾಖ್ಯಾನಿಸುತ್ತದೆ. ಈ ಕಾನೂನು "ಮನುಷ್ಯ" ("ಒಬ್ಬ ವ್ಯಕ್ತಿ 'ಅತ್ಯಾಚಾರ' ಮಾಡಿದರೆ ಅವನು ...." ) ಅನ್ನು ಅಪರಾಧಿ ಎಂದು ಉಲ್ಲೇಖಿಸುವ ಮೂಲಕ ಪ್ರಾರಂಭವಾಗುತ್ತದೆ, ಅಂದರೆ ಸಾಮಾನ್ಯವಾಗಿ ಪುರುಷರನ್ನು ಮಾತ್ರವೇ ಅತ್ಯಾಚಾರದ ಅಪರಾಧಕ್ಕಾಗಿ ಐಪಿಸಿ ಸೆಕ್ಷನ್ 375 ಅಡಿಯಲ್ಲಿ ಕೇಸ್ ದಾಖಲು ಮಾಡಬಹುದು.
ಮಹಿಳೆ ಮತ್ತು ಆಕೆಯ ಕಿರಿಯ ಮಗನ ವಿರುದ್ಧ ಹಿರಿಯ ಮಗ 'ಆನ್‌ಲೈನ್' ಸಂಬಂಧ ಹೊಂದಿರುವ ಇನ್ನೊಬ್ಬ ಮಹಿಳೆಯಿಂದ ಪ್ರಕರಣ ದಾಖಲಾಗಿದೆ. ಆರೋಪಗಳಲ್ಲಿ ಅತ್ಯಾಚಾರ, ಬಂಧನ, ಗಾಯ ಮತ್ತು ಬೆದರಿಕೆಯ ಆರೋಪಗಳು ಸೇರಿವೆ.
ಅದಾನಿ-ಹಿಂಡನ್‌ಬರ್ಗ್ ಪ್ರಕರಣ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್!
ದೂರು ನೀಡಿರುವ ಮಹಿಳೆ, ವಿಧವೆಯ ಹಿರಿಯ ಮಗನೊಂದಿಗೆ ಅನೌಪಚಾರಿಕ ವಿವಾಹ ಮಾಡಿಕೊಂಡಿರುವುದಾಗಿ ತಿಳಿಸಿದ್ದಾಳೆ. ವಿಡಿಯೋ ಕಾಲ್‌ನಲ್ಲಿ ಮದುವೆ ನಡೆದಿದೆ ಎಂದು ಹೇಳಿದ್ದಾರೆ. ಬಳಿಕ ಇವರಿಬ್ಬರ ಸಂಬಂಧ ಕೊನೆಗೊಂದಿದೆ. ರಾಜಿ ಒಪ್ಪಂದದ ಭಾಗವಾಗಿ ದೂರು ನೀಡಿರುವ ಮಹಿಳೆಗೆ 11 ಲಕ್ಷ ರೂಪಾಯಿ ನೀಡಲಾಗಿದೆ. ಹಾಗಿದ್ದರೂ, ಆಕೆ ವಿಧವೆ ಹಾಗೂ ಆಕೆಯ ಕಿರಿಯ ಮಗನ ಮೇಲೆ ಅತ್ಯಾಚಾರ, ಬಂಧನ, ಗಾಯ ಹಾಗೂ ಬೆದರಿಕೆಯನ್ನು ಆರೋಪಿಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಿದ್ದರು.
ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಜಡ್ಜ್ ಫಾತಿಮಾ ಬೀವಿ ನಿಧನ
ಆ ವ್ಯಕ್ತಿಯನ್ನು ಮದುವೆಯಾಗಲು ತನಗೆ ಅಪಾರ ಒತ್ತಡವಿತ್ತು ಮತ್ತು ತನ್ನ ಇಚ್ಛೆಗೆ ವಿರುದ್ಧವಾಗಿ ತೆಗೆದ ಸ್ಪಷ್ಟ ಫೋಟೋಗಳೊಂದಿಗೆ ಆತನಿಂದ ಬಂಧನಕ್ಕೊಳಗಾಗಿದ್ದಲ್ಲದೆ, ಹಲ್ಲೆ ನಡೆಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಆರೋಪಗಳಿಗೆ ತಾಯಿಯೂ ತಿರುಗೇಟು ನೀಡಿದ್ದಾರೆ.