Asianet Suvarna News Asianet Suvarna News

ಮೋದಿ ಸಂಪುಟದಲ್ಲಿ 11 ಮಹಿಳಾ ಸಚಿವರು; ಹೊಸ ಅಧ್ಯಾಯ ಆರಂಭ!

  • ಮೋದಿ ಸಂಪುಟಕ್ಕೆ 43 ನೂತನ ಸಚಿವರು ಸೇರ್ಪಡೆ
  • ಇದರಲ್ಲಿ 7 ಮಂದಿ ಮಹಿಳಾ ಮಣಿಗಳಿಗೆ ಸ್ಥಾನ
  • ಸಂಪುಟ ವಿಸ್ತರಣೆ ಬಳಿಕ ಮಹಿಳಾ ಮಣಿಗಳ ಸಂಖ್ಯೆ 11ಕ್ಕೆರಿಕೆ
Cabinet Reshuffle Seven more Women joined PM Modi new council of ministers team ckm
Author
Bengaluru, First Published Jul 7, 2021, 9:59 PM IST

ನವದೆಹಲಿ(ಜು.07): ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮೋದಿ ಸಂಪುಟಕ್ಕೆ 43  ಸಚಿವರು ಸೇರಿಕೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಲವರಿಗೆ ಕೇಂದ್ರ ಸಚಿವ ಸ್ಥಾನ, ಇನ್ನೂ ಕೆಲವರಿ ರಾಜ್ಯ ಖಾತೆ ನೀಡಲಾಗುತ್ತಿದೆ. ವಿಶೇಷ ಅಂದರೆ ಈ ಬಾರಿ ಮೋದಿ ಸಂಪುಟ ಪುನಾರಚನೆಯಲ್ಲಿ 7 ಮಂದಿ ಮಹಿಳಾ ಮಣಿಗಳು ಸಂಪುಟ ಸೇರಿಕೊಂಡಿದ್ದಾರೆ.

"

ಸಮೃದ್ಧ, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಪಣ; 43 ನೂತನ ಸಚಿವರಿಗೆ ಪ್ರಧಾನಿ ಮೋದಿ ಕಿವಿಮಾತು!

2019ರಲ್ಲಿ ಮೋದಿ ಸಂಪುಟ ರಚನೆ ವೇಳೆ ಕೇವಲ ಮೂರು ಕ್ಯಾಬಿನೆಟ್ ಮಂತ್ರಿ ಹಾಗೂ 3 ರಾಜ್ಯ ಸಚಿವರು ಹೊಂದಿದ ಮಹಿಳಾ ಪ್ರಾತಿನಿಧ್ಯಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಮಹಿಳೆಯರಿಗೆ ಮೋದಿ ಸಂಪುಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಿಲ್ಲ ಅನ್ನೋ ಟೀಕೆಗಳು ಕೇಳಿಬಂದಿತ್ತು. ಇದೀಗ ಸಂಪುಟ ಪುನಾರಚನೆ ಬಳಿಕ ಮೋದಿ ಸಂಪುಟದಲ್ಲಿ 11 ಮಹಿಳಾ ಸಚಿವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

 

 

ಅಕಾಲಿ ದಳ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಹೊರಬಂದ ಬಳಿಕ  ಹರ್ಸಿಮ್ರತ್ ಕೌರ್ ರಾಜೀನಾಮೆ ನೀಡಿದರು. ಹೀಗಾಗಿ ಕೇಂದ್ರ ಕ್ಯಾಬಿನೆಟ್ ಮಹಿಳಾ ಮಂತ್ರಿಗಳ ಸಂಖ್ಯೆ 2ಕ್ಕೆ ಕುಸಿದಿತ್ತು. ಆದರೆ ಇದೀಗ 7 ಮಹಿಳಾ ಮಣಿಗಳು ಮೋದಿ ಸಂಪುಟ ಸೇರಿಕೊಂಡು ಮಹಿಳಾ ಶಕ್ತಿ ಹೆಚ್ಚಿಸಿದ್ದಾರೆ.

ಮೋದಿ ಸಂಪುಟ : ಕರ್ನಾಟಕದ ನಾಲ್ವರು ಸೇರಿ 43 ಸಚಿವರಿಂದ ಪ್ರಮಾಣ ವಚನ ಸ್ವೀಕಾರ!

ಸಂಪುಟ ಪುನಾರಚನೆಯಲ್ಲಿ ಮೋದಿ ಕ್ಯಾಬಿನೆಟ್ ಸೇರಿಕೊಂಡ 7 ಮಹಿಳಾ ಸಚಿವರು:
ಅನುಪ್ರಿಯಾ ಸಿಂಗ್ ಪಟೇಲ್
ಶೋಭಾ ಕರಂದ್ಲಾಜೆ
ದರ್ಶನಾ ವಿಕ್ರಮ ಜರ್ದೋಶ್
ಮೀನಾಕ್ಷಿ ಲೇಖಿ
ಅನ್ನಪೂರ್ಣ ದೇವಿ
ಸುಶ್ರಿ ಪ್ರತಿಮಾ ಭೌಮಿಕ್
ಭಾರತಿ ಪ್ರವೀಣ್ ಪವಾರ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಚಿವೆ ಸ್ಮೃತಿ ಇರಾನಿ ಒಳಗೊಂಡ ಮೋದಿ ಸಂಪುಟದಲ್ಲಿ ಮಹಿಳೆಯರ ಧ್ವನಿಗೆ ಮತ್ತಷ್ಟು ಪ್ರಾಶಸ್ತ್ಯ ಸಿಕ್ಕಿದೆ. ಕೇಂದ್ರ ರಾಜ್ಯ ಸಚಿವೆ ದೇಬಶ್ರಿ ಚೌಧರಿ ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ 2019ರಲ್ಲಿ ಮೋದಿ ಸಂಪುಟ ಸೇರಿಕೊಂಡ ಮಹಿಳಾ ಮಣಿಗಳ ಪೈಕಿ ನಾಲ್ವರು ಮಾತ್ರ ಸಂಪುಟದಲ್ಲಿದ್ದಾರೆ.


ಈಗಾಗಲೇ ಕೇಂದ್ರ ಸಂಪುಟದಲ್ಲಿರುವ ಮಹಿಳಾ ಸಚಿವರು
ನಿರ್ಮಲಾ ಸೀತಾರಾಮನ್
ಸ್ಮೃತಿ ಇರಾನಿ
ರೇಣುಕಾ ಸಿಂಗ್
ಸಾಧ್ವಿ ನಿರಂಜನ್ ಜ್ಯೋತಿ

"

Follow Us:
Download App:
  • android
  • ios