Asianet Suvarna News Asianet Suvarna News

ಮೋದಿ ಸಂಪುಟ : ಕರ್ನಾಟಕದ ನಾಲ್ವರು ಸೇರಿ 43 ಸಚಿವರಿಂದ ಪ್ರಮಾಣ ವಚನ ಸ್ವೀಕಾರ!

  • ಮೋದಿ ಸಂಪುಟ ಪುನರ್ ರಚನೆ ಕಸರತ್ತು ಅಂತ್ಯ
  • ಪ್ರಮಾಣ ವಚನ ಸ್ವೀಕರಿಸಿದ 43 ಸಚಿವರು
  • ಮೋದಿ ಕ್ಯಾಬಿನೆಟ್ ಸೇರಿಕೊಂಡ ಕರ್ನಾಟಕದ ನಾಲ್ವರು ಸಚಿವರು!
Cabinet Reshuffle 43 leaders take oath as ministers and joined Pm modi revamped Cabinet ckm
Author
Bengaluru, First Published Jul 7, 2021, 7:46 PM IST

ನವದೆಹಲಿ(ಜು.07):  ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿದ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಸತತ ಸಭೆ, ಚರ್ಚೆ ಬಳಿಕ ಇಂದು ಅಂತಿಮ ಪಟ್ಟಿ ಬಹಿರಂಗ ಪಡಿಸಲಾಯಿತು. 43 ಸಚಿವರು ಈ ಬಾರಿ ಮೋದಿ ಕ್ಯಾಬಿನೆಟ್ ಸೇರಿಕೊಡಿದ್ದಾರೆ. ಇದೀಗ 43 ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. 

"

#Cabinetreshuffle;ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕದ ನಾಲ್ವರು ಸಚಿವರು!..

ಉಪಮುಖ್ಯಮಂತ್ರಿ ವೆಂಕಯ್ಯ ನಾಯ್ಡು,  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸಂಪುಟ ಹಿರಿಯ ಸಚಿವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು . ಕೊರೋನಾ ವೈರಸ್ ಪ್ರೊಟೋಕಾಲ್ ಕಾರಣ ಸರಳವಾಗಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನೂತನ ಸಚಿವರು, ಅವರ ಆಪ್ತ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸಮಾರಂಭದಲ್ಲಿ ಪಾಲ್ಗೊಳ್ಳಲು ಕೊರೋನಾ ನೆಗಟೀವ್ ವರದಿ ಕಡ್ಡಾಯ ಮಾಡಲಾಗಿತ್ತು.

ಸಂಪುಟ ಪುನಾರಚನೆ: ನಾರಾಯಾಣ ರಾಣೆ to ಸಿಂಧಿಯಾ, ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು!.

ಜ್ಯೋತಿರಾಧಿತ್ಯ ಸಿಂಧಿಯಾ, ಸರ್ಬಾನಂದ ಸೋನೊವಾಲ್, ಅನುರಾಗ್ ಠಾಕೂರ್, ಕಿರೆನ್ ರಿಜಿಜು, ಹರ್ದೀಪ್ ಸಿಂಗ್ ಪುರಿ ಸೇರಿದಂತೆ 15 ಸಚಿವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು ಮೀನಾಕ್ಷಿ ಲೇಖಿ, ಪಂಕಜ್ ಚೌಧರಿ, ಅನುಪ್ರಿಯಾ ಪಟೇಲ್, ಶೋಭಾ ಕರಂದ್ಲಾಜೆ ಸೇರಿದಂತೆ 28 ಸಚಿವರನ್ನು ರಾಜ್ಯ ಸಚಿವರಾಗಿ ಸೇರಿಸಿಕೊಳ್ಳಲಾಗಿದೆ. ಪ್ರಮಾಣ ವಚನ ಸ್ವೀಕರಿಸಿದ 43 ನೂತನ ಸಚಿವರ ಪೈಕಿ 25 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಅತ್ಯಂತ ಕಿರಿಯರು ಮೋದಿ ಕ್ಯಾಬಿನೆಟ್ ಸೇರಿಕೊಂಡಿದ್ದಾರೆ.  

ಸಂಪುಟ ಪುನಾರಚನೆ: ಮೋದಿ ಸಂಪುಟಕ್ಕೆ 43 ಸಚಿವರು, ಇಲ್ಲಿದೆ ಸಂಪೂರ್ಣ ಲಿಸ್ಟ್.

ನಾರಾಯಣ ತಾತು ರಾಣೆ
ನಾರಾಯಣ್ ತಾತು ರಾಣೆ ಮೊದಲ ಬಾರಿಗೆ ಮಹಾರಾಷ್ಟ್ರದ ರಾಜ್ಯಸಭಾ ಸಂಸದರಾಗಿದ್ದಾರೆ. ಇದೀಗ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ. 
ಮಹಾರಾಷ್ಟ್ರದಲ್ಲಿ 6 ಬಾರಿ ಶಾಸಕರು ಮತ್ತು 1 ಬಾರಿ MLC ಆಗಿದ್ದಾರೆ.
ಮಹಾರಾಷ್ಟ್ರವನ್ನು ಮುಖ್ಯಮಂತ್ರಿಯಾಗಿ ಮತ್ತು ಕ್ಯಾಬಿನೆಟ್ ಆಗಿ ಸೇವೆ ಸಲ್ಲಿಸಿದ್ದಾರೆ
ಕೈಗಾರಿಕೆಗಳು, ಕಂದಾಯ, ಬಂದರುಗಳು ಮತ್ತು ಪಶುಸಂಗೋಪನೆ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.
1971 ರಿಂದ 11984ರ ವರೆಗೆ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
69 ವರ್ಷದ  ನಾರಾಯಣ ತಾತು ರಾಣೆ ಮಹಾರಾಷ್ಟ್ರದ ಕೊಂಕಣ ಮೂಲದವರು.

ಸರ್ಬಾನಂದ ಸೋನೊವಾಲ್
ಸರ್ಬಾನಂದ ಸೋನೊವಾಲ್ ಅಸ್ಸಾಂನ 2 ಬಾರಿ ಲೋಕಸಭಾ ಸಂಸದರಾಗಿದ್ದಾರೆ
2016 ರಿಂದ 2021ರ ವರೆಗೆ ಅಸ್ಸಾಂನ ಜನಪ್ರಿಯ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ
ಕೇಂದ್ರ ಸಂಪುಟದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ; ಮತ್ತು ಕ್ರೀಡೆ ಮತ್ತು ಯುವ ವ್ಯವಹಾರ ಖಾತೆ ನಿರ್ವಹಿಸಿದ್ದಾರೆ.
ಮೋದಿ ಸಂಪುಟದಲ್ಲಿ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ
58 ವರ್ಷದ ಸೊನೊವಾಲ್ ಗುವಾಹಟಿ ವಿಶ್ವವಿದ್ಯಾಲಯದಿಂದ LLB ಪದವಿ ಪಡೆದಿದ್ದಾರೆ

ಡಾ. ವಿರೇಂದ್ರ ಕುಮಾರ್
ಡಾ. ವಿರೇಂದ್ರ ಕುಮಾರ್ ಮಧ್ಯಪ್ರದೇಶದ ಟಿಕಮಾರ್ಗ್ ಕ್ಷೇತ್ರದ ಲೋಕಸಭಾ ಸಂಸದರಾಗಿದ್ದಾರೆ.
7 ಬಾರಿ ಆಯ್ಕೆಯಾಗಿರುವ ವಿರೇಂದ್ರ ಕುಮಾರ್, ಅತ್ಯಂತ ಹಿರಿಯ ಸಂಸದರಾಗಿದ್ದಾರೆ.
ಈ ಹಿಂದೆ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ
ನರೇಂದ್ರ ಮೋದಿ ಸಂಪುಟದಲ್ಲಿ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರ ಖಾತೆ ನಿರ್ವಹಿಸಿದ್ದಾರೆ
67 ವರ್ಷದ ವಿರೇಂದ್ರ ಕುಮಾರ್, ಡಾ.ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ.

ಜ್ಯೋತಿರಾಧಿತ್ಯ ಸಿಂಧಿಯಾ:
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ 50 ವರ್ಷದ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯಪ್ರದೇಶದ ರಾಜ್ಯಸಭಾ ಸಂಸದರಾಗಿದ್ದಾರೆ
5ನೇ ಬಾರಿಗೆ ಸಿಂಧಿಯಾ ಸಂಸದರಾಗಿ ಆಯ್ಕೆಯಾಗಿದ್ದಾರೆ 
ಕೇಂದ್ರ ವಿದ್ಯುತ್ ಸಚಿವರಾಗಿದ್ದಾರೆ (ಸ್ವತಂತ್ರ ಉಸ್ತುವಾರಿ) ಮತ್ತುಈ ಹಿಂದೆ ಕೇಂದ್ರ ವಾಣಿಜ್ಯ ಮತ್ತು ಸಂವಹನ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಸಿಂಧಿಯಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ MBA ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ BA ಪದವಿ ಪಡೆದಿದ್ದಾರೆ.

ರಾಮಚಂದ್ರ ಪ್ರಸಾದ್ ಸಿಂಗ್
ರಾಮಚಂದ್ರ ಪ್ರಸಾದ್ ಸಿಂಗ್ ಬಿಹಾರದಿಂದ 2ನೇ ಬಾರಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ
ರಾಮಚಂದ್ರ ಪ್ರಸಾದ್ ಸಿಂಗ್ 1984ರ ಬ್ಯಾಚ್‌ನ IAS ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಇದೀಗ ಮೋದಿ ಸಂಪುಟ ಸೇರಿಕೊಂಡಿದ್ದಾರೆ.
63 ವರ್ಷದ ರಾಮಚಂದ್ರ ಪ್ರಸಾದ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿದ್ದಾರೆ.

ಅಶ್ವಿನಿ ವೈಷ್ಣವ್:
ಅಶ್ವಿನಿ ವೈಷ್ಣವ್ ಒಡಿಶಾ ರಾಜ್ಯಸಭಾ ಸಂಸದರಾಗಿದ್ದಾರೆ. 
1994 -1994 ರ ಬ್ಯಾಚ್‌ನ  ಮಾಜಿ IAS ಅಧಿಕಾರಿ ಇದೀಗ ಮೋದಿ ಸಂಪುಟ ಸೇರಿಕೊಂಡಿದ್ದಾರೆ
ಜನರಲ್ ಎಲೆಕ್ಟ್ರಿಕ್ ಮತ್ತು ಸೀಮೆನ್ಸ್  ಸೇರಿದಂತೆ ಪ್ರಮುಖ ಜಾಗತಿಕ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ
ನೀತಿಗಳು, ಕಾರ್ಯವಿಧಾನಗಳು, ಸಂಸ್ಥೆಗಳು ಮತ್ತು ನಿಯಮಗಳು(PPP)ಫ್ರೇಮ್‌ವರ್ಕ್ ಮೂಲಕ ಜನಪ್ರಿಯರಾಗಿದ್ದಾರೆ.
50 ವರ್ಷದ ಅಶ್ವಿನಿ ವೈಷ್ಣವ್ ವಾರ್ಟನ್ ಸ್ಕೂಲ್, ಪೆನ್ನಿಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಎಂಬಿಎ ಹಾಗೂ ಐಐಟಿ ಕಾನ್ಪುರದ  Mtech ಪದವಿ ಪಡೆದಿದ್ದಾರೆ.

ಪಶು ಪತಿ ಕುಮಾರ್ ಪರಾಸ್:
ತಿ ಕುಮಾರ್ ಪರಾಸ್ ಅವರು ಹಾಜಿಪುರದ ಲೋಕಸಭಾ ಸಂಸದರಾಗಿದ್ದಾರೆ
ಲೋಕ ಜನಶಕ್ತಿ ಪಕ್ಷದ ಪ್ರಮುಖ ನಾಯಕರಾಗಿರುವ ಪರಾಸ್, ಕಳೆದ ವರ್ಷ ನಿಧನರಾದ ಹಿರಿಯ ನಾಯಕ ರಾಮ್ ವಿಲಾಸ್ ಪಾಸ್ವಾನ್ ಸಹೋದರಾಗಿದ್ದಾರೆ.
ಬಿಹಾರದಲ್ಲಿ 7 ಬಾರಿ ಶಾಸಕರಾಗಿ ಮತ್ತು 1 ಬಾರಿ MLCಯಾಗಿ ಕಾರ್ಯನಿರ್ವಹಿಸಿದ್ದಾರೆ
ಬಿಹಾರ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ
 68 ವರ್ಷ ವರ್ಷದ ಪಶು ಪತಿ ಕುಮಾರ್ ಪರಾಸ್ 45 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ.
ಪಶು ಪತಿ ಕುಮಾರ್ ಪರಾಸ್ ಭಾಗಲ್ಪುರ್ ವಿಶ್ವವಿದ್ಯಾಲಯದಿಂದ ಬಿಇಡಿ ಪಡೆದಿದ್ದಾರೆ.

ಭೂಪೇಂದರ್ ಯಾದವ್:
ಭೂಪೇಂದರ್ ಯಾದವ್ ರಾಜಸ್ಥಾನದ ರಾಜ್ಯಸಭಾ ಸಂಸದರಾಗಿದ್ದಾರೆ, 2ನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಸಂಸತ್ ಸಮಿತಿಯಲ್ಲಿ ನಾಯಕತ್ವದ ಮೂಲಕ ಜನಪ್ರಿಯವಾಗಿದ್ದಾರೆ
ರಾಜಕೀಯ ಜೀವನ ಆರಂಭಕ್ಕೂ ಮೊದಲು ವಕೀರಲಾಗಿ ಸೇವೆ ಸಲ್ಲಿಸಿದ್ದಾರೆ
52 ವರ್ಷದ ಭೂಪೇಂದರ್ ಯಾದವ್ ಅಜ್ಮಿರ್ ಸರ್ಕಾರಿ ಕಾಲೇಜಿಂದ LLB ಪದವಿ ಪಡೆದಿದ್ದಾರೆ

ಪಂಕಜ್ ಚೌಧರಿ:
ಪಂಕಜ್ ಚೌಧರಿ ಉತ್ತರ ಪ್ರದೇಶ ಮಹಾರಾಜಗಂಜ್ ಲೋಕಸಭಾ ಸಂಸದರಾಗಿದ್ದಾರೆ
6ನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಗೆ ಪಂಕಜ್ ಚೌಧರಿಗಿದೆ
ಗೋರಖ್‌ಪುರ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದಾರೆ
56 ವರ್ಷ ವರ್ಷದ ಪಂಕಜ್ ಚೌಧರಿ ಉತ್ತರ ಪ್ರದೇಶದ ಪೂರ್ವಾಂಚಲ್ ಮೂಲದವರಾಗಿದ್ದಾರೆ

ಅನುಪ್ರಿಯಾ ಸಿಂಗ್ ಪಟೇಲ್:
ಅನುಪ್ರಿಯಾ ಸಿಂಗ್ ಪಟೇಲ್ ಉತ್ತರ ಪ್ರದೇಶದ ಮಿರ್ಜಾಪುರದ ಲೋಕಸಭಾ ಸಂಸದರಾಗಿದ್ದಾರೆ
ಪ್ರಧಾನಿ ನರೇಂದ್ರ ಸಂಪುಟದಲ್ಲಿ ಕೇಂದ್ರ ಆರೋಗ್ಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ
ರಾಜಕೀಯ ಜೀವನ ಆರಂಭಿಸುವ ಮೊದಲು ಅಮಿಟಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ
40 ವರ್ಷ ವರ್ಷದ ಅನುಪ್ರಿಯಾ  ಚತ್ರಪತಿ ಮಹಾರಾಜ ವಿಶ್ವವಿದ್ಯಾಲಯ ಕಾನ್ಪುರದಿಂದ MBA ಪದವಿ ಪಡೆದಿದ್ದಾರೆ.

ಸತ್ಯಪಾಲ್ ಸಿಂಗ್ ಭಘೇಲ್:
ಉತ್ತರ ಪ್ರದೇಶದ ಆಗ್ರಾದ ಲೋಕಸಭಾ ಸಂಸದರಾಗಿದ್ದಾರೆ, 5ನೇ ಬಾರಿಗೆ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಪಶುಸಂಗೋಪನೆಗಾಗಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ
ಉತ್ತರ ಪ್ರದೇಶ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಸಣ್ಣ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ
61 ವರ್ಷದ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಮಿಲಿಟರಿ ಸೈನ್ಸ್‌ನಲ್ಲಿ PhD ಹಾಗೂ LLB ಪಡೆದಿದ್ದಾರೆ

ರಾಜೀವ್ ಚಂದ್ರಶೇಖರ್:
ರಾಜೀವ್ ಚಂದ್ರಶೇಖರ್ ಕರ್ನಾಟಕದ ಸಂಸದರಾಗಿದ್ದಾರೆ, 3ನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ
15 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಗೆ ಪಾತ್ರರಾಗಿದ್ದಾರೆ
ಪಾರ್ಲಿಮೆಂಟರಿ ಸ್ಟಾಡಿಂಗ್ ಕಮಿಟಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ
ಉದ್ಯಮಿ ಹಾಗೂ ಭಾರತದ್ ಸೆಲ್ಯೂಲರ್ ಕ್ಷೇತ್ರದ ನಿರ್ಮಾಪಕ
MIT ಮಣಿಪಾಲ್ ವಿಶ್ವವಿದ್ಯಾಲಯದಿಂದ ಬಿಇ(ಎಲೆಕ್ಟ್ರಿಕಲ್ ಎಂಜಿನಿಯರಂಗ್) ಪದವಿ ಪಡೆದಿದ್ದಾರೆ

ಶೋಭಾ ಕರಂದ್ಲಾಜೆ:
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ 
ಇದೇ ಮೊದಲ ಬಾರಿಗೆ ಕೇಂದ್ರ ಸಂಪುಟ ಸೇರಿಕೊಳ್ಳುತ್ತಿದ್ದಾರೆ. 2ನೇ ಬಾರಿಗೆ ಸಂಸದರಾಗಿರುವ 54 ವರ್ಷದ ಶೋಭಾ
ಕರ್ನಾಟಕದ ಸರ್ಕಾರದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ
ಮಂಗಳೂರು ವಿಶ್ವವಿದ್ಯಾಲಯದಿಂದ ಸೋಶಿಯಾಲಜಿಯಲ್ಲಿ ಎಂಎ( ಪದವಿ ಪಡೆದಿದ್ದಾರೆ.

ಭಾನು ಪ್ರತಾಪ್ ಸಿಂಗ್ ವರ್ಮಾ
ಉತ್ತರ ಪ್ರದೇಶದ ಜಲೌನ್ ಲೋಕಸಭಾ ಸಂಸದರಾಗಿದ್ದಾರೆ. 
ಸಂಸದರಾಗಿ 5 ನೇ ಅವಧಿಗೆ ಸೇವೆ ಸಲ್ಲಿಸುತ್ತಿರುವ ಹೆಗ್ಗಳಿಕೆ ಇವರದ್ದು
1980 ರ ದಶಕದಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ವರ್ಮಾ
ಬುಂದೇಲ್‌ಖಂಡ್ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದಿದ್ದಾರೆ.

ದರ್ಶನಾ ವಿಕ್ರಮ ಜರ್ದೋಶ್:
ಗುಜರಾತ್‌ನ ಸೂರತ್‌ಗೆ ಲೋಕಸಭಾ ಸಂಸದರಾಗಿದ್ದು, 3 ನೇ ಅವಧಿಗೆ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಸೂರತ್ ಮುನ್ಸಿಪಲ್ ಕಾರ್ಪೊರೇಶನ್‌ನ ಕಾರ್ಪೊರೇಟರ್ ಮತ್ತು ಗುಜರಾತ್ ಸಮಾಜ ಕಲ್ಯಾಣ ಮಂಡಳಿಯ ಸದಸ್ಯೆ
ಕಲಾ ಮತ್ತು ಸಾಂಸ್ಕೃತಿಕ ಸಂಘಟನೆಯಾದ ಸಂಸ್ಕೃತ ನಿರ್ದೇಶಕರಾಗಿದ್ದಾರೆ
60 ವರ್ಷದ ದರ್ಶನಾಸೂರತ್‌ನ ಕೆಪಿ ಕಾಮರ್ಸ್ ಕಾಲೇಜಿನಿಂದ ಬಿಕಾಂ ಪದವಿ ಪಡೆದಿದ್ದಾರೆ

ಮೀನಾಕ್ಷಿ ಲೇಖಿ:
54 ವರ್ಷದ ಮೀನಾಕ್ಷಿ ಲೇಖಿ ನವದೆಹಲಿಯ ಲೋಕಸಭಾ ಸಂಸದರಾಗಿದ್ದಾರೆ
2 ನೇ ಅವಧಿಯ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ನವದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಸದಸ್ಯರಾಗಿದ್ದಾರೆ
ಸುಪ್ರೀಂ ಕೋರ್ಟ್ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತೆ
ದೆಹಲಿ ದೆಹಲಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ

ಅನ್ನಪೂರ್ಣ ದೇವಿ
51 ವರ್ಷದ ಅನ್ನಪೂರ್ಣ ದೇವಿ ಜಾರ್ಖಂಡ್‌ನ ಕೋಡರ್ಮ ಲೋಕಸಭಾ ಸಂಸದರು
ಜಾರ್ಖಂಡ್ ಮತ್ತು ಬಿಹಾರದಿಂದ 4 ಬಾರಿ ಶಾಸಕರಾಗಿದ್ದಾರೆ
ಜಾರ್ಖಂಡ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ, 
 ನೀರಾವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಕೆಲ ಖಾತೆಗಳನ್ನು ನಿರ್ವಹಿಸಿದ್ದಾರೆ
 ಬಿಹಾರ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು
ರಾಂಚಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ

ಎ.ನಾರಾಯಣಸ್ವಾಮಿ
ಕರ್ನಾಟಕದ ಚಿತ್ರದುರ್ಗದ ಲೋಕಸಭಾ ಸಂಸದರಾಗಿದ್ದಾರೆ
64 ವರ್ಷದ ನಾರಾಯಣಸ್ವಾಮಿ ಮೊದಲ ಅವಧಿಯಲ್ಲೇ ಸಂಪುಟ ಸೇರಿಕೊಂಡಿದ್ದಾರೆ
ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು
ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಿಂದ ಬಿ.ಎ ಪದಿ ಪಡೆದಿದ್ದಾರೆ

ಕೌಶಾಲ್ ಕಿಶೋರ್:
ಉತ್ತರಪ್ರದೇಶದ ಮೋಹನ್ ಲಾಲ್ಗಂಜ್ ಲೋಕಸಭಾ ಸಂಸದರಾಗಿದ್ದಾರೆ
61 ವರ್ಷದ ಕೌಶಲ್ ಕಿಶೋರ್ ಸಂಸದರಾಗಿ 2 ನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ
ಉತ್ತರ ಪ್ರದೇಶ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಾರೆ
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ
ಕಾಲಿಚರನ್ ಇಂಟರ್ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ

ಅಜಯ್ ಭಟ್
ಉತ್ತರಾಖಂಡದ ನೈನಿತಾಲ್-ಉದಮ್‌ಸಿಂಗ್ ನಗರದ ಲೋಕಸಭಾ ಸಂಸದರಾಗಿದ್ದಾರೆ
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆಯಲ್ಲಿ 3 ಬಾರಿ ಶಾಸಕರಾಗಿದ್ದರು
ಸಂಸದೀಯ ವ್ಯವಹಾರಗಳು, ಆರೋಗ್ಯ, ವಿಪತ್ತು ಅಬಕಾರಿ ಮುಂತಾದ ಖಾತೆಗಳನ್ನು ನಿಭಾಯಿಸಿದ್ದಾರೆ
ರಾಜಕೀಯ ಜೀವನಕ್ಕೂ ಮೊದಲು ರಾಣಿಖೇತ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಿದರು
ಕುಮೌನ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ

ಬಿಎಲ್ ವರ್ಮಾ
59 ವರ್ಷದ ಬಿ.ಎಲ್.ವರ್ಮಾ ಉತ್ತರಪ್ರದೇಶದ ರಾಜ್ಯಸಭಾ ಸಂಸದರಾಗಿದ್ದಾರೆ
ಸಾರ್ವಜನಿಕ ಜೀವನದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ
ವಾರಣಾಸಿಯ ಸಂಪರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದಿದ್ದಾರೆ

ಅಜಯ್ ಕುಮಾರ್
60 ವರ್ಷದ ಅಜಯ್ ಕುಮಾರ್ ಉತ್ತರಪ್ರದೇಶದ ಖೇರಿ ಕ್ಷೇತ್ರದ ಲೋಕಸಭಾ ಸಂಸದರಾಗಿದ್ದಾರೆ
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಶಾಸಕರಾಗಿ ಮತ್ತು ಖೇರಿ ಜಿಲಾ ಪರಿಷತ್‌ನಲ್ಲಿ ಸದಸ್ಯರಾಗಿದ್ದಾರೆ
ಕಾನ್ಪುರ್ ವಿಶ್ವವಿದ್ಯಾಲಯದಿಂದ BSc ueit LLB ಪದವಿ ಪಡೆದಿದ್ದಾರೆ

ಚೌಹಾನ್ ದೇವುಸಿನ್ಹ್
56 ವರ್ಷದ ಚೌಹಾನ್  ಗುಜರಾತ್‌ನ ಖೇಡಾಕ್ಕೆ ಲೋಕಸಭಾ ಸಂಸದರಾಗಿದ್ದಾರೆ
ಗುಜರಾತ್ ವಿಧಾನಸಭೆಯಲ್ಲಿ ಅವರು 2 ಬಾರಿ ಶಾಸಕರಾಗಿದ್ದಾರೆ. 
ರಾಜಕೀಯ ಜೀವನಕ್ಕೂ ಮೊದಲು ಆಲ್ ಇಂಡಿಯಾ ರೇಡಿಯೊದಲ್ಲಿ ಎಂಜಿನಿಯರ್ ಆಗಿ ಸೇವೆ
ಪೊರಬಂದರ್‌ನ ಪಾಲಿಟೆಕ್ನಿಕ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಪಡೆದಿದ್ದಾರೆ

ಭಗವಂತ್ ಖುಬಾ 
54 ವರ್ಷದ ಭಗವಂತ್ ಖುಬಾ ಕರ್ನಾಟಕದ ಬೀದರ್‌ನ ಲೋಕಸಭಾ ಸಂಸದರಾಗಿದ್ದಾರೆ
2 ನೇ ಅವಧಿಗೆ ಖೂಬಾ ಸಂಸದರಾಗಿ  ಸೇವೆ ಸಲ್ಲಿಸುತ್ತಿದ್ದಾರೆ
ಶ್ರೀ ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ

ಪಿಲ್ ಮೊರೇಶ್ವರ ಪಾಟೀಲ್
ಕಪಿಲ್  ಮಹಾರಾಷ್ಟ್ರದ ಭಿವಾಂಡಿಗೆ ಲೋಕಸಭಾ ಸಂಸದರಾಗಿದ್ದಾರೆ
60 ವರ್ಷದ ಕಪಿಲ್ ಮೊರೇಶ್ವರ  2 ನೇ ಬಾರಿ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಅಂಜುರ್ ಗ್ರಾಮ ಪಂಚಾಯತ್‌ನ ಸರ್ಪಂಚ್‌ನಿಂದ ಥಾಣೆ ಜಿಲಾ ಪರಿಷತ್‌ನ ಅಧ್ಯಕ್ಷರವರೆಗೆ ಜವಾಬ್ದಾರಿ ನಿಭಾಯಿಸಿದ್ದಾರೆ
ಮುಂಬೈ ವಿಶ್ವವಿದ್ಯಾಲಯದಿಂದ ಬಿಎ ಪದವಿ

ಪ್ರತಿಮಾ ಭೌಮಿಕ್
ಭೂಮಿಕ್, ತ್ರಿಪುರದ ತ್ರಿಪುರ ಪಶ್ಚಿಮಕ್ಕೆ ಲೋಕಸಭಾ ಸಂಸದರಾಗಿದ್ದಾರೆ
52 ವರ್ಷದ ಪ್ರತಿಮಾ ಭೂಮಿಕ್ ಮೊದಲ ಬಾರಿ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ತ್ರಿಪುರ ವಿಶ್ವವಿದ್ಯಾಲಯದ ಮಹಿಳಾ ಕಾಲೇಜಿನಿಂದ ಜೈವಿಕ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ

ಸುಭಾಶ್ ಸರ್ಕಾರ್
ಪಶ್ಚಿಮ ಬಂಗಾಳದ ಬಂಕುರಾಕ್ಕೆ ಲೋಕಸಭಾ ಸಂಸದರಾಗಿದ್ದಾರೆ
ಸ್ತ್ರೀರೋಗತಜ್ಞ ಮತ್ತು ಏಮ್ಸ್ ಕಲ್ಯಾಣಿಯ ಮಂಡಳಿಯ ಸದಸ್ಯರಾಗಿದ್ದಾರೆ
ಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ

ಬಿ ಕಿಶನ್ ರಾವ್ ಕರದ್
64 ವರ್ಷದ ಕಿಶನ್ ಮಹಾರಾಷ್ಟ್ರದ ರಾಜ್ಯಸಭಾ ಸಂಸದರಾಗಿದ್ದಾರೆ
ಔರಂಗಾಬಾದ್ ಮಹಾನಗರ ಪಾಲಿಕೆಯ ಮೇಯರ್ , ಮರಾಠವಾಡ ಕಾನೂನು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ
ವೃತ್ತಿಯಲ್ಲಿ ವೈದ್ಯರಾಗಿರುವ ಕಿಶನ್ ರಾವ್ ಕರದ್,  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ನಡೆಸುತ್ತಿದ್ದಾರೆ
 ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯ ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್, ಎಂಎಸ್ (ಜನರಲ್ ಸರ್ಜರಿ), ಎಂಸಿಎಚ್ (ಪೀಡಿಯಾಟ್ರಿಕ್ ಸರ್ಜರಿ) ಮತ್ತು ಎಫ್‌ಸಿಪಿಎಸ್ (ಜನರಲ್ ಸರ್ಜರಿ) ಪದವಿಗಳನ್ನು ಪಡೆದಿದ್ದಾರೆ.

ರಾಜ್‌ಕುಮಾರ್ ರಂಜನ್ ಸಿಂಗ್
ರಾಜ್‌ಕುಮಾರ್ ರಂಜನ್ ಸಿಂಗ್ ಅವರು ಮಣಿಪುರದ ಇನ್ನರ್ ಕ್ಷೇತ್ರದ ಲೋಕಸಭಾ ಸದಸ್ಯ
ಭೌಗೋಳಿಕ ಪ್ರಾಧ್ಯಾಪಕರಾಗಿ 4 ದಶಕಗಳ ಸುದೀರ್ಘ ವೃತ್ತಿಜೀವನದ ಅನುಭವ ಹೊಂದಿದ್ದಾರೆ
ಮಣಿಪುರ ವಿಶ್ವವಿದ್ಯಾಲಯದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿದ್ದರು
ಗೌವ್ಹಾಟಿ ವಿಶ್ವವಿದ್ಯಾಲಯಿಂದ ಭೌಗೋಳಿಕ ವಿಷಯದಲ್ಲಿ ಎಂ.ಎ ಮತ್ತು ಪಿಎಚ್‌ಡಿ ಪಡೆದಿದ್ದಾರೆ

Follow Us:
Download App:
  • android
  • ios