ಗಣಪತಿ ಉತ್ಸವದ ವೇಳೆ ಯುವಕನೊಬ್ಬ ಇಲ್ಲಿನ ಮೆರವಣಿಗೆಯಲ್ಲಿ ಬುರ್ಖಾ ಧರಿಸಿಕೊಂಡು ಕುಣಿದಾಡಿದ್ದು, ಅದರ ವಿಡಿಯೋ ಭಾರಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವೆಲ್ಲೂರು (ಸೆ.25): ಗಣಪತಿ ಉತ್ಸವದ ವೇಳೆ ಯುವಕನೊಬ್ಬ ಇಲ್ಲಿನ ಮೆರವಣಿಗೆಯಲ್ಲಿ ಬುರ್ಖಾ ಧರಿಸಿಕೊಂಡು ಕುಣಿದಾಡಿದ್ದು, ಅದರ ವಿಡಿಯೋ ಭಾರಿ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸೆ.21ರಂದು ಇಲ್ಲಿ ದೊಡ್ಡ ಗಣಪತಿ ಉತ್ಸವ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಅನಂತಕುಮಾರ್‌ ಎಂಬ ಯುವಕ ಬುರ್ಖಾ ಧರಿಸಿ ಕುಣಿದಿದ್ದಾನೆ. ಈತನ ಉದ್ದೇಶ ಕೋಮುಗಲಭೆ ಸೃಷ್ಟಿಸುವುದು ಆಗಿತ್ತು ಎಂದು ಗೊತ್ತಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದರು. ಇದರ ಬೆನಲ್ಲೇ ದೂರು ದಾಖಲಿಸಿಕೊಂಡ ಪೊಲೀಸರು ಅರುಣ್‌ಕುಮಾರ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ದ್ವೇಷ ಹರಡುವ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಮುಂದೆ ಎಸ್ಸೆಸ್ಸೆಲ್ಸಿ, ಪಿಯುಸಿಗೆ ವರ್ಷಕ್ಕೆ 3 ಪರೀಕ್ಷೆ, ಸರಕಾರದಿಂದ ಹೊಸ ಆದೇಶ

ದೂರಿನ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು ಮತ್ತು ಆರೋಪಿಯನ್ನು ವಿರುತ್ತಂಪಟ್ಟು ನಿವಾಸಿ ಅರುಣ್‌ಕುಮಾರ್ ಎಂದು ಗುರುತಿಸಲಾಗಿದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಮತ್ತು ಎರಡು ಗುಂಪುಗಳ ನಡುವೆ ಕೋಮು ದ್ವೇಷವನ್ನು ಉಂಟುಮಾಡುವ ಪ್ರಯತ್ನಕ್ಕಾಗಿ ಅರುಣ್‌ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರತಿಭಾವಂತ ಬಡ ವಿದ್ಯಾರ್ಥಿ ಅಲ್ಪೇಶ್ ವೈದ್ಯಕೀಯ ಕಾಲೇಜು ಪ್ರವೇಶ ಜಾತಿ

ರಾಜ್ಯದಲ್ಲಿ ಕೋಮುಗಲಭೆಗೆ ಯತ್ನಿಸುವವರ ವಿರುದ್ಧ ಕಠಿಣ ಎಚ್ಚರಿಕೆಯನ್ನೂ ನೀಡಿರುವುದಾಗಿ ವೆಲ್ಲೂರು ಪೊಲೀಸರು ತಿಳಿಸಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.