ಕೇರಳದಲ್ಲಿ ಬುರ್ಖಾ ಧರಿಸಿ ಓಡಾಡ್ತಿದ್ದವ ಖಾಕಿ ವಶಕ್ಕೆ

ಕೇರಳದ ಅರ್ಚಕನೋರ್ವ ಬುರ್ಖಾ ಧರಿಸಿ ಓಡಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಈತ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ ಆತನನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ.

burqa clad Kerala Man suspiciously wandering in Koyilandy junction, arrested and released akb

ತಿರುವನಂತಪುರಂ: ಕೇರಳದ ಅರ್ಚಕನೋರ್ವ ಬುರ್ಖಾ ಧರಿಸಿ ಓಡಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಈತ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ ಆತನನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಈ ವೇಳೆ ಪೊಲೀಸರು ಆತನಲ್ಲಿ ಆತನ ವೇಷ ಭೂಷಣದ ಬಗ್ಗೆ ವಿಚಾರಿಸಿದ್ದಾರೆ. ಏಕಾಗಿ ಈ ವೇಷ ಎಂದು ಕೇಳಿದ್ದಾರೆ. ಈ ವೇಳೆ ಆತ ತನಗೆ ಚಿಕನ್ ಪಾಕ್ಸ್ ಆಗಿದೆ.( ಚಿಕನ್ ಪಾಕ್ಸ್‌ನ್ನು ಮೈ ಮೇಲೆ ಅಮ್ಮ ಆಗಿರುವುದು, ಮೈ ಮೇಲೆ ಬೀಳುವುದು, ಮುಂತಾಗಿ ಗ್ರಾಮೀಣ ಆಡುನುಡಿಯಲ್ಲಿ ಕರೆಯುತ್ತಾರೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಂಭವಗಳಿವೆ.) ಹೀಗಾಗಿ ಬುರ್ಖಾ ಧರಿಸಿ ಓಡಾಡುತ್ತಿದ್ದಿದ್ದಾಗಿ ಆತ ಹೇಳಿದ್ದಾನೆ. ಆದರೆ ಆತನನ್ನು ಪೊಲೀಸರು ಬುರ್ಖಾ ಬಿಚ್ಚಿಸಿ ತಪಾಸಣೆ ಮಾಡಿದಾಗ ಅಂತಹ ಯಾವ ಲಕ್ಷಣಗಳು ಇರಲಿಲ್ಲ ಎಂದು ತಿಳಿದು ಬಂದಿದೆ.

ಹೀಗೆ ಬುರ್ಖಾ ಧರಿಸಿ ಓಡಾಡುತ್ತಿದ್ದ ವ್ಯಕ್ತಿಯನ್ನು 28 ವರ್ಷ ಪ್ರಾಯದ ಜಿಷ್ಣು ನಂಬೂದಿರಿ ಎಂದು ಗುರುತಿಸಲಾಗಿದೆ. ಆಕ್ಟೋಬರ್ 7 ರಂದು ಈ ಘಟನೆ ನಡೆದಿದ್ದಾಗಿ ಪೊಲೀಸರು ಹೇಳಿದ್ದಾರೆ. ಈ ಜಿಷ್ಣು ನಂಬೂದಿರಿ (Jishnu Namboothiri) ಕೋಜಿಕೋಡ್ ಜಿಲ್ಲೆಯ ಕೊಯಿಲಂಡಿಯ ಜಂಕ್ಷನ್ (Koyilandy junction) ಬಳಿ ಬುರ್ಖಾ (burqa) ಧರಿಸಿ ಬಿರ ಬಿರನೇ ಅನುಮಾನಾಸ್ಪದವಾಗಿ ಸಾಗುತ್ತಿದ್ದ. ಈತನನ್ನು ನೋಡಿದ ಸ್ಥಳೀಯ ಆಟೋ ಚಾಲಕರು (Auto drivers) ಅನುಮಾನಗೊಂಡು ಆತನನ್ನು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಬಳಿಕ ಆತನ ಮನೆಯವರನ್ನು ಠಾಣೆಗೆ ಕರೆಸಿದ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಗೌರಿಗೆ ಬುರ್ಖಾ ಧರಿಸಿ ಆಯೆಷಾ ಎಂದು ಹೆಸರು ಬದಲಾಯಿಸಲು ಹೇಳಿದ ಶಾರುಖ್!

ವಿಚಾರಣೆ ವೇಳೆ ಚಿಕನ್ ಫಾಕ್ಸ್ (chicken pox) ಇದ್ದಿದ್ದಕ್ಕೆ ಬುರ್ಖಾ ಧರಿಸಿದ್ದಾಗಿ ಆತ ಹೇಳಿದ್ದಾನೆ. ನಂತರ ಪೊಲೀಸರು (Police) ಆತನ ಬುರ್ಖಾ (Burqa) ಕಳಚಿ, ಆತನ ಹೆಸರು ವಿಳಾಸ ಪಡೆದು ಮನೆಯವರ ಜೊತೆ ಕಳುಹಿಸಿಕೊಟ್ಟಿದ್ದಾರೆ. ಈತ ಮೆಪ್ಪಯೂರ್‌ ದೇಗುಲವೊಂದರಲ್ಲಿ ಅರ್ಚಕನಾಗಿ (temple priest) ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಯಾವುದೇ ಅಪರಾಧ ದಾಖಲೆಗಳಿಲ್ಲ. ಹೀಗಾಗಿ ಆತನ ಮನೆಯವರು ಬರುತ್ತಿದ್ದಂತೆ ಆತನನ್ನು ಬಿಟ್ಟು ಕಳುಹಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. 

ಹೀಗೆ ಯುವಕರು ಬುರ್ಖಾ ಧರಿಸಿ ಓಡಾಡಿ ಸಿಕ್ಕಿ ಬೀಳುತ್ತಿರುವುದು ಹೊಸದೇನಲ್ಲ.  ಸ್ವಲ್ಪ ದಿನಗಳ ಹಿಂದೆ ವಿಜಯಪುರದ ಆಲಮಟ್ಟಿ ಡ್ಯಾಂ ಬಳಿ ಬುರ್ಖಾ ಧರಿಸಿ ಓಡಾಡ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಈತ ಆಲಮಟ್ಟಿ ಡ್ಯಾಂ ಬಳಿ ಓಡಾಡುತ್ತಾ ಪೊದೆಯ ಬಳಿ ಹೋಗಿ ಲಿಪ್‌ಸ್ಟಿಕ್ ಹಾಕಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಆತನನ್ನು ಹಿಡಿದು ಕೊಟ್ಟಿದ್ದರು. ಇದೊಂದೇ ಅಲ್ಲ ಕೆಲ ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಪ್ರಿಯಕರನೋರ್ವ ಬುರ್ಖಾಧರಿಸಿ ಹೋಗಿ ಜನರ ಕೈಗೆ ಸಿಕ್ಕಿಬಿದ್ದಿದ್ದ.

 ಬುರ್ಖಾ ಧರಿಸಿ ಬಂದ ಯುವತಿಯರನ್ನು ಬೆತ್ತ ಹಿಡಿದು ಓಡಿಸಿದ ಪ್ರಾಂಶುಪಾಲ!

ಶಹಜಾಹಾನ್ಪುರದ ಸೈಫ್ಅಲಿ ಎಂಬಾತ ಬುರ್ಖಾ ಧರಿಸಿ ತನ್ನ ಪ್ರೇಯಸಿ ಭೇಟಿಗೆ ಹೋಗಿದ್ದ. ಬೇರೆಡೆ ಉದ್ಯೋಗ ನಿಮಿತ್ತ ಹೋಗುವವನಿದ್ದ ಕಾರಣ ಕೊನೆಯ ಬಾರಿ ಗೆಳತಿಯ ನೋಡಲು ಬುರ್ಖಾ ಧರಿಸಿ ಹೊರಟಿದ್ದ ಆತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಗೆಳತಿಯ ಸಲಹೆ ಮೇರೆಗೆ ತಾನು ಹೀಗೆ ಮಾಡಿದ್ದಾಗಿ ಆತ ಪೊಲೀಸರ ಬಳಿ ಹೇಳಿಕೊಂಡಿದ್ದ. 

Latest Videos
Follow Us:
Download App:
  • android
  • ios