Asianet Suvarna News Asianet Suvarna News

ಮುಂಬೈನಲ್ಲಿ ಕಟ್ಟಡ ಕುಸಿತ: 19 ಜನರ ಸಾವು ದಾರುಣ ಸಾವು

ಮುಂಬೈಯ ಕುರ್ಲಾ ಪ್ರದೇಶದಲ್ಲಿ ಮಧ್ಯರಾತ್ರಿ 4 ಮಹಡಿಯ ಕಟ್ಟಡ ಕುಸಿದಿದ್ದು, 19 ಜನರು ಮೃತಪಟ್ಟಿದ್ದಾರೆ ಹಾಗೂ 13 ಜನರಿಗೆ ಗಂಭೀರ ಗಾಯಗಳಾಗಿವೆ.

Building Collapses in Mumbai 19 Dead akb
Author
Mumbai, First Published Jun 29, 2022, 9:04 AM IST | Last Updated Jun 29, 2022, 9:34 AM IST

ಮುಂಬೈ: ಮುಂಬೈಯ ಕುರ್ಲಾ ಪ್ರದೇಶದಲ್ಲಿ ಮಧ್ಯರಾತ್ರಿ 4 ಮಹಡಿಯ ಕಟ್ಟಡ ಕುಸಿದಿದ್ದು,  ಕಟ್ಟಡದಡಿ ಸಿಲುಕಿ 19 ಜನರು ಮೃತಪಟ್ಟಿದ್ದಾರೆ ಹಾಗೂ 13 ಜನರಿಗೆ ಗಂಭೀರ ಗಾಯಗಳಾಗಿವೆ. ನಾಯ್ಕ್‌ ನಗರ ಸೊಸೈಟಿಗೆ ಸೇರಿದ ಕಟ್ಟಡವು ಕುಸಿದ ಬೆನ್ನಲ್ಲೇ ಇದೇ ಸೊಸೈಟಿಯಲ್ಲಿರುವ ಶಿಥಿಲವಾಗಿರುವ ಇನ್ನೊಂದು ಕಟ್ಟಡವನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆಯವರು ಮುನ್ನೆಚ್ಚರಿಕೆ ಕ್ರಮವಾಗಿ ತೆರವುಗೊಳಿಸಿದ್ದಾರೆ. ‘

ಕಟ್ಟಡವು ಶಿಥಿಲವಾದ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವಂತೆ ಹಲವಾರು ಬಾರಿ ನಿವಾಸಿಗಳಿಗೆ ಸೂಚಿಸಲಾದರೂ ಜನರು ಅಲ್ಲಿ ವಾಸಿಸುತ್ತಿದ್ದರು. ಕಟ್ಟಡ ಕುಸಿತವಾದ ಬಳಿಕ ಸುಮಾರು 23 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ 14 ಜನರು ಮೃತಪಟ್ಟಿದ್ದಾರೆ. ಉಳಿದ 4 ಜನರು ಇನ್ನೂ ಆಸ್ಪತ್ರೆಯಲ್ಲಿದ್ದು, 9 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಕಟ್ಟಡದಡಿ ಸಿಲುಕಿ ಗಾಯಗೊಂಡವರನ್ನು ರಾಜ್ವಾಡಿಯ ಸರ್ಕಾರಿ ಹಾಗೂ ಸಿಯೋನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೃತರನ್ನು 28 ವರ್ಷ ಪ್ರಾಯದ ಅಜಯ್‌ ಪಸ್ಪೊರ್ (Ajay Paspor), 20 ವರ್ಷ ಪ್ರಾಯದ ಕಿಶೋರ್ ಪ್ರಜಾಪತಿ ( Kishor Prajapati), 21 ವರ್ಷ ಪ್ರಾಯದ ಸಿಕಂದರ್‌ ರಾಜ್ಭರ್‌ ( Sikandar Rajbhar), 19 ವರ್ಷ ಪ್ರಾಯದ ಅರವಿಂದ್ ರಾಜೇಂದ್ರ ಭಾರತಿ (Arvind Rajendra Bharati), 18 ವರ್ಷ ಪ್ರಾಯದ (Anup Rajbhar), 21 ವರ್ಷ ಪ್ರಾಯದ ಅನಿಲ್‌ ಯಾದವ್‌ (Anil Yadav), 18 ವರ್ಷ ಪ್ರಾಯದ ಶ್ಯಾಮ್ ಪ್ರಜಾಪತಿ (Shyam Prajapati), 34 ವರ್ಷ ಪ್ರಾಯದ ಅಜಿಂಕ್ಯಾ ಗಾಯಕ್‌ವಾಡ್‌ (Ajinkya Gaikwad), 60 ವರ್ಷ ಪ್ರಾಯದ ಲೀಲಾಬಾಯಿ ಗಾಯಕ್‌ವಾಡ್‌ (Leelabai Gaikwad), 50 ವರ್ಷ ಪ್ರಾಯದ ರಮೇಶ್ ಬಡಿಯಾ(Ramesh Badiya), 65 ವರ್ಷ ಪ್ರಾಯದ ಪ್ರಹ್ಲಾದ್ ಗಾಯಕ್ವಾಡ್‌ (Pralhad Gaikwad) 22 ವರ್ಷ ಪ್ರಾಯದ (Guddu Paspor) ಹಾಗೂ ಇಬ್ಬರು ಕ್ರಮವಾಗಿ ಅಂದಾಜು 30 ಹಾಗೂ 35 ವರ್ಷ ಪ್ರಾಯದ ಅಪರಿಚಿತರು ಈ ದುರಂತದಲ್ಲಿ ಪ್ರಾಣ ಬಿಟ್ಟಿದ್ದಾರೆ. 

ಕುಸಿಯುವ ಭೀತಿಯಲ್ಲಿದೆ 3 ಅಂತಸ್ತಿನ ಕಟ್ಟಡ, ನೊಟೀಸ್ ಕೊಟ್ಟರೂ ಮಾಲಿಕ ಡೋಂಟ್‌ಕೇರ್ 

ರಮೇಶ್ ಎಂಬುವವರ ಪತ್ನಿ ಹಾಗೂ ಮಗ ಗಾಯಗೊಂಡ ಸ್ಥಿತಿಯಲ್ಲಿ ಅವಶೇಷಗಳಡಿ ಸಿಲುಕಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ 11.30ರ ಸುಮಾರಿಗೆ ಕಟ್ಟಡ ಅಲುಗಿದಂತಾಗಿದ್ದು, ಜನ ಪ್ರಾರಂಭದಲ್ಲಿ ಭೂಕಂಪವಾಗುತ್ತಿದೆ ಎಂದು ಭಾವಿಸಿದ್ದರು. 

ಜೋರಾಗಿ ಸದ್ದು ಕೇಳಿಸಿತ್ತು, ಸ್ವಲ್ಪ ಹೊತ್ತಿನಲ್ಲಿ ಧೂಳು ಆಕಾಶದೆತ್ತರಕ್ಕೆ ಏರಿತ್ತು ಎಂದು ಕುಸಿದ ಕಟ್ಟಡವಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.  ಪ್ರಾರಂಭದಲ್ಲಿ ನಾವಿದನ್ನು ಭೂಕಂಪನ ಎಂದು ಭಾವಿಸಿದ್ದೆವು. ಸ್ವಲ್ಪ ಹೊತ್ತಿನ ನಂತರ ಯಾರೂ ಸಿಲಿಂಡರ್ ಸ್ಪೋಟಗೊಂಡಿದೆ ಎಂದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಕಟ್ಟಡ ಕುಸಿದಿದ್ದು ನಮಗೆ ತಿಳಿಯಿತು ಎಂದು ಬಾಂನ್ಸೊಡೆ ಎಂಬುವವರು ಹೇಳಿದರು. 

ಐದು ದಶಕಗಳ ಹಿಂದಿನ ಕಟ್ಟಡ ಇದಾಗಿದ್ದು, ಒಂಭತ್ತು ವರ್ಷಗಳ ಹಿಂದೆಯೇ ಮುಂಬೈ ನಗರ ಪಾಲಿಕೆಯಿಂದ ಇದನ್ನು ಶಿಥಿಲಗೊಂಡಿದೆ ಎಂದು ಗುರುತಿಸಲಾಗಿತ್ತು. ಆದಾಗ್ಯೂ 2016 ರಲ್ಲಿ ರಚನಾತ್ಮಕ ಆಡಿಟ್ ನಡೆದು ಕಟ್ಟಡ ರಿಪೇರಿಯಾಗಿದೆ ಎಂದು ವರದಿ ಬಂದಿತ್ತು.   ಸ್ಥಳಕ್ಕೆ ಭೇಟಿ ನೀಡಿರುವ ಬಿಎಂಸಿ ಕಮೀಷನರ್ ಐಎಸ್ ಚಹಾಲ್ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios