ಸಾಹಸಸಿಂಹ ವಿಷ್ಣುವರ್ಧನ್ ಅವರ ಸಿನಿಮಾದಲ್ಲಿ ಬಾತುಕೋಳಿಗಳಿಗೆ ಎಂಬಿಬಿಎಸ್ ಮಾಡಿಸಲು ದೊಡ್ಡಣ್ಣ ಹೋಗುತ್ತಿರುತ್ತಾರೆ. ಆದರೆ, ಇದೀಗ ಅವರ ಮಾತನ್ನು ನಿಜ ಮಾಡಲು ಎಮ್ಮೆಯೊಂದು ಕಾಲೇಜಿಗೆ ಬಂದಿದೆ.
ಸಾಹಸಸಿಂಹ ವಿಷ್ಣುವರ್ಧನ್ ಅವರ ಸೂರ್ಯವಂಶ ಸಿನಿಮಾದಲ್ಲಿ ದೊಡ್ಡಣ್ಣ ಅವರೊಂದಿಗೆ ಹೋಗುವಾಗ ನಾಯಕಿಯ ಕಾರಿಗೆ ಅಡ್ಡಬಂದ ಬಾತುಕೋಳಿ ವಿಚಾರವಾಗಿ ಮಾತನಾಡುತ್ತಾ ಅವುಗಳನ್ನು ಎಂಬಿಬಿಎಸ್ ಮಾಡಿಸಲು ಕರೆದೊಯ್ಯುವುದಾಗಿ ತಿಳಿಸುತ್ತಾರೆ. ಇದೀಗ ದೊಡ್ಡಣ್ಣ ಅವರ ಮಾತನ್ನು ರಿಯಲ್ ನಿಜ ಮಾಡುವುದಕ್ಕೆ ಎಮ್ಮೆಯೊಂದು ಕಾಲೇಜಿಗೆ ಬಂದಿದೆ.
ವಿವಿಧ ರೀತಿಯ ಹಲವಾರು ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಮುಂದೆ ಬರುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. doaba_x08 ಎಂಬ ಬಳಕೆದಾರರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಎಮ್ಮೆ ಕ್ಲಾಸ್ ರೂಮಿನೊಳಗೆ ನುಗ್ಗಿ ಬರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಒಂದು ಕಾಲೇಜಿಗೆ ಎಮ್ಮೆಯ ಅನಿರೀಕ್ಷಿತ ಪ್ರವೇಶ ಆಗಿದ್ದು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಇದನ್ನು ಕಂಡು ದಂಗಾಗಿದ್ದಾರೆ.
ಈ ವಿಡಿಯೋದಲ್ಲಿ ಕಾಣುವುದು ಕಾಲೇಜು. ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಗಳು ಕುಳಿತಿರುವುದನ್ನೂ ವಿಡಿಯೋದಲ್ಲಿ ಕಾಣಬಹುದು. ಇದ್ದಕ್ಕಿದ್ದಂತೆ ಒಂದು ಎಮ್ಮೆ ಒಳಗೆ ಬರುತ್ತದೆ. ವಿದ್ಯಾರ್ಥಿಗಳೆಲ್ಲರೂ ದಿಗ್ಭ್ರಮೆಗೊಳ್ಳುತ್ತಾರೆ. ಆಗ ಒಬ್ಬ ವಿದ್ಯಾರ್ಥಿ ಎಮ್ಮೆಯನ್ನು ಹಿಡಿದು ಹೊರಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ. ಕುತ್ತಿಗೆಯಲ್ಲಿರುವ ಹಗ್ಗವನ್ನು ಹಿಡಿದು ವಿದ್ಯಾರ್ಥಿ ಎಮ್ಮೆಯನ್ನು ಹೊರಗೆ ಕರೆದುಕೊಂಡು ಹೋಗುತ್ತಾನೆ. ಮುಂದುವರೆದು ಕಾಲೇಜು ಆವರಣದ ಮೂಲಕ ವಿದ್ಯಾರ್ಥಿ ಎಮ್ಮೆಯೊಂದಿಗೆ ಹೊರಗೆ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಭಕ್ತರಿಗಾಗಿ ಸಿದ್ಧಪಡಿಸಿದ್ದ ಪ್ರಸಾದದಲ್ಲಿ ಬೂದಿ, ಮಣ್ಣು ಹಾಕಿದ ಪೊಲೀಸ್; ಶಾಪ ಹಾಕಿದ ಜನರು
ಎಮ್ಮೆ ಯಾರಿಗೂ ತೊಂದರೆಯನ್ನಿ ಕೊಟ್ಟಿಲ್ಲ. ಅದನ್ನು ವಿದ್ಯಾರ್ಥಿಯೊಬ್ಬ ಹಿಡಿದುಕೊಂಡು ಹೋಗುವಾಗಲೂ ವಿರೋಧಿಸದೇ ಅವರ ಹಿಂದೆಯೇ ಹೊರಗೆ ಹೋಗುವುದನ್ನೂ ವಿಡಿಯೋದಲ್ಲಿ ಕಾಣಬಹುದು. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲರೂ ಕುತೂಹಲದಿಂದ ಈ ದೃಶ್ಯವನ್ನು ವೀಕ್ಷಿಸುತ್ತಾರೆ. ಎಮ್ಮೆಯೂ ಕೂಡ ಎಲ್ಲರನ್ನೂ ಅಚ್ಚರಿಯಿಂದ ನೋಡುತ್ತದೆ.
ಇನ್ನು ಎಮ್ಮೆ ಕಾಳೇಜಿನ ತರಗತಿ ಕೋಣೆಯೊಳಗೆ ಹೋಗಿರುವ ವಿಡಿಯೋ ಹಂಚಿಕೊಮಡ ನೆಟ್ಟಿಗರು ಎಮ್ಮೆ ಕಾಳೇಜಿಗೆ ಪ್ರವೇಶ ಪಡೆಯಲು ಬಂದಿದ್ದಾಳೆ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋವನ್ನು ಸುಮಾರು 2 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಲವರು ವಿಡಿಯೋಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬುದ್ಧಿ ಇಲ್ಲದವರನ್ನು ಎಮ್ಮೆಗೆ ಹೋಲಿಸಲಾಗುತ್ತದೆ. ಆದರೆ, ಈಗ ಎಮ್ಮೆಯೇ ಜ್ಞಾನ ಪಡೆಯಲು ಕಾಲೇಜಿಗೆ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅತ್ತೆ-ಸೊಸೆ ಮೊಟ್ಟೆ ಕಥೆಯಲ್ಲಿ ಇಂಗು ತಿಂದ ಮಂಗನಾದ ಬಡಪಾಯಿ ಗಂಡ; ವಿಡಿಯೋ ನೋಡಿ
ಘಟನೆಯ ನೋಡಿದರೆ ಎಮ್ಮೆಯನ್ನು ಮಾಲೀಕರು ಕಾಲೇಜಿನ ಸುತ್ತಲಿನ ಆವರಣದಲ್ಲಿ ಮೇಯಲು ಬಿಟ್ಟಿರಬಹುದು. ಆಗ ಮೇಯುತ್ತಾ ಕಾಲೇಜು ಆವರಣದಲ್ಲಿದ್ದ ಗಿಡ,ಗಂಟಿಗಳನ್ನು ತಿನ್ನುತ್ತಾ ಅದನ್ನು ಓಡಿಸಲು ಮುಂದಾದಾಗ ಸೀದಾ ತರಗತಿ ಕೋಣೆಯೊಳಗೆ ನುಗ್ಗಿರಬಹುದು. ಇನ್ನು ಬಹುತೇಕ ಎಮ್ಮೆಗಳು ಸಾಧು ಪ್ರಾಣಿಗಳಾಗಿದ್ದು, ಇಲ್ಲಿನ ವಿದ್ಯಾರ್ಥಿಯು ಕೂಡ ಇದೇ ಧೈರ್ಯದಿಂದ ಎಮ್ಮೆಯ ಕತ್ತಿನಲ್ಲಿದ್ದ ಹಗ್ಗವನ್ನು ಹಿಡಿದುಕೊಂಡ ಹೊರಗೆ ಎಳೆದುಕೊಂಡು ಹೋಗಿದ್ದಾನೆ. ಎಮ್ಮೆ ಕಾಲೇಜಿನ ತರಗತಿ ಕೋಣೆಯೊಳಗೆ ಬಂದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.
