Asianet Suvarna News Asianet Suvarna News

ಲಕ್ನೋ ಜೈಲಿಗೆ ಮಾಫಿಯಾ ಡಾನ್ ಸ್ಥಳಾಂತರ: ತಂದೆಯ ಸುರಕ್ಷತೆ ಬಗ್ಗೆ ಮಗನ ಆತಂಕ

  • ಜೈಲಿನಲ್ಲಿರುವ ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿ
  • ನ್ಯಾಯಾಲಯದ ವಿಚಾರಣೆಗಾಗಿ ಲಕ್ನೋ ಜೈಲಿಗೆ ಸ್ಥಳಾಂತರ
  • ತಂದೆಯ ಸುರಕ್ಷತೆ ಬಗ್ಗೆ ಮಗನ ಆತಂಕ
BSP MLA and jailed mafia don Mukhtar Ansari being shifted to Lucknow jail from Banda; son fears akb
Author
Bangalore, First Published Mar 28, 2022, 3:38 PM IST

ಲಕ್ನೋ(ಮಾ28): ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ಮತ್ತು ಜೈಲಿನಲ್ಲಿರುವ ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿಯನ್ನು ಇಂದು(ಮಾ28) ನ್ಯಾಯಾಲಯದ ವಿಚಾರಣೆಗಾಗಿ ಲಕ್ನೋ ಜೈಲಿಗೆ ವರ್ಗಾಯಿಸಲಾಗುತ್ತಿದೆ. ಒಂದು ವರ್ಷದ ಹಿಂದೆ ಅವರನ್ನು ಪಂಜಾಬ್‌ನ ರೋಪರ್‌ನಿಂದ (Ropar) ಉತ್ತರಪ್ರದೇಶದ (Uttar Pradesh) ಬಂದಾ (Bandha) ಜೈಲಿಗೆ ಕರೆತರಲಾಗಿತ್ತು.

ನ್ಯಾಯಾಂಗ ಪ್ರಕ್ರಿಯೆಯ ಭಾಗವಾಗಿ ಜೈಲು ಆಡಳಿತ ಮತ್ತು ಜಿಲ್ಲಾ ಪೊಲೀಸರು ಮುಖ್ತಾರ್ ಅನ್ಸಾರಿಯನ್ನು ಬಂದಾ ಜೈಲಿನಿಂದ ಲಕ್ನೋಗೆ (Lacknow) ಕರೆದೊಯ್ಯುತ್ತಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿ ಅಕ್ರಮವಾಗಿ ಆಸ್ತಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಖ್ತಾರ್ ಅನ್ಸಾರಿ ಲಕ್ನೋ ನ್ಯಾಯಾಲಯಕ್ಕೆ ಹಾಜರಾಗಲಿದ್ದಾನೆ. ಇಂದು ಮುಂಜಾನೆ ಬಿಗಿ ಭದ್ರತೆಯ ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ಮುಖ್ತಾರ್‌ನನ್ನು ಬಂದಾ ಜೈಲಿನಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಈತನನ್ನು  ರಸ್ತೆ ಮೂಲಕ ಲಕ್ನೋಗೆ ಸಾಗಿಸಲಾಗುತ್ತಿದೆ.

 

ಬೆಳಗ್ಗೆ 10:40 ರ ಸುಮಾರಿಗೆ, ಗ್ಯಾಂಗ್‌ಸ್ಟಾರ್‌/ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರನ್ನು ಲಕ್ನೋಗೆ ಸಾಗಿಸುತ್ತಿದ್ದ ವಾಹನವು ಬಂದಾದಲ್ಲಿ ಕೆಟ್ಟುಹೋಯಿತು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಏತನ್ಮಧ್ಯೆ, ಮುಖ್ತಾರ್ ಅನ್ಸಾರಿಯವರ ಪುತ್ರ ಮತ್ತು ಹೊಸದಾಗಿ ಚುನಾಯಿತ ಶಾಸಕನಾಗಿರುವ ಅಬ್ಬಾಸ್ ಬಿನ್ ಮುಖ್ತಾರ್ ಅನ್ಸಾರಿ (Abbas Bin Mukhtar Ansari) ಅವರು ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ಈ ವಿಚಾರ ತಿಳಿಸಿದ್ದು, ಸಾರಿಗೆ ಸಮಯದಲ್ಲಿ ತಮ್ಮ ತಂದೆಯ ಸುರಕ್ಷತೆಯ ಬಗ್ಗೆ ಚಿಂತೆ ಆಗಿರುವುದಾಗಿ ಹೇಳಿದರು.

Asianet Suvarna News Impact ಮಂಗಳೂರು ಭೂ ಮಾಫಿಯಾದ ಬಿಲ್ಡರ್ ವಿರುದ್ದ FIR

ಯಾವುದೇ ಪೂರ್ವ ಮಾಹಿತಿಯಿಲ್ಲದೆ ಈ ಸ್ಥಳಾಂತರ ಏಕೆ ನಡೆಯುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ನನ್ನ ತಂದೆಯನ್ನು ಲಕ್ನೋಗೆ ಸ್ಥಳಾಂತರಿಸುವ ಸಿದ್ಧತೆ ಭಾನುವಾರ ತಡರಾತ್ರಿಯಿಂದಲೇ ಪ್ರಾರಂಭವಾಯಿತು ಎಂದು ನಮಗೆ ತಿಳಿದು ಬಂದಿದೆ ಎಂದು ಅವರು ಹೇಳಿದರು.
ಭಾನುವಾರ ಬಾರಾಬಂಕಿ (Barabanki) ಪೊಲೀಸರು ಮುಖ್ತಾರ್ ಮತ್ತು ಅವರ 12 ಸಹಚರರ ವಿರುದ್ಧ ದರೋಡೆಕೋರ ಕಾಯಿದೆಯಡಿ ಪ್ರಕರಣ ದಾಖಲಿಸಿರುವುದನ್ನು ಇಲ್ಲಿ ಗಮನಿಸಬಹುದು. ಅನ್ಸಾರಿಯನ್ನು  ಸಾಗಿಸಲು ಆಂಬ್ಯುಲೆನ್ಸ್ ಅನ್ನು ಬಳಸಿದ ಪ್ರಕರಣದಲ್ಲಿ ಮೌ(Mau), ಘಾಜಿಪುರ(Ghazipur), ಲಕ್ನೋ ಮತ್ತು ಪ್ರಯಾಗ್‌ರಾಜ್‌ನ (Prayagraj) ಇತರ 12 ಮಂದಿಯನ್ನು ಹೆಸರಿಸಲಾಗಿದೆ.

ಈ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿ ಅವರನ್ನು ರೋಪರ್ ಜೈಲಿನಿಂದ ಮೊಹಾಲಿಯ ನ್ಯಾಯಾಲಯಕ್ಕೆ ಸಾಗಿಸಲು ಬಳಸಿದ ಆಂಬ್ಯುಲೆನ್ಸ್  ಪ್ರಕರಣವನ್ನು ನಕಲಿ ದಾಖಲೆಗಳನ್ನು ಬಳಸಿ ದಾಖಲಿಸಲಾಗಿತ್ತು. ಆಂಬ್ಯುಲೆನ್ಸ್ ಬಾರಾಬಂಕಿ ನೋಂದಣಿ ಸಂಖ್ಯೆಯನ್ನು ಹೊಂದಿದೆ ಎಂದು ತಿಳಿದಾಗ, ಯುಪಿ ಪೊಲೀಸರು ಮಾರ್ಚ್ 2021ರಲ್ಲಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು.

Tumakuru: ಹಾಡಹಗಲೇ ನಡೆಯುತ್ತೆ ಮಣ್ಣು ಮಾಫಿಯಾ: ಪ್ರಶ್ನಿಸಿದವರಿಗೆ ಜೀವಬೆದರಿಕೆ
ಪ್ರಾಥಮಿಕ ತನಿಖೆಯ ಭಾಗವಾಗಿ, ಆಂಬ್ಯುಲೆನ್ಸ್ ನೋಂದಣಿಗಾಗಿ ಸಲ್ಲಿಸಿದ ಮತದಾರರ ಗುರುತಿನ ಚೀಟಿಗಳು ಮತ್ತು ಪ್ಯಾನ್ ಕಾರ್ಡ್‌ಗಳಂತಹ (Pancard) ದಾಖಲೆಗಳನ್ನು ನಕಲಿ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಏಪ್ರಿಲ್ 02 ರಂದು, ಅನ್ಸಾರಿ ಮತ್ತು ಅವರ ಸಹಚರರ ವಿರುದ್ಧ ಬಾರಾಬಂಕಿಯ ಕೊತ್ವಾಲಿ (Kotwali) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 

Follow Us:
Download App:
  • android
  • ios