Punjab: ಡ್ರೋನ್‌ನಲ್ಲಿ ಆರ್‌ಡಿಎಕ್ಸ್‌, ಬಾಂಬ್‌ ತಯಾರಿಕೆ ಸಾಧನ ಕಳಿಸಿದ ಪಾಕಿಸ್ತಾನ

ಪಂಜಾಬ್‌ ಗಡಿ ಪ್ರದೇಶಕ್ಕೆ ಪಾಕಿಸ್ತಾನವು ಡ್ರೋನ್‌ ಮೂಲಕ ಕಳಿಸಿದ 4 ಕೇಜಿ ಆರ್‌ಡಿಎಕ್ಸ್‌ ಸ್ಪೋಟಕ, ಒಂದು ಪಿಸ್ತೂಲು ಹಾಗೂ 2 ಪ್ಯಾಕೆಟ್‌ಗಳಲ್ಲಿ ಸುತ್ತಿ ಇರಿಸಿದ್ದ ಬಾಂಬ್‌ ತಯಾರಕ ಸಾಧನಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಜಪ್ತಿ ಮಾಡಿದೆ.

BSF foils Pakistan drone bid to smuggle drugs pistol into Punjab gvd

ನವದೆಹಲಿ/ಅಮೃತಸರ (ಫೆ.10): ಪಂಜಾಬ್‌ (Punjab) ಗಡಿ ಪ್ರದೇಶಕ್ಕೆ ಪಾಕಿಸ್ತಾನವು (Pakistan) ಡ್ರೋನ್‌ (Drone) ಮೂಲಕ ಕಳಿಸಿದ 4 ಕೇಜಿ ಆರ್‌ಡಿಎಕ್ಸ್‌ (RDX) ಸ್ಪೋಟಕ, ಒಂದು ಪಿಸ್ತೂಲು (Pistol) ಹಾಗೂ 2 ಪ್ಯಾಕೆಟ್‌ಗಳಲ್ಲಿ ಸುತ್ತಿ ಇರಿಸಿದ್ದ ಬಾಂಬ್‌ ತಯಾರಕ ಸಾಧನಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಜಪ್ತಿ ಮಾಡಿದೆ.

ಪಾಕಿಸ್ತಾನಕ್ಕೆ ಹೊಂದಿಕೊಂಡ ಪಂಜಾಬ್‌ನ ಗುರುದಾಸಪುರ ಗಡಿಯಲ್ಲಿ ಮಂಗಳವಾರ ತಡರಾತ್ರಿ 1 ಗಂಟೆಗೆ ಈ ಡ್ರೋನ್‌ ಪತ್ತೆ ಆಯಿತು. ಶಬ್ದದ ಆಧಾರದ ಮೇರೆಗೆ ಗಡಿಯಿಂದ 2.7 ಕಿ.ಮೀ. ಒಳಗೆ ಡ್ರೋನ್‌ ಪತ್ತೆ ಮಾಡಲಾಯಿತು. ಕೂಡಲೇ ಅದರ ಮೇಲೆ ಪಡೆಗಳು ಗುಂಡು ಹಾರಿಸಿದವು. ಆದರೆ ಡ್ರೋನ್‌ ಕೆಲ ವಸ್ತು ಎಸೆದು ಪಾಕ್‌ಗೆ ಪರಾರಿ ಆಯಿತು ಎಂದು ಬಿಎಸ್‌ಎಫ್‌ ಹೇಳಿದೆ.

ಆಗ ಬಿಎಸ್‌ಎಫ್‌ (BSF) ಶೋಧ ಕಾರಾರ‍ಯಚರಣೆ ನಡೆಸಿದಾಗ ಘಗ್ಗರ್‌ ಹಾಗೂ ಸಿಂಫಾಲ್‌ ಗ್ರಾಮದ ನಡುವಿನ ಗೋಧಿ ಹೊಲದಲ್ಲಿ ಡ್ರೋನ್‌ ಎಸೆದ ವಸ್ತುಗಳು ಪತ್ತೆ ಆಗಿವೆ. 2 ಹಳದಿ ಬಣ್ಣದ ಪ್ಯಾಕೆಟ್‌ನಲ್ಲಿ 4.7 ಕೇಜಿ ಆರ್‌ಡಿಎಕ್ಸ್‌, ಒಂದು ಚೀನಾ ನಿರ್ಮಿತ ಪಿಸ್ತೂಲು, 22 ಬುಲೆಟ್‌ ಇದ್ದ 2 ಮ್ಯಾಗಜೀನ್‌ಗಳು, 3 ಎಲೆಕ್ಟ್ರಾನಿಕ್‌ ಡೆಟೋನೇಟರ್‌, 1 ಟೈಮರ್‌, ಸ್ಪೋಟಕ ವೈರ್‌, ಸೆಲ್‌ಗಳು, ಸ್ಕೂ್ರ, ಸ್ಟೀಲ್‌ ಕಂಟೇನರ್‌, ನೈಲಾನ್‌ ದಾರ, ಪ್ಲಾಸ್ಟಿಕ್‌ ಪೈಪ್‌, ಪ್ಯಾಕಿಂಗ್‌ ಸಾಧನ ಹಾಗೂ 1 ಲಕ್ಷ ರು. ನಗದು ಸಿಕ್ಕಿವೆ.

Trade with Pak: ಪಂಜಾಬ್‌ ಅಭಿವೃದ್ಧಿಗೆ ಪಾಕ್‌ ಜೊತೆ ಸ್ನೇಹ ಬೆಳೆಸಿ ಎಂದ ಸಿಧು

ಇವು ಸುಧಾರಿತ ಸ್ಪೋಟಕ (ಐಇಡಿ) ಅಥವಾ ಬಾಂಬ್‌ ತಯಾರಿಸಲು ಬಳಸುವ ಸಾಧನಗಳು. ಇತ್ತೀಚೆಗೆ ಲೂಧಿಯಾನ ಹಾಗೂ ದಿಲ್ಲಿಯ ಗಾಜಿಪುರದಲ್ಲಿ ಸಿಕ್ಕ ಬಾಂಬ್‌ಗಳಲ್ಲಿ ಇದೇ ಅಂಶಗಳಿದ್ದವು ಎಂದು ಬಿಎಸ್‌ಎಫ್‌ ಅಧಿಕಾರಿಗಳು ಹೇಳಿದ್ದಾರೆ.

IED ಬಾಂಬ್ ಹಾಕಿದ ಪಾಕಿಸ್ತಾನ ಶಂಕಿತ ಡ್ರೋನ್: ಭಾರತದ ಗಡಿ ಭಾಗದಲ್ಲಿ ಡ್ರೋನ್ ಆತಂಕ ಹೆಚ್ಚಾಗುತ್ತಿದೆ. ಏರ್‌ಬೇಸ್ ಮೇಲಿನ ಡ್ರೋನ್ ದಾಳಿ ಬಳಿಕ ಭಾರತ ಮತ್ತಷ್ಟು ಎಚ್ಚೆತ್ತುಕೊಂಡಿದೆ. ಇದರ ನಡುವೆ ಇದೀಗ ಪಂಜಾಬ್‌ನ ಅಮೃತಸರದ ದಾಲೇಕೆ ಗ್ರಾಮಕ್ಕೆ ಡ್ರೋನ್ ಮೂಲಕ IED ಸ್ಪೋಟಕ ಹಾಕಲಾಗಿದೆ. ಇದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಪಂಜಾಬ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅನುಮಾನಗಳಿಗೆ ಹಲವು ಸಾಕ್ಷ್ಯಗಳನ್ನು ಪೊಲೀಸರು ನೀಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಬಳಿ ಉಗ್ರ ಚಟುವಚಿಕೆಗಳು ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಇದೀಗ ಪಂಜಾಬ್‌ನ ಅಮೃತಸರದಲ್ಲಿ ವಶಪಡಿಸಿಕೊಳ್ಳಾದ ಟಿಫಿನ್ ಬಾಕ್ಸ್‌ ಒಳಗಿಟ್ಟ ಸ್ಫೋಟಕ IED, 5 ಗ್ರೇನೆಡ್ ಸೇರಿದಂತೆ ಕೆಲ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಟಿಫಿನ್ ಬಾಕ್ಸ್ ಒಳಗಿಟ್ಟ ಸ್ಫೋಟಕ IEDಯನ್ನು ಡ್ರೋನ್ ಮೂಲಕ ಹಾಕಲಾಗಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.

ಟಿಫಿನ್ ಬಾಕ್ಸ್‌ ಒಳಗಿಟ್ಟ ಸ್ಫೋಟಕ IEDಯನ್ನು ಅಮೃತಸರದ ಗ್ರಾಮದಲ್ಲಿ ಹಾಕಲು ಡ್ರೋನ್ ಬಳಸಲಾಗಿದೆ. ಇದರ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂದು ಪಂಜಾಬ್ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.  IEDಯಲ್ಲಿ 2 ರಿಂದ 3 ಕೆಜಿ RDX ಬಳಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಪಡೆ(NSG) ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಕೆಲ ಮಾಹಿತಿಗಳನ್ನು ಕಲೆ ಹಾಕಿದೆ. 

Shehnaaz Gill Father Attacked: ನಟಿ ತಂದೆ ಸಂತೋಖ್ ಮೇಲೆ ಗುಂಡಿನ ದಾಳಿ!

ಸಂಭ್ರಮಕ್ಕೆ ಅಡ್ಡಿಯಾಗಲು ಗಡಿಯಲ್ಲಿ 150ಕ್ಕೂ ಹೆಚ್ಚು ಉಗ್ರರು ಒಳ ನುಸುಳುವ ಯತ್ನದಲ್ಲಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಇದರ ಬೆನ್ನಲ್ಲೇ ಗಡಿಯಲ್ಲಿ ಹಲವು ಉಗ್ರ ಚಟುವಟಿಕೆಗಳನ್ನು ಭಾರತೀಯ ಸೇನೆ ಹತ್ತಿಕ್ಕುತ್ತಿದೆ.  ಈ ಬೆಳವಣಿಗೆ ನಡುವೆ ಇದೀಗ ಡ್ರೋನ್ ಆತಂಕ ಹೆಚ್ಚಾಗುತ್ತಿದೆ. ಪದೆ ಪದೇ ಗಡಿಯಲ್ಲಿ ಡ್ರೋನ್ ಪತ್ತೆಯಾಗುತ್ತಿದ್ದು, ಭದ್ರತೆ ಸವಾಲಾಗುತ್ತಿದೆ.

Latest Videos
Follow Us:
Download App:
  • android
  • ios