Asianet Suvarna News Asianet Suvarna News

ಟೋಲ್ ಸಿಬ್ಬಂದಿಗೆ ಥಳಿಸಿದ BRS ಶಾಸಕನ ವಿಡಿಯೋ ವೈರಲ್, ನಾನವನಲ್ಲ ಎಂದ ನಾಯಕ!

ಟೋಲ್ ಸಿಬ್ಬಂದಿಗಳಿಗೆ ಮೇಲೆ ರಾಜಕಾರಣಿಗಳ ದರ್ಪ ಮುಂದುವರಿದಿದೆ. ತಾನು ಬರುತ್ತಿದ್ದರೂ ಟೋಲ್ ತೆರೆದಿಲ್ಲ ಅನ್ನೋ ಕಾರಣಕ್ಕೆ ರೊಚ್ಚಿಗೆದ್ದ ಬಿಆರ್‌ಎಸ್ ಶಾಸಕ ಸಿಬ್ಬಂದಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಆದರೆ ಶಾಸಕರನ ಸ್ಪಷ್ಟನೆ ಎಲ್ಲರ ಹುಬ್ಬೇರಿಸಿದೆ.
 

BRS MLA Durgam Chinnaiah attack Toll staff for not opening gate video goes viral leader denies ckm
Author
First Published Jan 5, 2023, 4:29 PM IST

ಹೈದರಾಬಾದ್(ಜ.05): ಸಚಿವರು, ಶಾಸಕರು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ಹೊಸದೇನಲ್ಲ. ತಮ್ಮ ಆಕ್ರೋಶಗಳನ್ನು ಟೋಲ್ ಸಿಬ್ಬಂದಿ ಮೇಲೆ ತೋರಿಸಿದ ಹಲವು ಘಟನೆಗಳು ವರದಿಯಾಗಿದೆ. ಈ ಸಾಲಿಗೆ ತೆಲಂಗಾಣದ ಬಿಆರ್‌ಎಸ್ ಪಕ್ಷದ ಶಾಸಕ ದುರ್ಗಮ್ ಚಿನ್ನಯ್ಯ ಸೇರಿಕೊಂಡಿದ್ದಾರೆ. ತಾನು ಆಗಮಿಸುತ್ತಿದ್ದ ವೇಳೆ ಟೋಲ್ ಗೇಟ್ ತೆರೆಯಲಿಲ್ಲ ಅನ್ನೋ ಕಾರಣಕ್ಕೆ ಕಾರಿನಿಂದ ಇಳಿದು ಸಿಬ್ಬಂದಿಗೆ ಹಲ್ಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಶಾಸಕ ಕಾರಿನಿಂದ ಇಳಿದು ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಸಕ ದುರ್ಗಮ್ ಚಿನ್ನಯ್ಯ ಸ್ಪಷ್ಟನೆ ನೀಡಿದ್ದಾರೆ. ನಾನು ಸಿಬ್ಬಂದಿಗೆ ಮೇಲೆ ಹಲ್ಲೆ ಮಾಡಿಲ್ಲ, ನನ್ನ ಮೇಲಿನ ಷಡ್ಯಂತ್ರ ಎಂದು ಚಿನ್ನಯ್ಯ ಹೇಳಿದ್ದಾರೆ.

ಬೆಲ್ಲಂಪಲ್ಲೆ ಕ್ಷೇತ್ರದ ಶಾಸಕ ದುರ್ಗಮ್ ಚಿನ್ನಯ್ಯ  ಮಂಗಳವಾರ ರಾಷ್ಟ್ರೀಯ ಹೆದ್ದಾರಿ 363ರಲ್ಲಿ ಸಂಚರಿಸಿದ್ದಾರೆ. ಈ ವೇಳೆ ಮಂದರಮರಿ ಬಳಿಯ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ. ಶಾಸಕರು ಆಗಮಿಸುತ್ತಿದ್ದರೂ ಟೋಲ್ ಗೇಟ್ ತೆರೆದಿಲ್ಲ. ಇದು ಶಾಸಕರ ಪಿತ್ತ ನೆತ್ತಿಗೇರಿಸಿದೆ. ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಗೆ ಥಳಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.

Magalauru: ಕಾಂಗ್ರೆಸ್ ನಾಯಕಿ ವಿರುದ್ದ ಟ್ರೋಲ್, ಕಮಿಷನರ್ ಗೆ ದೂರು ಕೊಟ್ಟ ಪ್ರತಿಭಾ ಕುಳಾಯಿ!

ವಿಡಿಯೋ ವೈರಲ್ ಬಳಿಕ ಪ್ರತಿಕ್ರಿಯೆ ನೀಡಿರುವ ದುರ್ಗಮ್ ಚಿನ್ನಯ್ಯ, ರಸ್ತೆ ಕಾಮಾಗಾರಿ ಪೂರ್ಣಗೊಳ್ಳುವ ಮೊದಲೇ ಹಣ ಪಡೆಯಲಾಗುತ್ತಿದೆ. ಈ ಕುರಿತು ಕಾರಿನಿಂದ ಇಳಿದು ಪ್ರಶ್ನಿಸಿದ್ದೇನೆ. ಆದರೆ ಸಿಬ್ಬಂದಿಗೆ ಹಲ್ಲೆ ಮಾಡಿಲ್ಲ. ಟೋಲ್ ರಸ್ತೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಉಚಿತವಲ್ಲ. ಇದನ್ನು ಪ್ರಶ್ನಿಸಿದ್ದೇನೆ ಎಂದು ದುರ್ಮ್ ಚಿನ್ನಯ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ ವಿಡಿಯೋದಲ್ಲಿ ಶಾಸಕರು ಹಾಗೂ ಅವರ ಗನ್ ಮ್ಯಾನ್ ಸಾಗುತ್ತಿರುವುದು ಹಾಗೂ ಸಿಬ್ಬಂದಿ ಮೇಲೆ ಶಾಕರು ಹಲ್ಲೆ ನಡೆಸುವುದು ಸ್ಪಷ್ಟವಾಗಿದೆ.

 

 

ಮಂದರಿಮರಿ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ ಅನ್ನೋ ವಿಚಾರ ಈಗಾಗಲೇ ಹಲವು ಬಾರಿ ಚರ್ಚೆಯಾಗಿದೆ. ಪ್ರತಿಭಟನೆಗಳು ನಡೆದಿದೆ. ಇದೀಗ ಹಲ್ಲೆ ಆರೋಪದಿಂದ ಜಾರಿಗೊಳ್ಳಲು ಟೋಲ್ ಸಂಗ್ರಹ ವಿಚಾರ ಮುಂದಿಟ್ಟಿದ್ದಾರೆ. ಇತ್ತ ಈ ಕುರಿತು ಟೋಲ್ ಸಿಬ್ಬಂದಿಯಿಂದ ಅಥವಾ ಇತರರಿಂದ ಯಾವುದೇ ದೂರು ದಾಖಲಾಗಿಲ್ಲ. ಇದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ದೂರು ನೀಡದಂತೆ ದುರ್ಗಮ್ ಚಿನ್ನಯ್ಯ ಟೋಲ್ ಸಿಬ್ಬಂದಿಯನ್ನು ಬೆದರಿಸಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಇದೀಗ ದುರ್ಗಮ್ ಚಿನ್ನಯ್ಯ ವಿರುದ್ದ ಹಲೆವೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಆರ್‌ಎಸ್ ಶಾಸಕರ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ.

ಟೋಲ್‌ ಪ್ಲಾಜಾದಲ್ಲಿ ಕ್ಯೂ ತಡೆಯಲು ಇನ್ನು 6 ತಿಂಗಳಲ್ಲಿ ಹೊಸ ತಂತ್ರಜ್ಞಾನ: ನಿತಿನ್‌ ಗಡ್ಕರಿ

ಅನಧಿಕೃತ ಟೋಲ್‌ ತೆರವಿಗೆ ಆಗ್ರಹಿಸಿ ಧರಣಿ
ಗದಗ ತಾಲೂಕಿನ ಪಾಪನಾಶಿ ಗ್ರಾಮದ ಸಮೀಪದಲ್ಲಿರುವ ಟೋಲ್‌ ನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು, ಸಾಮಾಜಿಕ ಹೋರಾಟಗಾರರು, ಕನ್ನಡಪರ ಸಂಘಟನೆಗಳು, ಲಾರಿ ಮಾಲೀಕರು ನಡೆಸುತ್ತಿರುವ ಅಹೋರಾತ್ರಿ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದ್ದರೂ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿಲ್ಲ. ಅನಧಿಕೃತ ಟೋಲ್‌ ಎಂದು ಅದಕ್ಕಾಗಿ ಇದನ್ನು ಕೂಡಲೇ ರದ್ದು ಪಡಿಸಿ ಸಂಚರಿಸುವವರಿಗೆ ಆಗುತ್ತಿರುವ ಅನಗತ್ಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
 

Follow Us:
Download App:
  • android
  • ios