Magalauru: ಕಾಂಗ್ರೆಸ್ ನಾಯಕಿ ವಿರುದ್ದ ಟ್ರೋಲ್, ಕಮಿಷನರ್ ಗೆ ದೂರು ಕೊಟ್ಟ ಪ್ರತಿಭಾ ಕುಳಾಯಿ!
ಕಳೆದ ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಿದ್ದ ಟೋಲ್ ಗೇಟ್ ವಿರೋಧಿ ಸಮಿತಿಯ ಸದಸ್ಯೆ ಹಾಗೂ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳು ಹರಿದಾಡ್ತಾ ಇದ್ದು, ಈ ಬಗ್ಗೆ ಪ್ರತಿಭಾ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಗೆ ದೂರು ನೀಡಿದ್ದಾರೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಅ.21): ಕಳೆದ ಅಕ್ಟೋಬರ್ 18ರಂದು ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆ ಹಾಕಿದ್ದ ಟೋಲ್ ಗೇಟ್ ವಿರೋಧಿ ಸಮಿತಿಯ ಸದಸ್ಯೆ ಹಾಗೂ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಗಳು ಹರಿದಾಡ್ತಾ ಇದ್ದು, ಈ ಬಗ್ಗೆ ಪ್ರತಿಭಾ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಗೆ ದೂರು ನೀಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ತೇಜೋವಧೆ ನಡೆಸಿದ ಆರೋಪ ವ್ಯಕ್ತವಾಗಿದ್ದು, ಆಕ್ಷೇಪಾರ್ಹ ಪೋಸ್ಟ್ ಗಳ ವಿರುದ್ಧ ಮಂಗಳೂರು ಕಮಿಷನರ್ ಗೆ ಪ್ರತಿಭಾ ದೂರು ನೀಡಿದ್ದಾರೆ. ಅ.18ರಂದು ಸುರತ್ಕಲ್ ನಲ್ಲಿ ನಡೆದಿದ್ದ ಟೋಲ್ ವಿರೋಧಿ ಪ್ರತಿಭಟನೆಯಲ್ಲಿ ಪ್ರತಿಭಾ ಭಾಗವಹಿಸಿದ್ದು, ಟೋಲ್ ಮುತ್ತಿಗೆ ವೇಳೆ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದ್ದರು. ಈ ವಿಡಿಯೋ ಬಳಸಿ ಕಾಂತಾರ-2, ನಾಗವಲ್ಲಿ ಅಂತ ಟ್ರೋಲ್ ಮಾಡಲಾಗಿತ್ತು. ಅಲ್ಲದೇ ಈ ವಿಡಿಯೋಗೆ ಒಂದಷ್ಟು ಸಿನಿಮಾದ ಮ್ಯೂಸಿಕ್ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ಸದ್ಯ ಈ ಟ್ರೋಲ್ ಗೆ ಹಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೇ ಆಕ್ಷೇಪಾರ್ಹವಾಗಿ ಬರೆದು ಹರಿ ಬಿಟ್ಟಿದ್ದಾರೆ.
ಇದೀಗ ಇದರ ವಿರುದ್ದ ಪ್ರತಿಭಾ ಅಸಮಾಧಾನ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕಿಯಾಗಿರೋ ಪ್ರತಿಭಾ ಕುಳಾಯಿ ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿದ್ದರು. ಸ್ನಾತಕೋತ್ತರ ಪದವೀಧರೆಯಾಗಿರೋ ಪ್ರತಿಭಾ ಎಂಫಿಲ್ ಮಾಡಿದ್ದು, ಸದ್ಯ ಮಹಿಳಾ ಸಬಲೀಕರಣ ವಿಷಯದಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ.
Surathkal Toll Gate Issue: ಟೋಲ್ ಗೇಟ್ ಕಿತ್ತೆಸೆಯಲು ನಾಳೆ ನೇರ ಕಾರ್ಯಾಚರಣೆ!
ಹೆಣ್ಮಕ್ಕಳ ಮಾನಹಾನಿ ಬಿಜೆಪಿ ಸಿದ್ದಾಂತಕ್ಕೆ ವಿರುದ್ದವಲ್ಲವೇ?: ಪ್ರತಿಭಾ ಪ್ರಶ್ನೆ
ತೇಜೋವಧೆ ಬಗ್ಗೆ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆಕ್ರೋಶ ಹೊರ ಹಾಕಿದ್ದಾರೆ. ಸಾಮಾಜಿಕ ತಾಣಗಳಲ್ಲಿ ನನ್ನ ವಿರುದ್ಧ ಮಾನಹಾನಿಕರ ಪೋಸ್ಟ್ ಮಾಡಲಾಗಿದೆ. ದ.ಕ ಜಿಲ್ಲಾ ಬಿಜೆಪಿ, ಸಾಮಾಜಿಕ ತಾಣ ಪ್ರಕೋಷ್ಟ ಹಾಗೂ ಹಲವು ಬಿಜೆಪಿ ಮುಖಂಡರಿಂದ ಮಾನಹಾನಿ ಪೋಸ್ಟ್ ಹಾಕಲಾಗಿದೆ. ಹೆಣ್ಮಕ್ಕಳ ಬಗ್ಗೆ ಗೌರವ ಅಂತ ಹೇಳುವ ಬಿಜೆಪಿಗರು ಹಾಕುವ ಈ ಪೋಸ್ಟ್ ಸಿದ್ದಾಂತಕ್ಕೆ ವಿರುದ್ದವಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದಾಗ ಸೀರೆಗೆ ಕೈ ಹಾಕಬೇಡಿ ಅಂತ ಪೊಲೀಸರಿಗೆ ಹೇಳಿದ್ದೇನೆ. ಆದರೆ ಆ ವಿಡಿಯೋ ಬಳಸಿ ಎಡಿಟ್ ಮಾಡಿ ಕೆಟ್ಟದಾಗಿ ಕಮೆಂಟ್ ಮಾಡಲಾಗಿದೆ. ಒಬ್ಬ ಹೆಣ್ಣಿನ ಮಾನಹಾನಿ ಮಾಡುವುದು ಬಿಜೆಪಿ ನಾಯಕರಿಗೆ ಕಾಣಿಸಲ್ವಾ? ಮಾನಹಾನಿ ಪೋಸ್ಟ್ ಸ್ಕ್ರೀನ್ ಶಾಟ್ ಸಮೇತ ಕಮಿಷನರ್ ಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.