Asianet Suvarna News Asianet Suvarna News

ದೇಶ ವಿಭಜನೆಯ ಗೋಳು: 74 ವರ್ಷಗಳ ಬಳಿಕ ಮತ್ತೆ ಸಹೋದರರ ಪುನರ್ಮಿಲನ

  • ಸಹೋದರರ ಪುನರ್ಮಿಲನಕ್ಕೆ ಸಾಕ್ಷಿಯಾದ ಕರ್ತಾರ್‌ಪುರ ಕಾರಿಡಾರ್‌
  • 74  ವರ್ಷಗಳ ಬಳಿಕ ಮತ್ತೆ ಸಹೋದರರ ಭೇಟಿ
  • ಭಾರತ-ಪಾಕಿಸ್ತಾನ ವಿಭಜನೆ ವೇಳೆ ದೂರಾಗಿದ್ದ ಸ್ನೇಹಿತರು
Brothers Separated During Partition Reunite In Kartarpur Corridor After 74 Years akb
Author
Bangalore, First Published Jan 13, 2022, 6:31 PM IST

ಪಂಜಾಬ್‌(ಜ.13) ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ ಮತ್ತೊಮ್ಮೆ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯ್ತು. ದೇಶ ವಿಭಜನೆ ವೇಳೆ ಬೇರ್ಪಟ್ಟ ಸಹೋದರರಿಬ್ಬರು ಇಲ್ಲಿ  74  ವರ್ಷಗಳ ಬಳಿಕ ಮತ್ತೆ ಒಂದಾಗುವ ಮೂಲಕ ಭಾವುಕ ಕ್ಷಣಕ್ಕೆ ಕರ್ತಾರ್‌ಪುರ  ಕಾರಿಡಾರ್‌ ಸಾಕ್ಷಿಯಾಯ್ತು. ಮುಹಮ್ಮದ್ ಸಿದ್ದಿಕ್(Muhammad Siddique) ಮತ್ತು ಅವರ ಹಿರಿಯ ಸಹೋದರ ಹಬೀಬ್ (Habib) ಒಬ್ಬರನ್ನೊಬ್ಬರು ಪ್ರೀತಿಯಿಂದ ಅಪ್ಪಿಕೊಂಡರು. ಇಬ್ಬರೂ ಅಳಲು ತೋಡಿಕೊಂಡರು. ಒಡಹುಟ್ಟಿದವರ ಈ ಭಾವನಾತ್ಮಕ ಪುನರ್ಮಿಲನ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿದೆ. 

ಕರ್ತಾರ್‌ಪುರ ಕಾರಿಡಾರ್‌  74 ವರ್ಷಗಳ ನಂತರ ಪಂಜಾಬ್‌ನ ಗಡಿ ಭಾಗದಲ್ಲಿ ನೆಲೆಸಿದ್ದ ಇಬ್ಬರು ಒಡಹುಟ್ಟಿದ ಸಹೋದರರನ್ನು ಮತ್ತೆ ಒಂದುಗೂಡಿಸಿದೆ. ದೇಶ ವಿಭಜನೆಯ ಸಮಯದಲ್ಲಿ ಅವರು ಬೇರ್ಪಟ್ಟರು. 2019 ರಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಇದನ್ನು ಉದ್ಘಾಟಿಸಿದ ನಂತರ ಈ ಕಾರಿಡಾರ್ ಭರವಸೆಯ ದಾರಿದೀಪವಾಗಿದೆ ಎಂದು ಬರೆದು ಫಿಡಾಟೋ ಹೆಸರಿನ ಟ್ವಿಟ್ಟರ್‌ ಖಾತೆಯಿಂದ ಈ ವಿಡಿಯೋ ಪೋಸ್ಟ್‌ ಆಗಿದೆ. 

 

ಫೈಸಲಾಬಾದ್‌ನ (Faisalabad) ಹೊರವಲಯದಲ್ಲಿರುವ ಬೋಗ್ರಾ (Bogra) ನಿವಾಸಿಯಾದ 80 ವರ್ಷದ ಸಿದ್ದಿಕ್, ಭಾರತದ ಪಂಜಾಬ್‌ನಲ್ಲಿ  ವಾಸಿಸುತ್ತಿರುವ  ತನ್ನ ಸಹೋದರ ಹಬೀಬ್‌ (Habib) ಅವರನ್ನು ಭೇಟಿಯಾದರು.ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಗುವ ಎರಡು ದಿನಗಳ ಮೊದಲು, ತನ್ನ ತಾಯಿ ಕೆಲವೇ ತಿಂಗಳ ವಯಸ್ಸಿನ ತನ್ನ ಕಿರಿಯ ಸಹೋದರ ಹಬೀಬ್‌ನೊಂದಿಗೆ ಭಾರತದ ಪಂಜಾಬ್‌ನಲ್ಲಿರುವ ತನ್ನ ಹೆತ್ತವರನ್ನು ಭೇಟಿ ಮಾಡಲು ಹೋಗಿದ್ದರು ಎಂದು ಸಿದ್ದಿಕ್ ಹೇಳಿದರು. 

Partition: ಸ್ನೇಹಿತರನ್ನು 7 ದಶಕದ ಬಳಿಕ ಒಂದುಗೂಡಿಸಿದ Kartarpur Corridor!

ಆದರೆ ದೇಶ ವಿಭಜನೆಯ ನಂತರ, ಸಿದ್ದಿಕ್ ತನ್ನ ತಾಯಿ ಮತ್ತೆ ಹಿಂತಿರುತ್ತಾರೆ ಎಂದು ಕಾಯುತ್ತಿದ್ದರು. ಆದರೆ ಆಕೆ ಬರಲೇ ಇಲ್ಲ.  ಹೀಗಾಗಿ ಈಗ, 74 ವರ್ಷಗಳ ನಂತರ, ಅವರು ಅಂತಿಮವಾಗಿ ತಮ್ಮ ಕಿರಿಯ ಸಹೋದರ ಹಬೀಬ್ ಅವರನ್ನು ಮತ್ತೆ ಭೇಟಿಯಾದರು. ಈ ಕಾರಿಡಾರ್ ತನ್ನ ಸಹೋದರನನ್ನು ಭೇಟಿಯಾಗಲು ಅವಕಾಶವನ್ನು ಒದಗಿಸಿದೆ ಎಂದು ಹಬೀಬ್ ಹೇಳಿದರು. ಈ ಸಭೆಯನ್ನು 'ಪಂಜಾಬಿ ಪರ್ಚಾರ್' ಎಂಬ ಎನ್‌ಜಿಒ ಆಯೋಜಿಸಿದೆ. ಇದು ಈಗಾಗಲೇ 1947 ರಲ್ಲಿ ಪರಸ್ಪರ ಬೇರ್ಪಟ್ಟ ಅನೇಕ ಕುಟುಂಬಗಳು ಮತ್ತು ಸ್ನೇಹಿತರನ್ನು ಮತ್ತೆ ಒಂದುಗೂಡಿಸುವ ಕೆಲಸ ಮಾಡುತ್ತಿದೆ. 

India Pak Partition: 'ವಿಭಜನೆಯಿಂದ ಯಾರೂ ಖುಷಿಯಾಗಿಲ್ಲ, ರದ್ದಾದರಷ್ಟೇ ನೋವು ಕಡಿಮೆಯಾಗುತ್ತೆ'

ಕಳೆದ ವರ್ಷ ನವೆಂಬರ್‌ನಲ್ಲಿ ವಿಭಜನೆಯ ನಂತರ ಇಬ್ಬರು ಸ್ನೇಹಿತರು ಮೊದಲ ಬಾರಿಗೆ ಮತ್ತೆ ಒಂದಾಗಿದ್ದರು.  ಭಾರತದ ಸರ್ದಾರ್ ಗೋಪಾಲ್ ಸಿಂಗ್ ಮತ್ತು ಪಾಕಿಸ್ತಾನದ ಮುಹಮ್ಮದ್ ಬಶೀರ್ ಆಕಸ್ಮಿಕವಾಗಿ ಮತ್ತೆ ಒಂದಾಗಿದ್ದರು. ಅವರು 1947 ರಲ್ಲಿ ಬೇರ್ಪಟ್ಟಿದ್ದರು. ಸುಮಾರು ದಶಕಗಳ ಬಳಿಕ ಒಬ್ಬರನ್ನೊಬ್ಬರು ಭೇಟಿಯಾದ ಈ ಸ್ನೇಹಿತರು ಭಾವುಕರಾಗಿ ಅಪ್ಪಿಕೊಂಡರು. ಪ್ರಸ್ತುತ ಸರ್ದಾರ್‌ ಗೋಪಾಲ್‌ ಸಿಂಗ್‌ ಅವರಿಗೆ 94 ವರ್ಷ ಹಾಗೆಯೇ ಮೊಹಮ್ಮದ್‌ ಬಷೀರ್‌ ಅವರಿಗೆ 91 ವರ್ಷ. ಇವರು ಮತ್ತೆ ಒಂದಾದ ಬಗ್ಗೆ ಪಾಕಿಸ್ತಾನದ ಡಾನ್‌ ಪತ್ರಿಕೆ(Dawn news) ವರದಿ ಮಾಡಿತ್ತು.
 

Follow Us:
Download App:
  • android
  • ios