Partition: ಸ್ನೇಹಿತರನ್ನು 7 ದಶಕದ ಬಳಿಕ ಒಂದುಗೂಡಿಸಿದ Kartarpur Corridor!
* ಇಡೀ ದೇಶವನ್ನು ಕಾಡಿತ್ತು ಭಾರತ- ಪಾಕಿಸ್ತಾನ ವಿಭಜನೆ
* ದುಃಖದಿಂದಲೇ ಆಪ್ತರಿಂದ ದೂರವಾಗಿದ್ದ ಬಂಧುಗಳು, ಸ್ನೇಹಿತರು
* ಏಳು ದಶಕದಿಂದ ದೂರವಿದ್ದ ಸ್ನೇಹಿತರನ್ನು ಮತ್ತೆ ಒಂದಾಗಿಸಿದ ಕರ್ತಾರ್‌ಪುರ್ ಕಾರಿಡಾರ್
ನವದೆಹಲಿ(ನ.23): ಭಾರತ ಪಾಕಿಸ್ತಾನ ವಿಭಜನೆ ವೇಳೆ ದೂರವಾಗಿದ್ದ ಸ್ನೇಹಿತರು ಮತ್ತೆ ಒಂದಾದ ಘಟನೆಯೊಂದು ನಡೆದಿದೆ. ಇಂತಹ ನೈಜ ಘಟನೆಯೊಂದು (Kartarpur Corridor) ಕರ್ತಾರ್‌ಪುರ ಕಾರಿಡಾರ್‌ನಲ್ಲಿ (Kartarpur Corridor) ನಡೆದಿದೆ. ಕರ್ತಾರ್‌ಪುರ ಗುರುದ್ವಾರದ ದರ್ಬಾರ್ ಸಾಹೀಬ್ ಇಂತಹದೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಇಲ್ಲಿ ಸ್ವಾತಂತ್ರ್ಯದ ಸಂದರ್ಭ ಅಂದರೆ1947ರ ವೇಳೆ ಬೇರೆ ಬೇರೆಯಾದ ಸ್ನೇಹಿತರಿಬ್ಬರು ಮತ್ತೆ ಒಂದಾಗಿದ್ದರು. ಸರ್ದಾರ್ ಗೋಪಾಲ್ ಸಿಂಗ್ ಹಾಗೂ ಅವರ ಬಾಲ್ಯ ಸ್ನೇಹಿತ ಪಾಕಿಸ್ತಾನದ ಮೊಹಮ್ಮದ್ ಬಷೀರ್ (Mohammed bhashir) ಸುಮಾರು 70ವರ್ಷಗಳ ಹಿಂದೆ ಬೇರೆಯಾಗಿದ್ದವರು ಕಾರ್ತಾರ್‌ಪುರ ಕಾರಿಡಾರ್‌ನಿಂದಾಗಿ ಮತ್ತೆ ಒಂದಾಗಿದ್ದಾರೆ. ಈ ಸಂದರ್ಭದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದ ಇಬ್ಬರ ಕಣ್ಣಾಲಿಗಳು ತುಂಬಿ ಬಂದಿದ್ದವು.
ನೀವು ಯೂಟ್ಯೂಬ್‌ನಲ್ಲಿ ಗೂಗಲ್ ಸರ್ಚ್‌ಗೆ ಸಂಬಂಧಿಸಿದ ವಿಡಿಯೋವೊಂದನ್ನು ನೋಡಿರಬಹುದು. ತುಂಬಾ ಭಾವನಾತ್ಮಕವಾಗಿರುವ ಈ ವಿಡಿಯೋ ಭಾರತ -ಪಾಕಿಸ್ತಾನ ಸಂದರ್ಭದಲ್ಲಿ ಬೇರೆ ಬೇರೆಯಾದ ಸ್ನೇಹಿತರು ಮತ್ತೆ ಮೊಮ್ಮಕ್ಕಳ ಕಾಲದಲ್ಲಿ ಮೊಮ್ಮಕ್ಕಳ ಪ್ರಯತ್ನದಿಂದ ಮತ್ತೆ ಭೇಟಿಯಾಗುವ ಚಿತ್ರಣವಿದೆ. ಇದು ಗೂಗಲ್ ಕಾಲ್ಪನಿಕವಾಗಿ ಚಿತ್ರಿಸಿದ ಚಿತ್ರಣವಾದರೂ ಈಗ ಅದು ನಿಜವಾಗಿದೆ. ಈ (google search Add)ಗೂಗಲ್ ಸರ್ಚ್ ಜಾಹೀರಾತಿನಲ್ಲಿ ವಯಸ್ಸಾದವರೊಬ್ಬರು ತಮ್ಮ ಮೊಮ್ಮಗಳಿಗೆ ತಮ್ಮ ಬಾಲ್ಯದ ದಿನಗಳ ಬಗ್ಗೆ ಬಾಲ್ಯದಲ್ಲಿ ದೂರಾದ ಸ್ನೇಹಿತನ ಬಗ್ಗೆ, ಆಡಿ ಉಂಡ ಸ್ಥಳದ ಬಗ್ಗೆ, ವಿಭಜನೆ ಬಳಿಕ ಕಳಚಿ ಹೋದ ಸ್ನೇಹದ ಬಗ್ಗೆ ಭಾವುಕರಾಗಿ ವಿವರಿಸುತ್ತಾರೆ. ಅವರು ಹೇಳಿದ ಸ್ಥಳ ಪ್ರದೇಶಗಳನ್ನು ಗೂಗಲ್ ಸರ್ಚ್ ಮೂಲಕ ಪತ್ತೆ ಮಾಡುವ ಮೊಮ್ಮಗಳು ಕೊನೆಗೂ ಅವರಿಬ್ಬರನ್ನು ಭೇಟಿ ಮಾಡಿಸುವಲ್ಲಿ ಸಫಲಳಾಗುತ್ತಾಳೆ. ಎಷ್ಟು ವರ್ಷ ಕಳೆದ ಬಳಿಕ ಜೊತೆಗೆ ಒಂದಾಗುವ ಸ್ನೇಹಿತರು ಭಾವುಕರಾಗಿ ಕಣ್ಣೀರಾಗುತ್ತಾರೆ.
ಯುವ ಸಮೂಹಕ್ಕೆ ಬೇಡ ಕ್ರಿಪ್ಟೋ ಸಹವಾಸ, ಟೀಂ ಇಂಡಿಯಾ ಮಾಡುತ್ತಾ ಪಾಕ್ ಪ್ರವಾಸ?ನ.18ರ ಟಾಪ್ 10 ಸುದ್ದಿ!
ಹಾಗೆಯೇ ಸುಮಾರು ದಶಕಗಳ ಬಳಿಕ ಒಬ್ಬರನ್ನೊಬ್ಬರು ಭೇಟಿಯಾದ ಈ ಸ್ನೇಹಿತರು ಭಾವುಕರಾಗಿ ಅಪ್ಪಿಕೊಂಡರು. ಪ್ರಸ್ತುತ ಸರ್ದಾರ್ ಗೋಪಾಲ್ ಸಿಂಗ್ ಅವರಿಗೆ 94 ವರ್ಷ ಹಾಗೆಯೇ ಮೊಹಮ್ಮದ್ ಬಷೀರ್ ಅವರಿಗೆ 91 ವರ್ಷ. ಇವರು ಮತ್ತೆ ಒಂದಾದ ಬಗ್ಗೆ ಪಾಕಿಸ್ತಾನದ ಡಾನ್ ಪತ್ರಿಕೆ(Dawn news) ವರದಿ ಮಾಡಿದೆ. ಇಬ್ಬರು ತಮ್ಮ ಬಾಲ್ಯವನ್ನು ನೆನೆಪಿಸಿಕೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಭಾರತ ಹಾಗೂ ಪಾಕಿಸ್ತಾನ ವಿಭಜನೆಗೂ ಮೊದಲು ಸಿಂಗ್ ಹಾಗೂ ಬಷೀರ್ ಇಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲಿ ಬಾಬಾ ಗುರು ನಾನಕ್ ಮಂದಿರಕ್ಕೆ ಭೇಟಿ ನೀಡಿ ಒಟ್ಟಿಗೆ ಟೀ ಕುಡಿದು ಊಟ ಸೇವಿಸಿದ್ದರಂತೆ. ಪ್ರಸ್ತುತ (social media) ಸೋಷಿಯಲ್ ಮೀಡಿಯಾದಲ್ಲಿ ಇವರ ಭೇಟಿಯ ಸುದ್ದಿ ಸಂಪೂರ್ಣ (viral) ವೈರಲ್ ಆಗಿದ್ದು, ಜನ ಈ ಹಿರಿಯರು ಮತ್ತೆ ಒಂದಾಗಿದ್ದಕ್ಕೆ ಭಾವುಕರಾಗಿ ಸ್ಪಂದಿಸಿದ್ದಾರೆ.
ಅವರ ನೋವು ಏನೆಂಬುದನ್ನು ಅವರು ಮಾತ್ರ ಬಲ್ಲರು... ಇದು ವಿಭಜನೆಯ ನೋವು.. ವಿಭಜನೆ ವೇಳೆ ದೂರಾದವರು ಇಂದು ಒಂದಾಗಿದ್ದಾರೆ ಇಂತಹ ಕ್ಷಣಕ್ಕೆ ಸಾಕ್ಷಿಯಾಗಿದ್ದು, ನಮ್ಮ ಪುಣ್ಯ, ಇದು ಗಡಿಯನ್ನು ಮೀರಿದ ಪ್ರೀತಿ ಎಂದೆಲ್ಲಾ (twitter) ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಈ ಹಿರಿಯರ ಸ್ನೇಹಕ್ಕೆ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಅಂದು ದೂರವಾದವರಲ್ಲಿ ಅನೇಕರು ಮರಣವನ್ನಪ್ಪಿದ್ದು ಇದು ಬಹುಶಃ ಬದುಕುಳಿದಿರುವವರು ಕೊನೆಯ ತಲೆಮಾರಾಗಿರಬಹುದು.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಎತ್ತಿದ ಪಾಕಿಸ್ತಾನ : ಭಾರತದ ಖಡಕ್ ತಿರುಗೇಟು!
ಕಾರ್ತಾರ್‌ಪುರ ಕಾರಿಡಾರ್ (Kartarpur Corridor) ಭಾರತದ ಯಾತ್ರಿಕರಿಗೆ ಪಾಕಿಸ್ತಾನದ ಸಿಖ್ ಪವಿತ್ರ ಕ್ಷೇತ್ರವಾದ ಗುರುದ್ವಾರ ದರ್ಬಾರ್ ಸಾಹೀಬ್ (Gurdwara Darbar Sahib)ಗೆ ಭೇಟಿ ನೀಡಲು ವೀಸಾ ಇಲ್ಲದೆಯೇ ಹೋಗಬಹುದಾದ ಮಾರ್ಗವಾಗಿದೆ. ಭಾರತ-ಪಾಕಿಸ್ತಾನ ವಿಭಜನೆ (India- Pakistan Partition) ವೇಳೆ ಸಾವಿರಾರು ಜನ ಮುಸಲ್ಮಾನರು ಭಾರತ ತೊರೆದರೆ ಅಷ್ಟೇ ಜನ ಹಿಂದೂಗಳು ಪಾಕಿಸ್ತಾನವನ್ನು ತೊರೆದರು. ಈ ಸಂದರ್ಭದಲ್ಲಿ ಹುಟ್ಟಿ ಬೆಳೆದ ಸ್ಥಳವನ್ನು ಬಿಟ್ಟು ಹೋದವರ ಬಿಟ್ಟು ಬಂದವರ ಭಾವುಕತೆ ಊಹೆಗೂ ನಿಲುಕದ್ದು, ಬಾಲ್ಯದ ಸ್ನೇಹವೆಂಬುದೇ ಹಾಗೆ ರಕ್ತ ಸಂಬಂಧಕ್ಕಿಂತಲೂ ಮಿಗಿಲಾದುದು, ಜಾತಿ ಧರ್ಮಗಳನ್ನು ಮೀರಿದ ನಿಷ್ಕಲ್ಮಶವಾದ ಸ್ನೇಹ ಎಲ್ಲೋ ಹುಟ್ಟಿ ಎಲ್ಲೋ ಬೆಳೆಯುವುದು. ಬಿಟ್ಟು ಹೋದವರು ಕಾಲಕ್ಕೆ ಸಿಲುಕಿ ದೂರವಾದವರು ಮತ್ತೆ ಬಂದರೆ ಆಗುವ ಖುಷಿಗೆ ಹೆಸರಿಡಬಹುದೇ ಅಲ್ಲವೇ....!