Asianet Suvarna News Asianet Suvarna News

India Pak Partition: 'ವಿಭಜನೆಯಿಂದ ಯಾರೂ ಖುಷಿಯಾಗಿಲ್ಲ, ರದ್ದಾದರಷ್ಟೇ ನೋವು ಕಡಿಮೆಯಾಗುತ್ತೆ'

* ಆರ್‌ಎಸ್‌ಎಸ್‌ ಮುಖ್ಯಸ್ಥನ ಮಹತ್ವದ ಹೇಳಿಕೆ

* ವಿಭಜನೆಯಿಂದ ನೋವಷ್ಟೇ ಸಿಕ್ಕಿದೆ, ಭಾರತವಾಗಲಿ, ಪಾಕಿಸ್ತಾನವಾಗಲಿ ಖುಷಿಯಾಗಿಲ್ಲ

* ವಿಭಜನೆ ರದ್ದಾದರಷ್ಟೇ ನೋವು ಕಡಿಮೆಯಾಗುತ್ತದೆ

Pain of partition will go only when partition is undone Says RSS Chief Mohan Bhagwat pod
Author
Bangalore, First Published Nov 26, 2021, 1:19 AM IST

ನವದೆಹಲಿ(ನ.26): 1947ರಲ್ಲಿ ನಡೆದ ದೇಶ ವಿಭಜನೆಯಿಂದ (Partition) ಯಾರೂ ಸಂತುಷ್ಟರಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಹೇಳಿದ್ದಾರೆ. ವಿಭಜನೆಯು ಎಂದಿಗೂ ಕೊನೆಯಿಲ್ಲದ ನೋವನ್ನು ನೀಡಿದೆ, ಹೀಗಾಗಿ ಈ ವಿಭಜನೆಯನ್ನು ರದ್ದುಗೊಳಿಸಿದರೆ ಮಾತ್ರ ಈ ನೋವು ಕೊನೆಗೊಳ್ಳುತ್ತದೆ ಎಂದಿದ್ದಾರೆ. ನೋಯ್ಡಾದಲ್ಲಿ (Noida) ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್ ಈ ವಿಭಜನೆಯಿಂದ ಯಾರಿಗಾದರೂ ಹೆಚ್ಚು ನಷ್ಟವಾಗಿದ್ದರೆ ಅದು ಮಾನವೀಯತೆ ಎಂದು ಹೇಳಿದ್ದಾರೆ. 

ಭಾರತದ ವಿಭಜನೆಯು (Partition Of India) ರಾಜಕೀಯ ಪ್ರಶ್ನೆಯಲ್ಲ, ಆದರೆ ಅಸ್ತಿತ್ವದ ಪ್ರಶ್ನೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಭಾಗವತ್ ಹೇಳಿದರು. ಆ ಸಮಯದಲ್ಲಿ ದೇಶದಲ್ಲಿ ಯಾರೂ ರಕ್ತ ಹರಿಸದಂತೆ ಈ ವಿಭಜನೆಯನ್ನು ಒಪ್ಪಿಕೊಳ್ಳಬೇಕಾಗಿತ್ತು, ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಡೆದಿರುವುದು ದುರದೃಷ್ಟಕರ ಮತ್ತು ಅಂದಿನಿಂದ ಇಂದಿನವರೆಗೆ ಎಷ್ಟೋ ರಕ್ತ ಹರಿದಿದೆ ಎಂದು ಹೇಳಿದ್ದಾರೆ. ಅಲ್ಲದೇ ತಾನು ವಿಭಜನೆಯ ನಂತರ ಜನಿಸಿದೆ ಮತ್ತು ವಿಭಜನೆಯ 10 ವರ್ಷಗಳ ಬಳಿಕ ಈ ಬಗ್ಗೆ ಅರ್ಥಮಾಡಿಕೊಂಡೆ ಮತ್ತು ಅರ್ಥಮಾಡಿಕೊಂಡ ದಿನದಿಂದ ತಾನು ನಿದ್ರೆ ಮಾಡಲಿಲ್ಲ ಎಂದು ಹೇಳಿದರು.

ಇದೇ ವೇಳೆ ವಿಭಜನೆಯ ವಿಧಾನ ಸರಿಯಿಲ್ಲ ಎಂದು ಸಂಘದ ಪ್ರಮುಖರು ಹೇಳಿದ್ದಾರೆ. ಇದರಿಂದ ಭಾರತವಾಗಲಿ ಅಥವಾ ಪಾಕಿಸ್ತಾನವಾಗಲಿ (Pakistan) ಸಂತೋಷವಾಗಿಲ್ಲ. ವಿಭಜಿಸುವ ಪ್ರವೃತ್ತಿ ಪ್ರತ್ಯೇಕತೆಯ ಬಗ್ಗೆ ಹೇಳುತ್ತದೆ. ನೀವು ಬೇರೆಯವರು ಆದ್ದರಿಂದ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಅದೇ ಸಮಯದಲ್ಲಿ, ಭಾರತದ ಪ್ರವೃತ್ತಿಯು ಯಾರೂ ವಿಭಿನ್ನರಲ್ಲ, ಆದ್ದರಿಂದ ಅವನು ಬೇರೆಯಾಗಿರಬೇಕಾಗಿಲ್ಲ ಎಂದು ಹೇಳುತ್ತದೆ. ಭಾರತದ ವಿಚಾರಧಾರೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತದೆ. ಇಲ್ಲಿ ತನ್ನನ್ನು ಸರಿ ಮತ್ತು ಇತರರನ್ನು ತಪ್ಪು ಎಂದು ಪರಿಗಣಿಸುವ ಸಿದ್ಧಾಂತವಲ್ಲ ಎಂದಿದ್ದಾರೆ. 

Partition: ಸ್ನೇಹಿತರನ್ನು 7 ದಶಕದ ಬಳಿಕ ಒಂದುಗೂಡಿಸಿದ Kartarpur Corridor!

ಮುಸಲ್ಮಾನರು ಹಾಗೂ ಬ್ರಿಟಿಷರೇ ಇದಕ್ಕೆ ಕಾರಣ

ಭಾರತದ ವಿಭಜನೆಯ ಹಿಂದೆ ಕೆಲವು ಸನ್ನಿವೇಶಗಳಿವೆ, ಆದರೆ ಇದಕ್ಕೆ ದೊಡ್ಡ ಕಾರಣ ಇಸ್ಲಾಂ ಮತ್ತು ಬ್ರಿಟಿಷರ (Muslims And British) ಆಕ್ರಮಣ ಎಂದು ಹೇಳಿದರು. ಇಸ್ಲಾಂ ಧರ್ಮದ ಆಕ್ರಮಣದ ಬಗ್ಗೆ ಗುರುನಾನಕ್ ಜೀ ನಮಗೆ ಎಚ್ಚರಿಕೆ ನೀಡಿದ್ದರೂ ನಾವು ಎಚ್ಚೆತ್ತುಕೊಂಡಿಲ್ಲ ಎಂದು ಅವರು ಹೇಳಿದರು. ಈ ವಿಭಜನೆಯಿಂದ ಯಾರೂ ಸಂತೋಷವಾಗಿಲ್ಲ ಮತ್ತು ಯಾವುದೇ ಬಿಕ್ಕಟ್ಟಿಗೆ ಪರಿಹಾರವೂ ಅಲ್ಲ ಎಂದು ಅವರು ಹೇಳಿದರು. ನಾವು ವಿಭಜನೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಅದನ್ನು ಸಮಯದೊಂದಿಗೆ ಅರ್ಥಮಾಡಿಕೊಳ್ಳಬೇಕು ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ.

ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಭಾರತ ವಿಭಜನೆಯ ಸಾಕ್ಷಿ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ನೋಯ್ಡಾಗೆ ಆಗಮಿಸಿದ್ದರು  ಎಂಬುವುದು ಉಲ್ಲೇಖನೀಯ. ಈ ಪುಸ್ತಕದ ಲೇಖಕ ಕೃಷ್ಣಾನಂದ್ ಸಾಗರ್ ಅವರು ತಮ್ಮ ಪುಸ್ತಕದಲ್ಲಿ ವಿಭಜನೆಯನ್ನು ನೋಡಿದ ಮತ್ತು ಅದರ ನೋವನ್ನು ಅನುಭವಿಸಿದ ದೇಶದ ಜನರ ನೋವು ಮತ್ತು ಕೇಳದ ಕಥೆಗಳನ್ನು ವಿವರಿಸಿದ್ದಾರೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನೋಯ್ಡಾದ ಸೆಕ್ಟರ್ 12 ನಲ್ಲಿರುವ ಭೌರಾವ್ ದೇವರಸ್ ಸರಸ್ವತಿ ವಿದ್ಯಾ ಮಂದಿರದಲ್ಲಿ ಆಯೋಜಿಸಲಾಗಿತ್ತು.

Follow Us:
Download App:
  • android
  • ios