Asianet Suvarna News Asianet Suvarna News

ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೆ.. ಪ್ರಯಾಣಿಕರಿಗೆ ಉಚಿತ ಸ್ನಾನ..!

ರೈಲು ಪ್ಲಾಟ್‌ಫಾರ್ಮ್‌ನಲ್ಲಿರುವ ನೀರಿನ ನಲ್ಲಿಯೊಂದು ಒಡೆದು ಹೋಗಿದ್ದು, ಇದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Broken Tap At Railway Platform Give Passengers free bath video goes viral in social Media akb
Author
First Published Oct 28, 2022, 7:31 PM IST

ಮುಂಬೈ: ಭಾರತೀಯ ರೈಲ್ವೆಯೂ ಅನೇಕ ಕಾರಣಗಳಿಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿ ಇರುತ್ತದೆ. ಕೆಲ ದಿನಗಳ ಹಿಂದೆ ಮುಂಬೈ ಉಪ ನಗರದಲ್ಲಿ ಸಂಚರಿಸುವ ಲೋಕಲ್ ಟ್ರೈನ್‌ನಲ್ಲಿ ಮಹಿಳೆಯರು ಜುಟ್ಟು ಜುಟ್ಟು ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಈಗ ರೈಲು ಪ್ಲಾಟ್‌ಫಾರ್ಮ್‌ನಲ್ಲಿರುವ ನೀರಿನ ನಲ್ಲಿಯೊಂದು ಒಡೆದು ಹೋಗಿದ್ದು, ಇದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರೈಲಿನ ಪ್ಲಾಟ್‌ಫಾರ್ಮ್‌ನಲ್ಲಿ ಇದ್ದ ನಲ್ಲಿಯೊಂದು(Water Tap) ಒಡೆದು ಹೋಗಿದ್ದು, ಪರಿಣಾಮ ಅದರ ನೀರು ಕಾರಂಜಿಯಂತೆ ಚಿಮ್ಮುತಿತ್ತು, ಎಷ್ಟು ರಭಸವಾಗಿ ನೀರು ಚಿಮ್ಮುತ್ತಿತ್ತು ಎಂದರೆ ಟ್ರಾಕ್‌ನಲ್ಲಿ ಸಂಚರಿಸುವ ರೈಲುಗಳವರೆಗೆ ಇದು ತಲುಪುತ್ತಿತ್ತು. ಇದರಿಂದ ರೈಲಿನಲ್ಲಿ ಕುಳಿತ ಪ್ರಯಾಣಿಕರೆಲ್ಲಾ  ಒಂದು ಕ್ಷಣ ನೀರಿನಿಂದ ಒದ್ದೆಯಾಗುತ್ತಿದ್ದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡುಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. @craziestlazy ಎಂಬ ಬಳಕೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರತೀಯ ರೈಲ್ವೆ ನಿಮ್ಮ ಸೇವೆಯಲ್ಲಿ ಎಂದು ಶೀರ್ಷಿಕೆ ನೀಡಿದ್ದಾರೆ. 1.1 ಮಿಲಿಯನ್ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 26 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

30 ಸೆಕೆಂಡ್‌ನ ಈ ವಿಡಿಯೋದಲ್ಲಿ ನೀರು ನೇರವಾಗಿ ಚಲಿಸುವ ರೈಲಿನ ಕಿಟಕಿ ಬಾಗಿಲುಗಳ ಮೂಲಕ ರೈಲೊಳಗೆ(train) ಹಾರುವುದನ್ನು ಕಾಣಬಹುದು. ಇದರಿಂದ ರೈಲಿನ ಬಾಗಿಲಲ್ಲಿ ನಿಂತರವರು, ಕಿಟಕಿ ಪಕ್ಕ ಕುಳಿತವರು ಒದ್ದೆಯಾಗಿದ್ದಾರೆ. ಅಲ್ಲದೇ ನೀರು ಬಿದ್ದಂತೆ ಕೆಲವರು ಅಲ್ಲಿಂದ ರೈಲೊಳಗೆ ಓಡಲು ಯತ್ನಿಸುವುದನ್ನು ನೋಡಬಹುದಾಗಿದೆ. ಈ ರೈಲಿನ ಹೊರಭಾಗದಲ್ಲಿ ER ಎಂದು ಬರೆಯಲಾಗಿದ್ದು, ಇದು ಪೂರ್ವ ವಲಯದ ರೈಲ್ವೆಗೆ ಸೇರಿದ್ದಾಗಿದ್ದು, ಬಹುಶಃ ಪಶ್ಚಿಮ ಬಂಗಾಳದ (West Bengal) ಯಾವುದೋ ರೈಲು ನಿಲ್ದಾಣದ್ದು ಆಗಿರಬಹುದು ಎಂದು ಊಹೆ ಮಾಡಲಾಗಿದೆ. 

ರೈಲು ತಡವಾದರೆ IRCTC ಯಿಂದ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು..!

ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ(Indian railways) ವಿಶೇಷ ಸೇವೆ ಎಂದು ಕಾಮೆಂಟ್ ಮಾಡಿದ್ದಾರೆ. ರೈಲ್ವೆಗೂ ಗೊತ್ತು ಕೆಲವರು ಮುಂಜಾನೆ ಸ್ನಾನ ಮಾಡಲ್ಲ ಎಂಬುದು ಹೀಗಾಗಿ ರೈಲ್ವೆ ಸಹಾಯ ಮಾಡುತ್ತಿದೆ ಎಂದು ಒಬ್ಬರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. ಇದೊಂದು ಅಟೋ ಕ್ಲೀನಿಂಗ್ ವ್ಯವಸ್ಥೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಬಾಯಾರಿಕೆಯಿಂದ ಬಳಲುತ್ತಿರುವ ರೈಲು ಪ್ರಯಾಣಿಕರನ್ನು ಗುರುತಿಸಿ ಅವರಿಗೆ ನೇರವಾಗಿ ರೈಲಿನ ಕಿಟಕಿ ಬಾಗಿಲಿನ ಮೂಲಕ ನೇರವಾಗಿ ನೀರನ್ನು ಒದಗಿಸುವ ವ್ಯವಸ್ಥೆಯಾಗಿದೆ (Auto Cleaning System) ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಇದು ಖಚಿತವಾಗಿ ಎಲ್ಲಿ ಯಾವಾಗ ನಡೆದಿದೆ ಎಂಬ ಬಗ್ಗೆ ಉಲ್ಲೇಖವಿಲ್ಲ. 

Indian Railways: ರೈಲು ಪ್ರಯಾಣದ ಅನುಭವ ಹೆಚ್ಚಿಸಲು ಸಿದ್ಧವಾದ ವಂದೇ ಭಾರತ್ 2..! ವೈಶಿಷ್ಟ್ಯಗಳು ಹೀಗಿವೆ..

Follow Us:
Download App:
  • android
  • ios