Omicron lockdown ಕ್ರಿಸ್ಮಸ್ ಬಳಿಕ 2 ವಾರ ಲಾಕ್‌ಡೌನ್, ಬ್ರಿಟನ್‌ನಲ್ಲಿ ಕಠಿಣ ನಿಮಯ ಜಾರಿ ಸಾಧ್ಯತೆ!

  • ಬ್ರಿಟನ್ ಸೇರಿ  ಯೂರೋಪ್‌ನಲ್ಲೂ ಕಠಿಣ ನಿರ್ಬಂಧ
  • ಕರಾವಳಿಗೂ ಒಮಿಕ್ರೋನ್‌: 6 ಯುವತಿಯರಲ್ಲಿ ಪತ್ತೆ
  • ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದವರಿಗೂ ಪತ್ತೆ
britain likely to impose 2 weeks lockdown after Christmas due Omicron and coronavirus ckm

ಲಂಡನ್‌(ಡಿ.19): ಮಹಾಮಾರಿ ಕೊರೋನಾ(Corona) ವೈರಸ್ಸಿನ ರೂಪಾಂತರಿ ಒಮಿಕ್ರೋನ್‌(Omicron) ವೇಗವಾಗಿ ಹಬ್ಬುತ್ತಿದ್ದು ಇದರ ನಿಯಂತ್ರಣಕ್ಕೆ ಬ್ರಿಟನ್‌(Britain) ಸರ್ಕಾರ ಸಜ್ಜಾಗಿದೆ. ದೇಶಾದ್ಯಂತ 2 ವಾರಗಳ ಲಾಕ್‌ಡೌನ್‌ ಮಾಡಲು ನಿರ್ಧರಿಸಿದೆ. ಕ್ರಿಸ್‌ಮಸ್‌(christmas) ಹಬ್ಬದ ಬಳಿಕ ಲಾಕ್‌ಡೌನ್‌ ಜಾರಿಯಾಗುವ ಸಾಧ್ಯತೆ ಇದೆ. ಬ್ರಿಟನ್‌ನಲ್ಲಿ ಶುಕ್ರವಾರ ಒಂದೇ ದಿನ 93 ಸಾವಿರಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.  

ಯೂರೋಪ್‌ನಲ್ಲೂ ಕಠಿಣ ನಿರ್ಬಂಧ
ಒಮಿಕ್ರೋನ್‌ ತಡೆಗೆ ಯೂರೋಪ್‌ ಕೂಡ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಫ್ರಾನ್ಸ್‌ನಲ್ಲಿ ಹೊಸ ವರ್ಷಾಚರಣೆಯ ಪಟಾಕಿ ಸಿಡಿತವನ್ನು ರದ್ದುಗೊಳಿಸಲಾಗಿದೆ. ಇನ್ನು ಡೆನ್ಮಾರ್ಕ್ನಲ್ಲಿ ಥಿಯೇಟರ್‌ಗಳು, ಸಂಗೀತ ಕಚೇರಿಗಳು, ಮನೋರಂಜನೆ ಉದ್ಯಾನವನಗಳು ಮತ್ತು ಮ್ಯೂಸಿಯಂಗಳನ್ನು ಬಂದ್‌ ಮಾಡಲಾಗಿದೆ. ಐರ್ಲೆಂಡ್‌ನಲ್ಲಿ ಪಬ್‌ಗಳು, ಬಾರ್‌ಗಳಲ್ಲಿ ರಾತ್ರಿ 8 ಗಂಟೆ ಬಳಿಕ ಕರ್ಫ್ಯೂ ಹೇರಲಾಗಿದೆ.  

Corona, Omicron Update: ಕರ್ನಾಟಕದಲ್ಲಿ ಕೊರೋನಾ ಏರಿಳಿತ, ಒಮಿಕ್ರಾನ್ ಸಂಖ್ಯೆ ಏರಿಕೆ

ನಿನ್ನೆ ದೇಶದಲ್ಲಿ 30 ಓಮಿಕ್ರೋನ್‌ ಕೇಸ್‌
ಶನಿವಾರ ಭಾರತದಲ್ಲಿ ಹೊಸದಾಗಿ 30 ಮಂದಿಗೆ ಒಮಿಕ್ರೋನ್‌ ದೃಢಪಟ್ಟಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 8, ಕರ್ನಾಟಕದಲ್ಲಿ 6, ತೆಲಂಗಾಣದಲ್ಲಿ 12 ಮತ್ತು ಕೇರಳದಲ್ಲಿ 4 ಹೊಸ ಕೇಸು ಪತ್ತೆಯಾಗಿದೆ.

ಕರಾವಳಿಗೂ ಒಮಿಕ್ರೋನ್‌: 6 ಯುವತಿಯರಲ್ಲಿ ಪತ್ತೆ
ರಾಜ್ಯದಲ್ಲಿ ಒಮಿಕ್ರೋನ್‌ ಸ್ಫೋಟ ಮುಂದುವರೆದಿದ್ದು, ಶನಿವಾರ ಮತ್ತೆ ಆರು ಮಂದಿಯಲ್ಲಿ ರೂಪಾಂತರಿ ವೈರಸ್‌ನ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಆತಂಕ ಹುಟ್ಟಿಸುವ ವಿಷಯವೆಂದರೆ, ಈ ಬಾರಿ ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದ, 14 ವರ್ಷದ ವಿದ್ಯಾರ್ಥಿನಿಯರಿಗೂ ಕೂಡಾ ಒಮಿಕ್ರೋನ್‌ ಸೋಂಕು ತಗಲಿದೆ. ಜತೆಗೆ, ಬೆಂಗಳೂರು ಮತ್ತು ಬೆಳಗಾವಿಗೆ ಸೀಮಿತವಾಗಿದ್ದ ಸೋಂಕು ಇದೀಗ ಕರಾವಳಿಗೂ ಹಬ್ಬಿದೆ.

New Year 2022 : ಬ್ರಿಗೇಡ್‌ ರೋಡ್‌ನಲ್ಲಿ ಸೆಲಬ್ರೇಶನ್‌ಗೆ ಅವಕಾಶವಿಲ್ಲ

ಗುರುವಾರವಷ್ಟೇ ಐದು ಮಂದಿಯಲ್ಲಿ ಒಮಿಕ್ರೋನ್‌ ಪತ್ತೆಯಾಗಿತ್ತು. ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮುಡಿಪು ಕಾಲೇಜೊಂದರ ವಸತಿ ನಿಲಯದಲ್ಲಿದ್ದ 14 ವರ್ಷದ ನಾಲ್ವರು ವಿದ್ಯಾರ್ಥಿನಿಯರು ಮತ್ತು ಮಂಗಳೂರಿನ ನರ್ಸಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹತ್ತೊಂಬತ್ತು ವರ್ಷದ ವಿದ್ಯಾರ್ಥಿನಿ ಹಾಗೂ ಇತ್ತೀಚೆಗೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಆಗಮಿಸಿದ್ದ ಯುವತಿಯಲ್ಲಿ ಒಮಿಕ್ರೋನ್‌ ಪತ್ತೆಯಾಗಿದೆ.

ಮುಡಿಪು ಕಾಲೇಜು ವಿದ್ಯಾರ್ಥಿಗಳು ಕಳೆದ ತಿಂಗಳು ಸೋಂಕಿತರಾಗಿ, ಗುಣಮುಖರಾಗಿದ್ದು, ಈಗ ಒಮಿಕ್ರೋನ್‌ ತಗುಲಿತ್ತು ಎಂದು ಪತ್ತೆಯಾಗಿದೆ. ಮಂಗಳೂರಿನ ಕಾಲೇಜು ವಿದ್ಯಾರ್ಥಿನಿಗೂ ಎರಡು ವಾರದ ಹಿಂದೆ ಸೋಂಕು ದೃಢಪಟ್ಟಿದ್ದು, ಆಕೆಯೂ ಗುಣಮುಖರಾಗಿದ್ದು, ತಡವಾಗಿ ವರದಿ ಬಂದಿದೆ. ಈ ವಿದ್ಯಾರ್ಥಿನಿ ಕೇರಳ ಮೂಲದ ವಿದೇಶ ಪ್ರಯಾಣಿಕರ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಇನ್ನು ವಿದೇಶದಿಂದ ಬಂದ ಯುವತಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎಲ್ಲರ ತಪಾಸಣೆ ಮಾಡಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಲಘು ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Omicron In Mumbai: ಕಠಿಣ ನಿರ್ಬಂಧ ಜಾರಿ: ರೈಲು, ಬಸ್ಸು, ಟ್ಯಾಕ್ಸಿ ಹತ್ತಲೂ ಲಸಿಕೆ ಕಡ್ಡಾಯ!

ಸಂಪರ್ಕಿತರ ಸಂಖ್ಯೆ ಹೆಚ್ಚು:
ನಾಲ್ವರು ಕಾಲೇಜು ವಿದ್ಯಾರ್ಥಿಗಳ 79 ಪ್ರಾಥಮಿಕ ಸಂಪರ್ಕಿತರು ಮತ್ತು 203 ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, 13 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿತ್ತು. ಈ ಪೈಕಿ 12 ಮಂದಿಯ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕು ದೃಢಪಟ್ಟಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ಗುಣಮುಖರಾಗಿದ್ದಾರೆ. ಮಂಗಳೂರಿನ ನರ್ಸಿಂಗ್‌ ಕಾಲೇಜ್‌ನ ಸೋಂಕಿತೆಯ ಸಂಪರ್ಕದಲ್ಲಿದ್ದ 335 ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಿದಾಗ 19 ಮಂದಿಯಲ್ಲಿ ಪಾಸಿಟಿವ್‌ ಕಂಡು ಬಂದಿತ್ತು. ಸೋಂಕಿತರ ಮಾದರಿಯನ್ನು ಡಿ.10ರಂದು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ ಯುವತಿಯ ಸಂಪರ್ಕದಲ್ಲಿದ್ದ 19 ಪ್ರಯಾಣಿಕರ ವರದಿಯೂ ನೆಗೆಟಿವ್‌ ಬಂದಿದೆ.

ಸಮುದಾಯಕ್ಕೆ ಹರಡಿದೆಯೇ ಸೋಂಕು:
ಶನಿವಾರ ಬೆಳಕಿಗೆ ಬಂದಿರುವ ಆರು ಪ್ರಕರಣಗಳಲ್ಲಿ ಐದು ಪ್ರಕರಣಗಳಿಗೆ ಟ್ರಾವೆಲ್‌ ಹಿಸ್ಟರಿಯೇ ಇಲ್ಲದಿರುವುದು ರಾಜ್ಯದಲ್ಲಿ ಒಮಿಕ್ರೋನ್‌ ಸಮುದಾಯಕ್ಕೆ ಹರಡಿದೆಯೇ ಎಂಬ ಸಂಶಯಕ್ಕೆ ಅನುವು ಮಾಡಿಕೊಟ್ಟಿದೆ. ಈ ಮೊದಲು ಟ್ರಾವೆಲ್‌ ಹಿಸ್ಟರಿಯೇ ಇಲ್ಲದ ಬೆಂಗಳೂರಿನ ವೈದ್ಯರೊಬ್ಬರಲ್ಲಿ ಒಮಿಕ್ರೋನ್‌ ಪತ್ತೆಯಾಗಿತ್ತು. ರಾಜ್ಯದಲ್ಲಿ ಈವರೆಗೆ ಆರು ಮಂದಿಗೆ ಟ್ರಾವೆಲ್‌ ಹಿಸ್ಟರಿ ಇಲ್ಲದಿದ್ದರೂ ಒಮಿಕ್ರೋನ್‌ ಬಂದಿದೆ.

Latest Videos
Follow Us:
Download App:
  • android
  • ios