Asianet Suvarna News Asianet Suvarna News

ಬ್ಯೂಟಿಪಾರ್ಲರ್‌ನಲ್ಲಿ ಮದುವೆಗೆ ಸಿದ್ದಗೊಳ್ಳುತ್ತಿದ್ದ ವಧುವನ್ನು ಗುಂಡಿಕ್ಕಿ ಕೊಂದ ಮಾಜಿ ಪ್ರೇಮಿ

ಮದುವೆಗೆ ಸಿದ್ಧಗೊಳ್ಳುತ್ತಿದ್ದ ವಧುವನ್ನು  ಹಸೆಮಣೆ ಏರುವುದಕ್ಕೆ ಇನ್ನೇನೋ ಕೆಲಗಂಟೆಗಳಿರುವಾಗ ಮಾಜಿ ಪ್ರೇಮಿಯೇ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. 

Bride getting ready for wedding shot dead by ex lover before the wedding at beauty parlor in Madhya Pradeshs Jhansi akb
Author
First Published Jun 24, 2024, 8:07 PM IST

ಲಕ್ನೋ: ಮದುವೆಗೆ ಸಿದ್ಧಗೊಳ್ಳುತ್ತಿದ್ದ ವಧುವನ್ನು  ಹಸೆಮಣೆ ಏರುವುದಕ್ಕೆ ಇನ್ನೇನೋ ಕೆಲಗಂಟೆಗಳಿರುವಾಗ ಮಾಜಿ ಪ್ರೇಮಿಯೇ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಹುಡುಗಿ ಮದುವೆಯ ದಿನದ ಅಲಂಕಾರಕ್ಕಾಗಿ ಬ್ಯೂಟಿಪಾರ್ಲರ್‌ನಲ್ಲಿ ರೆಡಿ ಆಗುತ್ತಿದ್ದಾಗಲೇ ಬಲವಂತವಾಗಿ ಒಳಗೆ ನುಗ್ಗಿದ ಮಾಜಿ ಪ್ರೇಮಿ ಆಕೆಯ ಮೇಲೆ ಸಮೀಪದಿಂದಲೇ ಹಲವು ಬಾರಿ ಗುಂಡಿಕ್ಕಿ  ಕೊಲೆ ಮಾಡಿದ್ದಾನೆ. ಮೃತತ ಯುವತಿಯನ್ನು 22 ವರ್ಷದ ಕಾಜಲ್ ಅಹಿರ್‌ವಾರ್ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶ ಡಟಿಯಾ ನಿವಾಸಿಯಾದ ಈಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತಾದರೂ ಅದು ಫಲ ನೀಡಲಿಲ್ಲ. 

ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತಿದ್ದ ವರನಿಗೆ ಚಾಕು ಇರಿದ ಮಾಜಿ ಪ್ರೇಮಿ

ಘಟನೆಯ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿರುವಂತೆ ಆತ ಕಾಜಲ್ ಹೊರಗಡೆ ಬಾ, ನೀನು ನಂಗೆ ಕೈ ಕೊಟ್ಟಿದ್ದೀಯಾ ಮೋಸ ಮಾಡಿದ್ದಿಯಾ ಎಂದು ಯುವಕ ಕಿರುಚುತ್ತಿರುವುದು ರೆಕಾರ್ಡ್ ಆಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಹೀಗೆ ಯುವತಿಯನ್ನು ಮದುವೆ ದಿನವೇ ಕೊಲೆ ಮಾಡಿದ ಯುವಕನನ್ನು ದೀಪಕ್ ಎಂದು ಗುರುತಿಸಲಾಗಿದ್ದು, ಕೃತ್ಯವೆಸಗುವ ವೇಳೆ ಆತ ಮುಖವನ್ನು ಮುಚ್ಚಿಕೊಂಡು ಜೋರಾಗಿ ಕಿರುಚಿ ಬಳಿಕ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಯ ನಂತರ ಆತ ಸ್ಥಳದಿಂದ ಓಡಿ ಹೋಗಿದ್ದಾನೆ.

ಬೆಂಗಳೂರು: ಮಾಜಿ ಪ್ರಿಯಕರನ ಕಾಟಕ್ಕೆ ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ!

ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಘಟನೆಯ ಬಳಿಕ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕೊಲೆಯಾದ ಯುವತಿಯ ಸೋದರಿ ಮಾತನಾಡಿದ್ದು, ನನ್ನ ಸೋದರಿ ಮದ್ವೆಗೆ ರೆಡಿ ಆಗುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಆತ ತನ್ನ ಜೊತೆ ಬಂದು ಬಿಡುವಂತೆ ನನ್ನ ಸೋದರಿಯನ್ನು ಕೇಳಿದ್ದಾನೆ. ಆದರೆ ಅದಕ್ಕೆ ಸೋದರಿ ನಿರಾಕರಿಸಿದಾಗ ಬಾಗಿಲನ್ನು ಮುರಿದು ಒಳಗೆ ಬಂದ ಆತ ಅಕ್ಕನ ಮೇಲೆ ಗುಂಡಿಕ್ಕಿದ್ದಾನೆ ಎಂದು ಕಾಜಲ್ ಸೋದರಿ ನೇಹಾ ಅಹಿರ್‌ವಾರ್‌ ಅಳುತ್ತಲೇ ಹೇಳಿದ್ದಾಳೆ. 

ಆತನ ಹಸೆರು ದೀಪಕ್, ಆತ ನಮ್ಮದೇ ಗ್ರಾಮದವ, ಇಂದು ನಮ್ಮ ಅಕ್ಕನ ಮದುವೆ ಇತ್ತು. ಹೀಗಾಗಿ ಸಿದ್ಧಗೊಳ್ಳುವುದಕ್ಕಾಗಿ ಆಕೆ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಳು. ಈ ವೇಳೆ ಬಂದ ದಾಳಿಕೋರ ಬೆನ್ನಿಗೊಂದು ಬ್ಯಾಗ್ ಧರಿಸಿದ್ದ, ಹಾಗೂ ಮುಖದ ಸುತ್ತ ಕರ್ಚಿಫ್‌ನಿಂದ ಸುತ್ತಿಕೊಂಡಿದ್ದ ಹಾಗೂ ನನ್ನ ಅಕ್ಕನನ್ನು ಜೊತೆಯಲ್ಲಿ ಬರುವಂತೆ ಆತ ಮೊದಲಿಗೆ ಕೇಳಿದ, ಅಲ್ಲದೇ ನನಗೇಕೆ ಮೋಸ ಮಾಡಿದ್ದೇಕೆ ಎಂದು ಕೇಳಿದ ಎಂದು ಮೃತಳ ಸೋದರಿ ಹೇಳಿದ್ದಾಳೆ. 

ಈಕೆ ದಾಟಿಯಾದಲ್ಲಿ ವಾಸ ಮಾಡುತ್ತಿದ್ದು, ಮೇಕಪ್ ಮಾಡಿಕೊಳ್ಳುವುದಕ್ಕಾಗಿ ಇಲ್ಲಿಗೆ ಬಂದಿದ್ದಳು.  ಆಕೆಯ ಜೊತೆ ನಾಲ್ವರು ಹುಡುಗಿಯರು ಬಂದಿದ್ದರು. ನಾನು ಇಲ್ಲಿಗೆ 6.30ಕ್ಕೆ ಬಂದಿದ್ದು, ಮೇಕಪ್ ಕೊನೆಹಂತದಲ್ಲಿ ಇತ್ತು. ಅಷ್ಟೊತ್ತಿಗೆ ಮುಖ ಮುಚ್ಚಿಕೊಂಡು ಬಂದ ಆತ ಕಾಜಲ್ ಪ್ಲೀಸ್ ಹೊರಗೆ ಬಾ ಎಂದು ಕೇಳಿದ ಈ ವೇಳೆ ಕಾಜಲ್ ಆತನ ಮಾತನ್ನು ತಿರಸ್ಕರಿಸಿ ಪಾರ್ಲರ್‌ನ ಡೋರ್‌ಗೆ ಒಳಗಿನಿಂದ ಬೋಲ್ಟ್ ಹಾಕಿದ್ದಾಳೆ.  ಈ ವೇಳೆ ಸಿಟ್ಟಿಗೆದ್ದ ಆತ ಗ್ಲಾಸ್‌ ಡೋರ್‌ನ್ನು ಒಡೆದು ಒಳಗೆ ಬಂದಿದ್ದು, ಆಕೆಗೆ ಗುಂಡಿಕ್ಕಿ ಓಡಿ ಹೋಗಿದ್ದಾನೆ. ಕೊಲೆ ಮಾಡಿದವನು ಕೊಲೆಯಾದವನು ಇಬ್ಬರೂ ಒಂದೇ ಊರಿನವರು, ಇಬ್ಬರು ಪರಸ್ಪರ ಗೊತ್ತಿರುವವರು ಆತ ಆಕೆಯನ್ನು ಯಾಕೆ ಕೊಲೆ ಮಾಡಿದ ಎಂಬ ಬಗ್ಗೆ ತನಿಖೆ ಮಾಡಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios