ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತಿದ್ದ ವರನಿಗೆ ಚಾಕು ಇರಿದ ಮಾಜಿ ಪ್ರೇಮಿ
ನಾನು ಪ್ರೀತಿಸುವ ಹುಡುಗಿನ್ನು ನೀನು ಹೇಗೆ ಮದುವೆಯಾಗುತ್ತೀಯ? ನೀನು ಅವಳನ್ನು ಬಿಟ್ಟುಬಿಡು ಎಂದು ಮದುವೆಯಾಗುವ ಹುಡುಗನ ಕುತ್ತಿಗೆಗೆ ಚಾಕು ಇರದ ಘಟನೆ ಕುಮಟಾದಲ್ಲಿ ನಡೆದಿದೆ.
ಉತ್ತರ ಕನ್ನಡ (ಮೇ 22): ಇದೊಂದು ಟ್ರೈಯಾಂಗಲ್ ಲವ್ ಸ್ಟೋರಿ ಆಗಿದೆ. ಒಂದೇ ಹುಡುಗಿಗೆ ಇಬ್ಬರು ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅದರಲ್ಲಿ ಯುವತಿಯ ಹಾಲಿ ಪ್ರಿಯಕರ ಹಾಗೂ ಮದುವೆ ಮಾಡಿಕೊಳ್ಳುವ ಯುವಕನಿಗೆ ಮಾಜಿ ಪ್ರೇಮಿಯೇ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ನಡೆದಿದೆ.
ಹೌದು, ಇದೊಂದು ಪಕ್ಕಾ ಟ್ರೈಯಾಂಗಲ್ ಲವ್ ಸ್ಟೋರಿ ಆಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಮಣಕಿ ಮೈದಾನದ ಬಳಿ ಘಟನೆ ನಡೆದಿದೆ. ಮಾಜಿ ಪ್ರಿಯಕರ ಬಂದು ಹಾಲಿ ಪ್ರಿಯಕರನ ಕಣ್ಣಿಗೆ ಕಾರದ ಪುಡಿ ಎರಚಿ, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಹಾಲಿ ಪ್ರೇಮಿ ದುಂಡಕುಳಿಯ ನಿವಾಸಿ ಸಂತೋಷ ಪಾಂಡುರಂಗ ಅಂಬಿಗ (27) ಆಗಿದ್ದಾನೆ. ಈತನಿಗೆ ಚಾಕು ಇರಿದ ಮಾಜಿ ಪ್ರಿಯಕರ ಹೆಗಡೆ ಚಿಟ್ಟಿಕಂಬಿ ನಿವಾಸಿ ರಾಜೇಶ ರಮೇಶ ಅಂಬಿಗ (27) ಎಂದು ತಿಳಿದುಬಂದಿದೆ.
ರಾಜ್ಯದ 7 ಪೊಲೀಸರನ್ನು ಕೊಂದ ಮೋಸ್ಟ್ ವಾಂಟೆಡ್ ನಕ್ಸಲ್ ಶಂಕರ ಬಿಬಿಎಂಪಿ ನೌಕರ
ಇನ್ನು ಆರೋಪಿ ರಾಜೇಶ ಅಂಬಿಗ ವಾಟರ್ ಸರ್ವಿಸ್ ಸ್ಟೇಷನ್‌ನಲ್ಲಿ ಕೆಲಸ ಮಾಡಿಕೊಂಡಿದ್ದನು. ರಾಜೇಶ ತನಗೆ ಪರಿಚಯದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಆದರೆ, ಈತನ ವರ್ತನೆ ಸರಿಯಿರದ ಕಾರಣ ಯುವತಿ ತನ್ನ ಮಾವನ ಮಗ ರಿಕ್ಷಾ ಚಾಲಕ ಸಂತೋಷನನ್ನು ಪ್ರೀತಿಸ್ತಿದ್ದಳು. ಅಲ್ಲದೇ, ಇಬ್ಬರೂ ಮದುವೆಯಾಗಲೂ ಇಚ್ಛಿಸಿದ್ದರು. ಇದಕ್ಕೆ ಸಿಟ್ಟಾದ ಆರೋಪಿ ರಾಜೇಶ ಕುಮಟಾದ ಮಣಕಿ ಮೈದಾನದ ಲೈಬ್ರೆರಿ ಬಳಿ ಸಂತೋಷನನ್ನು ಕರೆಯಿಸಿಕೊಂಡಿದ್ದನು. ತಾನು ಪ್ರೀತಿಸ್ತಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ಯಾ ಎಂದು ಗಲಾಟೆ ತೆಗೆದಿದ್ದನು.
ಈ ವೇಳೆ ಸಂತೋಷನಿಗೆ ಅವಾಚ್ಯ ಶಬ್ದಗಳಿಂದ ಬೈದು ಆತನ ಎದೆಗೆ ಕೈಯಿಂದ ಹೊಡೆದಿದ್ದನು. ಅಲ್ಲದೇ, ಕಣ್ಣಿಗೆ ಕಾರದ ಪುಡಿ ಎರಚಿದರೂ ಸಂತೋಷ ತಪ್ಪಿಸಿಕೊಂಡು ಓಡಲೆತ್ನಿಸಿದ್ದನು. ಈ ವೇಳೆ ನೀನು ನನ್ನಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಸಂತೋಷನ ಎಡ ಕುತ್ತಿಗೆ ಭಾಗಕ್ಕೆ ತಿವಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಆಗ ಸಂತೋಷನ ಸ್ನೇಹಿತರು ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಸಂತೋಷನನ್ನು ಕರೆದುಕೊಂಡು ಹೋಗುವಾಗ ನೀನು ನನ್ನ ಹುಡುಗಿಯನ್ನು ಹೇಗೆ ಮದುವೆಯಾಗ್ತೀಯ ನೋಡಿಕೊಳ್ತೇನೆ. ಇನ್ನೊಮ್ಮೆ ಸಿಕ್ಕಾಗ ಕೊಲೆ ಮಾಡಿ ನಾಪತ್ತೆ ಮಾಡೋದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಬೆಂಗಳೂರಿಗೆ ಐಟಿ ಸಿಟಿ ಹೆಸರು ಬಂದದ್ದು ಸಾರ್ಥಕವಾಯ್ತು; ಚಪ್ಪಲಿ ಖರೀದಿಸುತ್ತಲೇ ಮೀಟಿಂಗ್ ಅಟೆಂಡ್ ಮಾಡಿದ ಟೆಕ್ಕಿ
ಇನ್ನು ಗಾಯಾಳು ಸಂತೋಷನನ್ನು ಸ್ಥಳೀಯರು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ರವಾನೆ ಮಾಡಲಾಗಿದೆ. ಆರೋಪಿ ರಾಜೇಶ್ ರಮೇಶ ಅಂಬಿಗನನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.