Asianet Suvarna News Asianet Suvarna News

ಪ್ರಶ್ನೆಗಾಗಿ ಲಂಚ ಪ್ರಕರಣ: ಸಂಸದರ ಸಹಾಯಕರಿಗೆ ಸಂಸತ್ತಿನ ವೆಬ್‌ಸೈಟ್‌ ಲಾಗಿನ್‌ ಕಟ್‌

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಅಧಿಕೃತ ಇ-ಮೇಲ್‌ ಐಡಿ ಮೂಲಕ ಉದ್ಯಮಿಯೊಬ್ಬರು ನೇರವಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದ ವಿಚಾರ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಂಸದರ ಸಹಾಯಕರಿಗೆ ‘ಡಿಜಿಟಲ್‌ ಸಂಸದ’ ವೆಬ್‌ಸೈಟ್‌ನ ಲಾಗಿನ್‌ ಕಡಿತಗೊಳಿಸಿದೆ.

Bribe for Question Case Parliaments website login cutoff for MPs assistants akb
Author
First Published Nov 24, 2023, 9:21 AM IST

ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಅಧಿಕೃತ ಇ-ಮೇಲ್‌ ಐಡಿ ಮೂಲಕ ಉದ್ಯಮಿಯೊಬ್ಬರು ನೇರವಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದ ವಿಚಾರ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಂಸದರ ಸಹಾಯಕರಿಗೆ ‘ಡಿಜಿಟಲ್‌ ಸಂಸದ’ ವೆಬ್‌ಸೈಟ್‌ನ ಲಾಗಿನ್‌ ಕಡಿತಗೊಳಿಸಿದೆ. ಹೀಗಾಗಿ ಇನ್ನುಮುಂದೆ ಸಂಸದರೇ ತಮ್ಮ ಇ-ಮೇಲ್‌ ಐಡಿಯನ್ನು ಸಂಪೂರ್ಣವಾಗಿ ನಿಭಾಯಿಸಬೇಕು. ಅವರೇ ಪ್ರಶ್ನೆ ಕೇಳಬೇಕು, ಅವರೇ ಪ್ರಯಾಣದ ಬಿಲ್‌ಗಳನ್ನು ಸಲ್ಲಿಸಬೇಕಿದೆ.

ಅಲ್ಲದೆ, ಅಧಿಕೃತ ಇ-ಮೇಲ್‌ಗೆ ಬರುವ ನೋಟಿಸ್‌ಗಳು, ಪ್ರಶ್ನೆಗಳು ಹಾಗೂ ಇನ್ನಿತರ ಸರ್ಕಾರಿ ಮಾಹಿತಿಗಳನ್ನು ಸಂಸದರೇ ಖುದ್ದಾಗಿ ವೀಕ್ಷಿಸಬೇಕಿದೆ. ಅವರ ಸಹಾಯಕರಾಗಲಿ ಅಥವಾ ಅವರಿಗೆ ಸಂಬಂಧಿಸಿದ ಇನ್ನಾರೇ ಆಗಲಿ ವೆಬ್‌ಸೈಟಿಗೆ ಲಾಗಿನ್‌ ಮಾಡಲು ಸಾಧ್ಯವಿಲ್ಲದಂತೆ ಬ್ಲಾಕ್‌ ಮಾಡಲಾಗಿದೆ. ಆದರೆ, ಅನೇಕ ಸಂಸದರಿಗೆ ಇ-ಮೇಲ್‌ಗಳನ್ನು ನಿಭಾಯಿಸುವ ತಾಂತ್ರಿಕ ಜ್ಞಾನವಿಲ್ಲ. ಹೀಗಾಗಿ ಅವರು ಏನು ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Cash for Query: ಮಹುವಾ ಮೊಯಿತ್ರಾಗೆ ಸಂಕಷ್ಟ, ಸಂಸದ ಸ್ಥಾನ ಅನರ್ಹಗೊಳಿಸಲು ನೈತಿಕ ಸಮಿತಿ ಶಿಫಾರಸು!

ಕ್ರಮ ಕೈಗೊಂಡ ಲೋಕಸಭೆ ಸಚಿವಾಲಯ:

ಮಹುವಾ ಮೊಯಿತ್ರಾ ಪ್ರಕರಣದಿಂದ ಉಂಟಾದ ವಿವಾದದ ಕಾರಣದಿಂದ ಲೋಕಸಭಾ ಸಚಿವಾಲಯವು ಸಂಸದರ ಕಾರ್ಯದರ್ಶಿಗಳು ಹಾಗೂ ಖಾಸಗಿ ಸಹಾಯಕರಿಗೆ ಡಿಜಿಟಲ್‌ ಸಂಸದ ವೆಬ್‌ಸೈಟ್‌ ಮತ್ತು ಆ್ಯಪ್‌ನ ಸಂಪರ್ಕವನ್ನು ಕಡಿತಗೊಳಿಸಿದೆ. ಈ ಸಂಬಂಧ ಸುತ್ತೋಲೆಯನ್ನೂ ರವಾನಿಸಿದೆ.

‘ಡಿಜಿಟಲ್‌ ಸಂಸದ’ ವೆಬ್‌ಸೈಟ್‌ ಸೆ.1ರಿಂದ ಅಸ್ತಿತ್ವಕ್ಕೆ ಬಂದಿತ್ತು. ಆಗ ಸಂಸದರ ಸಹಾಯಕರು ಅಥವಾ ಕಾರ್ಯದರ್ಶಿಗಳಿಗೂ ಅದಕ್ಕೆ ಲಾಗಿನ್‌ ಆಗಲು ಅವಕಾಶ ನೀಡಲಾಗಿತ್ತು. ದರ್ಶನ್‌ ಹೀರಾನಂದಾನಿ ಎಂಬ ಉದ್ಯಮಿಯು ಮಹುವಾ ಅವರ ಇ-ಮೇಲ್‌ ಪಾಸ್‌ವರ್ಡ್‌ ಬಳಸಿ ನೇರವಾಗಿ ಸಂಸತ್ತಿಗೆ ಪ್ರಶ್ನೆ ಕೇಳಿದ ಪ್ರಕರಣ ಬೆಳಕಿಗೆ ಬಂದ ನಂತರ ಈಗ ಅದನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ.

'ರಾತ್ರಿ ಯಾರ ಜೊತೆ ಮಾತನಾಡ್ತೀರಿ..' ನೈತಿಕ ಸಮಿತಿಯ ಪ್ರಶ್ನೆಗೆ ಸಿಡಿಮಿಡಿಯಾದ ಮಹುವಾ ಮೊಯಿತ್ರಾ!

ಆರೋಪಗಳಿಂದ ಮಹುವಾಗೇ ಅನುಕೂಲ: ಮೌನ ಮುರಿದ ಮಮತಾ

ಕೋಲ್ಕತಾ: ಪ್ರಶ್ನೆಗಾಗಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೌನ ಮುರಿದಿದ್ದಾರೆ. ಗುರುವಾರ ಮಹುವಾರನ್ನು ಬೆಂಬಲಿಸಿ ಮಾತನಾಡಿದ ಮಮತಾ,‘ಬಿಜೆಪಿಯವರು ಮಹುವಾರನ್ನು ಲೋಕಸಭೆಯಿಂದ ಹೊರಕಳಿಸಲು ಭಾರಿ ಸಂಚು ರೂಪಿಸುತ್ತಿದ್ದಾರೆ. ಆದರೆ ಈ ಸಂಚು ಮಹುವಾಗೆ ಬರುವ ಲೋಕಸಭೆ ಚುನಾವಣೆಯಲ್ಲಿ ಬಹುದೊಡ್ಡ ಸಹಾಯ ಮಾಡುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸತ್‌ನಲ್ಲಿ ಪ್ರಶ್ನೆಗಾಗಿ ಲಂಚ: ಮಹುವಾ ಸಂಸತ್ ಐಡಿ ಬಳಸಿ ದುಬೈನಿಂದ 47 ಬಾರಿ ಲಾಗಿನ್

ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದಕ್ಕೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದೆ ನಿಶಿಕಾಂತ್‌ ದುಬೆ ದೂರು ನೀಡಿದ್ದರು. ಹೀಗಾಗಿ ಮಹುವಾ ಸಂಸತ್‌ ಸದಸ್ಯತ್ವ ರದ್ದತಿಗೆ ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಸ್ಪೀಕರ್‌ ಇನ್ನೂ ನಿರ್ಣಯ ಕೈಗೊಂಡಿಲ್ಲ.

Latest Videos
Follow Us:
Download App:
  • android
  • ios