Cash for Query: ಮಹುವಾ ಮೊಯಿತ್ರಾಗೆ ಸಂಕಷ್ಟ, ಸಂಸದ ಸ್ಥಾನ ಅನರ್ಹಗೊಳಿಸಲು ನೈತಿಕ ಸಮಿತಿ ಶಿಫಾರಸು!

ಸಂಸತ್ತಿನಲ್ಲಿ ಪ್ರಶ್ನೆಗಾಗಿ ಹಣ ಹಗರಣದ ವಿಚಾರದಲ್ಲಿ ನೈತಿಕ ಸಮಿತಿಯು ಕಾಲಮಿತಿಯ ತನಿಖೆಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಹಿರಾನಂದನಿ ಅವರೊಂದಿಗಿನ ಪ್ರಕರಣ ಸೂಕ್ತ ತನಿಖೆಗೆ ಅರ್ಹವಾಗಿದೆ ಎಂದು ಲೋಕಸಭೆಯ ನೈತಿಕ ಸಮಿತಿ ಭಾರತ ಸರ್ಕಾರಕ್ಕೆ ಶಿಫಾರಸು ಮಾಡಿದೆ.

Cash for query TMC MP Mahua Moitra problems will increase Ethics Committee recommends termination of MP san

ನವದೆಹಲಿ (ನ.8):  ಸಂಸತ್ತಿನಲ್ಲಿ ಪ್ರಶ್ನೆ  ಕೇಳಲು ಹಣ ಪಡೆದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರ ಸಂಕಷ್ಟಗಳು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಈಗ ಮೂಲಗಳನ್ನು ಉಲ್ಲೇಖಿಸಿ, ಲೋಕಸಭೆಯ ನೈತಿಕ ಸಮಿತಿಯು ಮಹುವಾ ಅವರನ್ನು ಸಂಸತ್ತಿನಿಂದ ಸನರ್ಹ ಮಾಡಲು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಕ್ಯಾಶ್‌ ಫಾರ್‌ ಕ್ವೇರಿ ಆರೋಪದ ವಿಚಾರಣೆ ಮಾಡಿದ್ದ ಲೋಕಸಭೆಯ ನೈತಿಕ ಸಮಿತಿಯು ಕಾಲಮಿತಿಯ ತನಿಖೆಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಹಿರಾನಂದನಿ ಅವರ ಜೊತೆಗಿನ ಮಹುವಾ ಅವರಿನ ವ್ಯವಹಾರವನ್ನು ಸೂಕ್ತವಾಗಿ ತನಿಖೆ ಮಾಡಬೇಕು ಎಂದು ಭಾರತ ಸರ್ಕಾರಕ್ಕೆ ನೈತಿಕ ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಹಂಚಿಕೊಂಡ ಆರೋಪದ ಮೇಲೆ, ಈ ಗಂಭೀರ ಅಪರಾಧಕ್ಕಾಗಿ ಮಹುವಾಗೆ ಕಠಿಣ ಶಿಕ್ಷೆ ನೀಡಬೇಕು ಎಂದೂ ಸಮಿತಿ ತಿಳಿಸಿದೆ.

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪ ದೇಶದಾದ್ಯಂತ ಸುದ್ದಿಯಾಗುತ್ತಿರುವಾಗ,  ಮಹುವಾ ಮೊಯಿತ್ರಾ ಅವರು ತಮ್ಮ ಲಾಗಿನ್ ಐಡಿ ಮತ್ತು ಲೋಕಸಭಾ ವೆಬ್‌ಸೈಟ್‌ನ ಪಾಸ್‌ವರ್ಡ್ ಅನ್ನು ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ ಹಂಚಿಕೊಂಡಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಮಹುವಾ ಮೊಯಿತ್ರಾ ಪರವಾಗಿ ದರ್ಶನ್‌ ಹಿರಾನಂದನಿ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು.

ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರ ವರ್ತನೆಯನ್ನು ಕೂಡ ನೈತಿಕ ಸಮಿತಿ ಖಂಡಿಸಿದೆ. ವಾಸ್ತವವಾಗಿ, ನವೆಂಬರ್ 2 ರಂದು ಮಹುವಾ ಮೊಯಿತ್ರಾ ಅವರು ನೈತಿಕ ಸಮಿತಿಯು ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿದರು. ಎಥಿಕ್ಸ್ ಕಮಿಟಿ ಪ್ರಕಾರ, ಇದಾದ ನಂತರ ಡ್ಯಾನಿಶ್ ಅಲಿ ಪ್ರಶ್ನೆಗಳನ್ನು ತಿರುಚಿದರು, ಸಾರ್ವಜನಿಕ ಭಾವನೆಗಳನ್ನು ಕೆರಳಿಸಿದರು ಮತ್ತು ಸಮಿತಿಯ ಅಧ್ಯಕ್ಷರು ತಮನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದರು.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಹುವಾ ಮೊಯಿತ್ರಾ ಅವರು ಸಂಸತ್ತಿನ ಐಡಿಯ ಲಾಗ್-ಇನ್ ಪಾಸ್‌ವರ್ಡ್ ಅನ್ನು ಬೇರೆಯವರಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದರು, ಇಲ್ಲಿಂದ ಇನ್ನೊಬ್ಬ ವ್ಯಕ್ತಿ ಉದ್ಯಮಿ ಗೌತಮ್ ಅದಾನಿ ಅವರನ್ನು ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿಗೆ ಲೋಕಸಭೆಯ ವೆಬ್‌ಸೈಟ್‌ಗೆ ಲಾಗಿನ್ ಐಡಿ ನೀಡಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದರು. ಈ ಬಗ್ಗೆ ದುಬೆ ಅವರು ಐಟಿ ಸಚಿವರಿಗೆ ದೂರು ನೀಡಿದ್ದರು. ಈ ಆರೋಪಗಳು ಸುಳ್ಳು ಎಂದು ಮಹುವಾ ಮೊದಲು ತಿಳಿಸಿದ್ದರು. ಉದ್ಯಮಿ ಹಿರಾನಂದಾನಿ ನಂತರ ಮಹುವಾ ಅವರ ಪರವಾಗಿ ಪ್ರಶ್ನೆಗಳನ್ನು ಕೇಳಲು ಸಂಸತ್ತಿನ ಲಾಗಿನ್ ಪಾಸ್‌ವರ್ಡ್ ನೀಡಿದ್ದರು ಎಂದು ತಪ್ಪೊಪ್ಪಿಕೊಂಡಿದ್ದರು.

'ರಾತ್ರಿ ಯಾರ ಜೊತೆ ಮಾತನಾಡ್ತೀರಿ..' ನೈತಿಕ ಸಮಿತಿಯ ಪ್ರಶ್ನೆಗೆ ಸಿಡಿಮಿಡಿಯಾದ ಮಹುವಾ ಮೊಯಿತ್ರಾ!

ಇದಾದ ಬಳಿಕ ನೈತಿಕ ಈ ವಿಚಾರವಾಗಿ ವಿಚಾರಣೆ ನಡೆಸಿದರು ಅಲ್ಲಿ ಗಲಾಟೆಯೇ ನಡೆಯಿತು. ಮಹುವಾ ಅವರೊಂದಿಗಿನ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ಸಂಸದರು ಸಮಿತಿಯು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದೆ ಎಂದು ಆರೋಪಿಸಿದರು, ನಂತರ ಅವರು ಸಭೆಯನ್ನು ಬಹಿಷ್ಕರಿಸಿದರು. ರಾತ್ರಿಯಲ್ಲಿ ಯಾರೊಂದಿಗೆ ಮಾತನಾಡುತ್ತಾಳೆ ಎಂದು ಮಹುವಾ ಅವರನ್ನು ಕೇಳಲಾಯಿತು ಎಂಬ ಆರೋಪಗಳನ್ನು ಮಾಡಿದ್ದರು. 

ಸಂಸತ್‌ನಲ್ಲಿ ಪ್ರಶ್ನೆಗಾಗಿ ಲಂಚ: ಮಹುವಾ ಸಂಸತ್ ಐಡಿ ಬಳಸಿ ದುಬೈನಿಂದ 47 ಬಾರಿ ಲಾಗಿನ್

Latest Videos
Follow Us:
Download App:
  • android
  • ios