ಸಂಸತ್‌ನಲ್ಲಿ ಪ್ರಶ್ನೆಗಾಗಿ ಲಂಚ: ಮಹುವಾ ಸಂಸತ್ ಐಡಿ ಬಳಸಿ ದುಬೈನಿಂದ 47 ಬಾರಿ ಲಾಗಿನ್
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ವಿಚಾರಣೆಗೆ ಲೋಕಸಭೆಯ ನೈತಿಕ ಸಮಿತಿ ಮುಂದೆ ಇಂದು ಹಾಜರಾಗಲಿದ್ದಾರೆ. ಇದರ ನಡುವೆ ಅವರ ವಿರುದ್ಧ ಆರೋಪಗಳ ಸರಣಿ ಮುಂದುವರಿದಿದೆ.
ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ವಿಚಾರಣೆಗೆ ಲೋಕಸಭೆಯ ನೈತಿಕ ಸಮಿತಿ ಮುಂದೆ ಇಂದು ಹಾಜರಾಗಲಿದ್ದಾರೆ. ಇದರ ನಡುವೆ ಅವರ ವಿರುದ್ಧ ಆರೋಪಗಳ ಸರಣಿ ಮುಂದುವರಿದಿದ್ದು, ದುಬೈನಿಂದ ಮಹುವಾ ಅವರ ಸಂಸದೀಯ ಇ-ಮೇಲ್ ಖಾತೆಗೆ (parliamentary e-mail account) 47 ಬಾರಿ ಲಾಗ್ ಇನ್ ಆಗಿವೆ ಎಂದು ಮೂಲಗಳು ಹೇಳಿವೆ.
ಉದ್ಯಮಿ ದರ್ಶನ್ ಹೀರಾನಂದಾನಿ ಅವರು ' ಇತ್ತೀಚೆಗೆ ತಾವು ಮಹುವಾ ಅವರ ಸಂಸದೀಯ ಇ-ಮೇಲ್ ಐಡಿ (E-mail) ಬಳಸಿ, ಮೋದಿ ಸರ್ಕಾರವನ್ನು ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳನ್ನು ಕೇಳಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಹುವಾ ಭಾರತದಲ್ಲಿದ್ದರೂ ಅವರ ಇ-ಮೇಲ್ ಐಡಿ ಬಳಸಿ ದುಬೈನಿಂದ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಪ್ರಕರಣ ಬಯಲಿಗೆ ಎಳೆದಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಆರೋಪಿಸಿದ್ದರು.
ಸರ್ಕಾರಿ ಪ್ರಾಯೋಜಿತ ದಾಳಿ ಸಂದೇಶ ವಿವಾದ: ಸಂಸತ್ತಿನ ಐಟಿ ಸಮಿತಿಯಿಂದ ಆ್ಯಪಲ್ ಕಂಪನಿಗೆ ಸಮನ್ಸ್ ಸಾಧ್ಯತೆ
ಈ ನಡುವೆ ಬುಧವಾರ ಮಾತನಾಡಿದ ದುಬೆ, 47 ಸಲ ಮಹುವಾ ಅವರ ಐಡಿ ದುಬೈನಿಂದ ಲಾಗಿನ್ ಆಗಿದ್ದೇ ನಿಜವಾದರೆ ಭಾರತದ ಎಲ್ಲ ಸಂಸದರು ಅವರ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದ್ದಾರೆ.
ಸ್ಟೈಲಿಶ್ ಲುಕ್ ಫುಲ್ ಗಿಮಿಕ್: ಮೋದಿ ವಿರುದ್ಧ ಸದಾ ಕಿಡಿಕಾರ್ತಿದ್ದ ಟಿಎಂಸಿ ಸಂಸದೆ ಬಣ್ಣ ಬಯಲು ಮಾಡಿದ್ರಾ ಉದ್ಯಮಿ...!
ಈ ನಡುವೆ ಮಹುವಾ ಮೊಯಿತ್ರಾ, ತಾವು ಇಂದು ನೈತಿಕ ಸಮಿತಿ ಮುಂದೆ ನೀಡುವ ಹೇಳಿಕೆಯನ್ನು ಬುಧವಾರವೇ ಬಿಡುಗಡೆ ಮಾಡಿದ್ದು, ನಾನು ಈ ಪ್ರಕರಣದಲ್ಲಿ ಕೆಲವು ಕ್ರಿಮಿನಲ್ ಆರೋಪಗಳನ್ನು ಮಾಡಿದ್ದೇನೆ. ಅದರ ವಿಚಾರಣೆ ಅಧಿಕಾರ ನೈತಿಕ ಸಮಿತಿಗೆ ಇಲ್ಲ ಎಂದಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಆರೋಪ ಮಾಡಿರುವ ಉದ್ಯಮಿ ಹೀರಾನಂದಾನಿಯ ಪಾಟೀ ಸವಾಲಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಶ್ನೆಗಾಗಿ ಲಂಚ ಕೇಸ್: ಉದ್ಯಮಿಗೆ ಪಾಸ್‌ವರ್ಡ್ ನೀಡಿದ್ದು ನಿಜವೆಂದು ಒಪ್ಪಿಕೊಂಡ ಟಿಎಂಸಿ ಸಂಸದೆ
ಇಂದು ವಿಚಾರಣೆ: ಪ್ರಕರಣ ಸಂಬಂಧ ನ.2ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾಗೆ ಸಂಸತ್ತಿನ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಮಹುವಾ ಖಚಿತಪಡಿಸಿದ್ದಾರೆ.