Asianet Suvarna News Asianet Suvarna News

ನೋಟ್ಸ್‌ ಬರೀ ಎಂದ ಟೀಚರ್ ಜೊತೆ ಪುಟ್ಟ ಬಾಲಕನ ಜಗಳ : ವಿಡಿಯೋ ವೈರಲ್‌

  • ಪುಟ್ಟ ಬಾಲಕನ ವಿಡಿಯೋ ವೈರಲ್
  • ನೋಟ್ಸ್‌ ಬರೀ ಅಂದಿದ್ದಕ್ಕೆ ಸಿಟ್ಟಾದ ಬಾಲಕ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Boy fighting with teacher in school video goes viral akb
Author
Bangalore, First Published May 17, 2022, 5:43 PM IST

ಬಾಲ್ಯದ ತುಂಟಾಟಗಳು ಮಕ್ಕಳ ಆಟಗಳನ್ನು ಮರೆಯಲು ಸಾಧ್ಯವಿಲ್ಲ. ಅದರಂತೆ ಮಕ್ಕಳಲ್ಲಿರುವ ಮುಗ್ಧತೆ ಎಂಥವರನ್ನು ಒಂದು ಕ್ಷಣ ಅವರನ್ನು ಮೆಚ್ಚಿ ಮುದ್ದಾಡುವಂತೆ ಮಾಡುತ್ತದೆ. ಹಾಗೆಯೇ ಈಗಿನ ಮಕ್ಕಳು ಕೊಡುವ ಕೆಲ ಉತ್ತರಗಳು ಎಲ್ಲರನ್ನು ಬೆಚ್ಚಿ ಬೀಳಿಸುವಂತಿರುತ್ತದೆ. ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ಶಾಲೆಯಲ್ಲಿ ನೋಟ್ಸ್‌ ಬರೆಯಲು ಹೇಳಿದ ಟೀಚರ್‌ ಜೊತೆ ಪುಟ್ಟ ಬಾಲಕ ಜಗಳ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಮಕ್ಕಳನ್ನು ಬರೆಸಿ ಓದಿಸುವುದು ಎಷ್ಟು ಕಷ್ಟದ ಕೆಲಸ ಎಂಬುದು ಸಣ್ಣ ಮಕ್ಕಳಿರುವ ಪ್ರತಿಯೊಬ್ಬ ಪೋಷಕರಿಗೂ ಗೊತ್ತು. ಅದರಲ್ಲೂ ಈಗಿನ ಮಕ್ಕಳಂತು ಓದಲು ಬರೆಯಲು ಕಷ್ಟ ಪಡುವುದು ನೋಡಿದರೆ ಅಯ್ಯೋ ಯಾಕಾದರೂ ಹೀಗೆ ಮಾಡುತ್ತಾರೋ ಅನಿಸುವುದು. ಹಾಗೆಯೇ ಇಲ್ಲೊಬ್ಬ ಬಾಲಕ ಶಾಲಾ ಶಿಕ್ಷಕಿ ಜೊತೆ ನೋಟ್ಸ್ ಬರೆಯಲು ಹೇಳಿದ್ದಕ್ಕೆ ಜಗಳವಾಡಿದ್ದಾನೆ. 

 
 
 
 
 
 
 
 
 
 
 
 
 
 
 

A post shared by Bhutni_ke (@bhutni_ke_memes)

ವಿಡಿಯೋದಲ್ಲಿ ಕಾಣಿಸುತ್ತಿರುವಂತೆ ಶಾಲಾ ಬಾಲಕ ಶಾಲೆಯಲ್ಲಿ ತರಗತಿಯ ಮೊದಲ ಬೆಂಚಿನಲ್ಲಿ ಕುಳಿತಿದ್ದಾನೆ. ಅಲ್ಲದೇ ತನ್ನ ಪುಸ್ತಕದಲ್ಲಿ ಬರೆದಿರುವುದುನ್ನು ಅಳಿಸಿ ಹಾಕುವುದರಲ್ಲಿ ಮಗ್ನನಾಗಿದ್ದಾನೆ. ಕೋಪ ಬಂದಂತೆ ಕಾಣುವ ಆತನನ್ನು ನೋಡಿದ ಶಿಕ್ಷಕಿ ತಮಾಷೆಯಿಂದ ಎಲ್ಲವನ್ನು ಅಳಿಸಿ ಹಾಕಿದೆಯೋ ಎಂದು ಬಾಲಕನನ್ನು ಕೇಳುತ್ತಾರೆ. ಈ ವೇಳೆ ಟೀಚರ್‌ ಅನ್ನು ಕೋಪದಿಂದ ಬಾಲಕ ನೋಡುತ್ತಾನೆ. ಈ ವೇಳೆ ಇನ್ನೊಬ್ಬರು ಶಿಕ್ಷಕಿ ಸಿಟ್ಟೇಕೆ ಬರುತ್ತಿದೆ ಬರೆಯಲು ಹೇಳಿದರೆ ಸಿಟ್ಟೇಕೆ ಬರುತ್ತಿದೆ ಎಂದು ಕೇಳುತ್ತಾರೆ. 

ದೇಶಭಕ್ತಿ ಗೀತೆ ಹಾಡಿದ ಬಾಲಕ: ಚಿಟಿಕೆ ಹೊಡೆದು ಪ್ರೋತ್ಸಾಹಿಸಿದ ಪ್ರಧಾನಿ

ಇದಕ್ಕೆ ಸಿಟ್ಟು ಹಾಗೂ ಆಕ್ರೋಶದಿಂದ ಪ್ರತಿಕ್ರಿಯಿಸಿದ ಪುಟ್ಟ ಬಾಲಕ, ನಿಮ್ಮನ್ನು ನೋಡಿಯೇ ಸಿಟ್ಟು ಬರ್ತಿದೆ. ಇನ್ಯಾರನ್ನೋ ನೋಡಿ ಅಲ್ಲ ಎಂದು ಜೋರಾಗಿ ಅಳುವಿನ ಕಂಠದೊಂದಿಗೆ ಹೇಳುತ್ತಾನೆ. ಅಳು ಹಾಗೂ ಸಿಟ್ಟಿನೊಂದಿಗೆ ಪುಟ್ಟ ಬಾಲಕ ನೀಡಿದ ಉತ್ತರಕ್ಕೆ ಇಡೀ ತರಗತಿ ನಗಲು ಶುರು ಮಾಡುತ್ತದೆ. ಆದರೆ ಬಾಲಕ ಟೀಚರ್ ಹೇಳಿದ್ದನ್ನು ಇನ್ನೂ ಬರೆದು ಮುಗಿಸಿರಲಿಲ್ಲ. ಅಲ್ಲದೇ ಟೀಚರ್ ನನ್ನನ್ನು ನೋಡಿ ಏಕೆ ಸಿಟ್ಟು ಬರ್ತಿದೆ ಎಂದು ಬಾಲಕನಲ್ಲಿ ವಾಪಸ್ ಕೇಳುತ್ತಾರೆ. ಅದಕ್ಕೆ ಬಾಲಕ ಸಿಟ್ಟು ಬರುತ್ತೆ ನಂಗೆ ನಿಮ್ಮನ್ನು ನೋಡಿ, ನಾನು ಬಂದಿದ್ದೇನಲ್ಲ ಅದಕ್ಕೆ ಸಿಟ್ಟು ಬರುತ್ತೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಿಕ್ಷಕಿ ಹಾಗಿದ್ರೆ ನಿಂಗೆ ಬಾರಿಸಿ ಬಿಡುವೆ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಬಾಲಕ ಅಷ್ಟೇ ಆಕ್ರೋಶ ಹಾಗೂ ಅಳುಮುಖದಿಂದ ಹಾಗಿದ್ರೆ ಬಾರಿಸಿ ಬಿಡಿ ಮತ್ತೆ ಎಂದು ಉತ್ತರಿಸುತ್ತಾನೆ. 

ಬಾಲಕನ ಒಂದೊಳ್ಳೆ ಕೆಲಸಕ್ಕೆ ನೆಟ್ಟಿಗರು ಫಿದಾ : ವಿಡಿಯೋ ವೈರಲ್

ಟೀಚರ್‌ಗೆ ಪುಟ್ಟ ಬಾಲಕನ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಿಟ್ಟಿನಲ್ಲೂ ಪುಟ್ಟ ಬಾಲಕ ಮುದ್ದಾಗಿ ಕಾಣುತ್ತಿದ್ದಾನೆ. ಇನ್ನು ಬಾಲಕನ ವಿಡಿಯೋ ನೋಡಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಗುಡ್ ಚೋಟೆ ವಾವ್ ಎಂದು ಬರೆದಿದ್ದರೆ, ಇನ್ನೊಬ್ಬರು  ಈಗಿನ ಕಾಲದ ಮಕ್ಕಳು ಎಂದು ಕಾಮೆಂಟ್ ಮಾಡಿದ್ದಾರೆ. 

ಕೆಲದಿನಗಳ ಹಿಂದೆ ವಿದ್ಯಾರ್ಥಿಯೋರ್ವ ಬರೆದ ಕ್ಷಮೆಯಾಚನೆಯ ಪತ್ರವನ್ನು ದೆಹಲಿಯ  ಸರ್ಕಾರಿ ಶಾಲೆಯೊಂದರ  ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಶಿಕ್ಷಕಿ ಮಧು ಗುಲಾಟಿ (Madhu Gulati) ಅವರು ವಿದ್ಯಾರ್ಥಿಯೊಬ್ಬರು ಬರೆದ 'ಕ್ಷಮಾಪಣೆಯ ಪತ್ರ'ವನ್ನು ಟ್ವಿಟರ್‌ನಲ್ಲಿ  ಹಂಚಿಕೊಂಡಿದ್ದರು. ಈ ಪತ್ರ ಅಥವಾ ಟಿಪ್ಪಣಿ ಅವರ ಇಂಗ್ಲೀಷ್‌ ಪಠ್ಯದ ಭಾಗವಾಗಿತ್ತು. ಶಿಕ್ಷಕಿ ಗುಲಾಟಿ ಅವರು ತನ್ನ ವಿದ್ಯಾರ್ಥಿಗಳಿಗೆ, 'ತನ್ನ ಸಹೋದರಿಯ ಮದುವೆಗೆ ಹಾಜರಾಗಲು ರಜೆ ಸಿಗದ ಸೈನಿಕ' ತಾನು ಎಂಬ ಕಲ್ಪನೆಯಿಂದ ಕ್ಷಮಾಪಣಾ ಪತ್ರ ಬರೆಯುವಂತೆ ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗೆ ಹೇಳಿದರು.

ಅದರಂತೆ ಎಲ್ಲಾ ವಿದ್ಯಾರ್ಥಿಗಳು (Student) ಟಿಪ್ಪಣಿ ಬರೆದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ಬರೆದ ಟಿಪ್ಪಣಿ ಅಥವಾ ಕ್ಷಮಾಪಣಾ ಪತ್ರ ಶಿಕ್ಷಕಿಯ ಹೃದಯ ಗೆದ್ದಿತ್ತು. ಅಲ್ಲದೇ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಆ ಪತ್ರದ ಪೋಸ್ಟ್ ವೈರಲ್ ಆಗಿತ್ತು.
 

Follow Us:
Download App:
  • android
  • ios