ಟಿಕೆಟ್ ಇಲ್ಲದೇ ಪ್ರಯಾಣಿಸಲು ಹುಡುಗಿ ವೇಷ ಧರಿಸಿ ತಗಲಾಕೊಂಡ ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡುತ್ತಿರುವ ಎಎಪಿ ಸರ್ಕಾರ ಸವಲತ್ತನ್ನು ಬಳಸಿಕೊಳ್ಳಲು ಮುಂದಾದ ಯುವಕ! ಹುಡುಗಿ ವೇಷ ಧರಿಸಿ ಸಿಕ್ಕಿಬಿದ್ದ
ನವದೆಹಲಿ(ಮಾ.25): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರವೂ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಿದೆ. ಇದನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾದ ಯುವಕನೋರ್ವ ತಲೆಗೆ ಹಿಜಾಬ್ ರೀತಿ ಬಟ್ಟೆ ಸುತ್ತಿಕೊಂಡು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹುಡುಗಿಯಂತೆ ವೇಷ ಧರಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ. ಇದು ಬಸ್ ನಿರ್ವಾಹಕನ ಗಮನಕ್ಕೆ ಬಂದಿದ್ದು, ಸಂಶಯ ಬಂದ ಆತ ಮಾಸ್ಕ್ ತೆಗೆಯುವಂತೆ ಯುವಕನಲ್ಲಿ ಕೇಳಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ಮಾಸ್ಕ್ ತೆಗೆಯಲು ಯುವಕ ಮುಂದಾಗಿಲ್ಲ.ಇದರಿಂದ ಸುಮಾರು ಹೊತ್ತು ಬಸ್‌ನಲ್ಲಿ ಯುವಕ ಹಾಗೂ ಕಂಡಕ್ಟರ್‌ಗೆ(Conducter) ವಾದ ವಿವಾದ ಉಂಟಾಗಿದೆ. ಕಂಡಕ್ಟರ್ ಆತ ಮಾಸ್ಕ್ ಹಾಗೂ ತಲೆಗವಸು ತೆಗೆಯುವವರೆಗೂ ಬಿಟ್ಟಿಲ್ಲ. ಹೀಗಾಗಿ ಕೊನೆಗೂ ಆತ ಮಾಸ್ಕ್ (Mask) ಕಳಚಿದ್ದು, ಆತ ಹುಡುಗಿಯಲ್ಲ ಎಂಬುದು ಗೊತ್ತಾಗಿದೆ.
ಇನ್ನು ಸ್ವಾರಸ್ಯಕರ ವಿಚಾರವೆಂದರೆ ಈತ ಪ್ಯಾಂಟ್ ಶರ್ಟ್ ಧರಿಸಿದ್ದು, ಹೆಣ್ಣು ಮಕ್ಕಳಂತೆ ಕೈಯಲ್ಲೊಂದು ವ್ಯಾನಿಟಿ ಬ್ಯಾಗ್ ಹಿಡಿದಿದ್ದ. ಆದರೆ ಈತನ ಹಾವಭಾವ ಗಂಡಿನಂತೆ ಕಂಡಕ್ಟರ್‌ಗೆ ಕಂಡ ಪರಿಣಾಮ ಎಡವಟ್ಟಾಗಿದೆ.ಅಲ್ಲದೇ ಈ ದೃಶ್ಯವನ್ನು ಕಂಡಕ್ಟರ್ ವಿಡಿಯೋ ಮಾಡಿಕೊಂಡಿದ್ದಾನೆ. ಒಟ್ಟಿನಲ್ಲಿ ರಾಜಧಾನಿ ದೆಹಲಿಯಲ್ಲಿ(delhi) ಮಹಿಳೆ ವೇಷ ಧರಿಸಿ ಪುರುಷನೊಬ್ಬ ಉಚಿತ ಬಸ್ ಪ್ರಯಾಣಕ್ಕೆ ತೆರಳಿರುವ ಘಟನೆ ಸಂಚಲನ ಮೂಡಿಸಿದೆ. ತಮಿಳುನಾಡಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಮಹಿಳೆಯರು ಸಿಟಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಿಸಲಾಗಿತ್ತು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. 2019ರಿಂದ ದೆಹಲಿಯಲ್ಲಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಕೇಜ್ರಿವಾಲ್ ಸರ್ಕಾರ ನೀಡಿದೆ. ಡಿಟಿಸಿ ಬಸ್ಸುಗಳು ಮತ್ತು ದೆಹಲಿ ಮೆಟ್ರೊಗಳಲ್ಲಿ (Delhi Metro) ಮಹಿಳೆಯರಿಗೆ ಉಚಿತ ಸವಾರಿ ಯೋಜನೆಗಾಗಿ ದೆಹಲಿ ಹಣಕಾಸು ಸಚಿವ ಮನೀಶ್ ಸಿಸೋಡಿಯಾ (Manish Sisodiya) ಅವರು 2019 ರ ಅಕ್ಟೋಬರ್‌ನಲ್ಲಿ 290 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರು.
ಅಗತ್ಯ ಸೇವೆ ನೀಡುವ ಎಲ್ಲ ಸಿಬ್ಬಂದಿಗೆ ಉಚಿತ ಬಸ್ ಪಾಸ್, ಪಡೆದುಕೊಳ್ಳೋದು ಹೇಗೆ?
ಮಾನ್ಸೂನ್ ಅಧಿವೇಶನದಲ್ಲಿ ಅನುದಾನವನ್ನು ಮಂಡಿಸುವಾಗ ಸಿಸೋಡಿಯಾ ಅವರು 290 ಕೋಟಿ ರೂ.ಗಳಲ್ಲಿ 140 ಕೋಟಿ ರೂ.ಗಳನ್ನು ಡಿಟಿಸಿ ಮತ್ತು ಅದರ ಕ್ಲಸ್ಟರ್ ಬಸ್‌ಗಳಿಗೆ ಹಂಚಿಕೆ ಮಾಡಲಾಗಿದ್ದು, 150 ಕೋಟಿ ರೂ.ಗಳನ್ನು ದೆಹಲಿ ಮೆಟ್ರೋಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಭಾಯ್ದೂಜ್ ಹಬ್ಬಕ್ಕೆ ರಾಷ್ಟ್ರ ರಾಜಧಾನಿಯ ಮಹಿಳೆಯರಿಗೆ ಈ ಬಂಪರ್ ಗಿಫ್ಟ್ ನೀಡಿದ್ದರು. ಕಳೆದ 2019ರ ಅಕ್ಟೋಬರ್ 29ರಂದು ದೆಹಲಿ ಸಾರಿಗೆ ಬಸ್(ಡಿಟಿಸಿ)ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಅವರ ಭದ್ರತೆಗಾಗಿ ಬಸ್ ಮಾರ್ಷಲ್ ಗಳ ಸಂಖ್ಯೆಯನ್ನು 13 ಸಾವಿರಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದರು.
Free Bus: ಗಾರ್ಮೆಂಟ್ಸ್ ಮಹಿಳಾ ಸಿಬ್ಬಂದಿಗೆ ಫ್ರೀ ಬಸ್‌ಪಾಸ್
ಸಾರ್ವಜನಿಕರ ಭದ್ರತೆಗಾಗಿ 12 ಸಾವಿರಕ್ಕೂ ಹೆಚ್ಚು ಮಾರ್ಷಲ್ ಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಭದ್ರತೆಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಲೈಂಗಿಕ ಕಿರುಕುಳದಂತಹ ಘಟನೆಗಳನ್ನು ತಡೆಯಲು ದೆಹಲಿ ಸಾರಿಗೆ ಬಸ್ ಗಳನ್ನು ಮಾರ್ಷಲ್ ಗಳನ್ನು ನೇಮಿಸಲಾಗಿದೆ. ಕೇವಲ ಬಸ್‌ಗಳಷ್ಟೇ ಅಲ್ಲದೆ ಮೆಟ್ರೋದಲ್ಲೂ ಕೂಡ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು.