Asianet Suvarna News Asianet Suvarna News

ಅಗತ್ಯ ಸೇವೆ ನೀಡುವ ಎಲ್ಲ ಸಿಬ್ಬಂದಿಗೆ ಉಚಿತ ಬಸ್ ಪಾಸ್, ಪಡೆದುಕೊಳ್ಳೋದು ಹೇಗೆ?

* ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಉಚಿತ ಬಸ್ ಪಾಸ್
* ಮೇ 31 ರಿಂದ ಉಚಿತ ಬಸ್ ಪಾಸ್ ವಿತರಿಸಲಿರುವ ಬಿಎಂಟಿಸಿ
* ಸರ್ಕಾರ ಗುರುತಿಸಿರುವ ಅಗತ್ಯ ಸೇವೆ ಸಂಸ್ಥೆಗಳಿಗೆ ಮಾತ್ರ ಉಚಿತ ಬಸ್ ಪಾಸ್
* ಕೊರೋನಾ ಸಂಕಷ್ಟದಿಂದ ಜನರನ್ನು ಹೊರಗೆ ತರಲು ಹೋರಾಟಮಾಡುತ್ತಿರುವ ವಾರಿಯರ್ಸ್

Free bus passes for all govt essential service staff Karnataka  mah
Author
Bengaluru, First Published May 13, 2021, 6:59 PM IST

ಬೆಂಗಳೂರು (ಮೇ 13) ರಾಜ್ಯ ಸರ್ಕಾರ ತನ್ನ ಸಿಬ್ಬಂದಿಗೆ ಒಂದು ಒಳ್ಳೆಯ ಸುದ್ದಿ ನೀಡಿದೆ. ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಉಚಿತ ಬಸ್ ಪಾಸ್ ನೀಡಲು ಮುಂದಾಗಿದದೆ.

ಮೇ 31 ರಿಂದ ಉಚಿತ ಬಸ್ ಪಾಸ್ ನ್ನು ಬಿಎಂಟಿಸಿ ವಿತರಿಸಲಿದೆ. ಸರ್ಕಾರ ಗುರುತಿಸಿರುವ ಅಗತ್ಯ ಸೇವೆಯಡಿ ಬರುವ ಸಿಬ್ಬಂದಿಗೆ ಪಾಸ್ ನೀಡಲಾಗುತ್ತದೆ.  ಸರ್ಕಾರಿ, ಅರೆ ಸರ್ಕಾರಿ ನೌಕರರು, ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ನರ್ಸ್, ಡಾಕ್ಟರ್ ಗಳು, ವೈದ್ಯಕೀಯ ತಂತ್ರಜ್ಞರು,  ಪ್ರಯೋಗಾಲಯ ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸಿಬ್ಬಂದಿ , ಆಶಾ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್, ಗೃಹರಕ್ಷಕ ದಳ, ಅಗ್ನಿ ಶಾಮಕ ದಳ ತುರ್ತು ಸೇವೆಗಳ ಸಿಬ್ಬಂದಿಗೆ ಪಾಸ್  ದೊರೆಯಲಿದೆ.

ಕೊರೋನಾ ವಾರಿಯರ್ಸ್ ಪತ್ರಕರ್ತರಿಗೆ ಲಸಿಕೆ

ಇದರೊಂದಿಗೆ ಬಿಬಿಎಂಪಿ , ಬೆಸ್ಕಾಂ ಬಿಡಬ್ಲ್ಯೂಎಸ್ಎಸ್ಬಿ ಸಿಬ್ಬಂದಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು.  ತಮ್ಮ ಭಾವಚಿತ್ರ ಇರುವ ಗುರುತಿನ ಚೀಟಿ  ದಾಖಲೆ ನೀಡಿ ಪಾಸ್ ಪಡೆದುಕೊಳ್ಳುವ ಸೌಲಭ್ಯ ಮಾಡಿಕೊಡಲಾಗುತ್ತಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

Free bus passes for all govt essential service staff Karnataka  mah


 

Follow Us:
Download App:
  • android
  • ios