ಕೋಲ್ಕತಾ(ಎ.02) ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದಿಂದ ಒಳನುಸುಳುವಿಕೆ, ರೋಹಿಂಗ್ಯ ಮುಸ್ಲಿಂ ನಿರಾಶ್ರಿತರ ಆಕ್ರಮಗಳಿಗೆ ಸಂಪೂರ್ಣ ಬ್ರೇಕ್ ಹಾಕಲಿದ್ದೇವೆ. ಬಿಜೆಪಿ ಸರ್ಕಾರ ರಚಿಸಿ ಬಂಗಾಳ ಜನತೆಗೆ ಅಭಿವೃದ್ಧಿ ಜೊತೆಗೆ ನೆಮ್ಮದಿ ಹಾಗೂ ಶಾಂತಿಯ ಜೀವನಕ್ಕೆ ಅವಕಾಶ ಮಾಡಿಕೊಡಲಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ನಂದಿಗ್ರಾಮ ರಣಾಂಗಣ : ಮತದಾನದ ವೇಳೆ ವ್ಯಾಪಕ ಹಿಂಸಾಚಾರ

ಮಮತಾ ಬ್ಯಾನರ್ಜಿ ಸರ್ಕಾರ 3ಟಿ ಸೂತ್ರ ಅನುಸರಿಸುತ್ತಿದೆ. 3 ಟಿ ಸೂತ್ರ ಅಂದರೆ ಸುಲಿಗೆ(ತೋಲ್‌ಬಾಜಿ), ಸರ್ವಾಧಿಕಾರ(ತನಶಾಹಿ) ಹಾಗೂ ತುಷ್ಠೀಕರಣ(ತುಷ್ಟೀಕರಣ್) ಆಡಳಿತ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಮೂಲಕ ರಾಜ್ಯ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆ ಗಡಿಯಲ್ಲಿನ ಒಳನುಸುಳುವಿಕೆ, ಅಕ್ರಮವಾಗಿ ನೆಲೆಸುವಿಕೆ ಸಂಪೂರ್ಣ ಬಂದ್ ಮಾಡಲಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಕೂಚ್‌ಬಿಹಾರ್ ಜಿಲ್ಲೆಯ ಸಿತಾಲ್‌ಕುಚಿಯಲ್ಲಿ ಆಯೋಜಿಸಿದ ಚುನಾವಣಾ ರ್ಯಾಲಿಯಲ್ಲಿ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದಾರೆ. ಬಾಂಗ್ಲಾದೇಶ ಗಡಿ ಸಮೀಪದಲ್ಲಿರುವ ಈ ಪ್ರದೇಶದಲ್ಲಿ ಒಳನುಸುಳುವಿಕೆ ಸಾಮಾನ್ಯವಾಗಿದೆ. 

2ನೇ ಹಂತದ ಚುನಾವಣೆ: ಬಂಗಾಳದಲ್ಲಿ ಶೇ.80, ಅಸ್ಸಾಂನಲ್ಲಿ ಶೇ.75ರಷ್ಟು ಮತದಾನ

ಗಡಿ ವಿಚಾರದ ಜೊತೆ ಅಮಿತ್ ಶಾ ನಂದಿಗ್ರಾಮದಲ್ಲೇ ಮಮತಾ ಸೋಲು ಕಾಣುತ್ತಾರೆ. ಸುವೇಂಧು ಅಧಿಕಾರಿ ಮುಂದೆ ಬ್ಯಾನರ್ಜಿ ಮುಖಭಂಗ ಅನುಭವಿಸಲಿದ್ದಾರೆ ಎಂದಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಂದು ಮೊದಲ ಹಂತ ಹಾಗೂ ಎಪ್ರಿಲ್ 1 ರಂದ 2ನೇ ಹಂತದ ಮತದಾನವಾಗಿದೆ. ಇನ್ನು 6 ಹಂತದ ಮತದಾನ ಬಾಕಿ ಇದೆ. ಮೇ.02 ರಂದು ಫಲಿತಾಂಶ ಹೊರಬೀಳಲಿದೆ.