ಭಾರತೀಯ ನೋಟಿನಲ್ಲಿ ಯಾರ ಫೋಟೋ ಇರಬೇಕು? ಇದೀಗ ಭಾರಿ ಚರ್ಚೆ ವಿವಾದಕ್ಕೆ ಕಾರಣಾಗಿದೆ. ಚುನಾವಣೆ ದೃಷ್ಟಿಯಿಂದ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳನ್ನುಹಾಕಿ ಎಂದು ಕೇಜ್ರಿವಾಲ್ ಹೇಳಿದ ಬೆನ್ನಲ್ಲೇ ಇದೀಗ ಹೊಸ ಹೊಸ ವಾದಗಳು ಹುಟ್ಟಿಕೊಂಡಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಇರಲಿ ಎಂದು ನಾಯಕರು ಆಗ್ರಹಿಸಿದ್ದಾರೆ.

ನವದೆಹಲಿ(ಅ.27): ಭಾರತದಲ್ಲಿ ರೂಪಾಯಿ ನೋಟಿನಲ್ಲಿನ ಫೋಟೋ ವಿವಾದ ಜೋರಾಗುತ್ತಿದೆ. ಹಿಂದೂ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾರತೀಯ ರೂಪಾಯಿಗಳಲ್ಲಿ ಲಕ್ಷ್ಮಿ ಹಾಗೂ ಗಣೇಶನ ಫೋಟೋ ಹಾಕಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ವಿವಾದದ ಬೆನ್ನಲ್ಲೇ ಅಂಬೇಡ್ಕರ್ ಫೋಟೋ ಯಾಕಾಗಬಾರದು ಎಂದು ಕಾಂಗ್ರೆಸ್ ಪ್ರಶ್ನಿಸಿದರೆ, ಶಿವಾಜಿ ಫೋಟೋ ಇರಲಿ ಎಂದು ಬಿಜೆಪಿ ನಾಯಕರು ಕೇಜ್ರಿವಾಲ್ ಕುಟುಕಿದ್ದಾರೆ. ಈ ವಿವಾದ ವಿವಾದಗಳ ನಡುವೆ ಇದೀಗ ಭಾರತೀಯ ಕರೆನ್ಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಇರಲಿ ಅನ್ನೋ ವಾದ ಹುಟ್ಟಿಕೊಂಡಿದೆ. ಬಿಜೆಪಿ ಶಾಸಕ ಹಾಗೂ ವಕ್ತಾರ ರಾಮ್ ಕದಮ್ ಹೊಸ ವಾದ ಮುಂದಿಟ್ಟಿದ್ದಾರೆ. ಉಳಿದೆಲ್ಲರ ಫೋಟೋಗಿಂತ ಪ್ರಧಾನಿ ನರೇಂದ್ರ ಮೋದಿ ಪೋಟೋ ಹೆಚ್ಚು ಸೂಕ್ತ ಎಂದು ರಾಮ್ ಕದಮ್ ಅಭಿಪ್ರಾಯಪಟ್ಟಿದ್ದಾರೆ.

ರಾಮ್ ಕದಮ್ ಕೇವಲ ಪ್ರಧಾನಿ ಮೋದಿ ಫೋಟೋ ಕರೆನ್ಸಿಯಲ್ಲಿ ಇರಬೇಕು ಎಂದಿಲ್ಲ. ಇದರ ಜೊತೆಗೆ ಮತ್ತೂ ಕೆಲ ನಾಯಕರ ಫೋಟೋ ಇರಲಿ ಎಂದಿದ್ದಾರೆ. ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜ್, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪೋಟೋಗಳಿರುವ ಕೆರೆನ್ಸಿ ನೋಟುಗಳು ಇರಲಿ ಎಂದಿದ್ದಾರೆ. ಈ ಕುರಿಟು ರಾಮ್ ಕದನ್ ಟ್ವೀಟ್ ಮಾಡಿದ್ದಾರೆ.

ಕರೆನ್ಸಿ ನೋಟುಗಳಲ್ಲಿ ಲಕ್ಷ್ಮೀ, ಗಣೇಶನ ಚಿತ್ರಗಳನ್ನು ಸೇರಿಸಿ: ಪ್ರಧಾನಿಗೆ Arvind Kejriwal ಮನವಿ

ಇದರ ಜೊತೆಗೆ ಅರವಿಂದ್ ಕೇಜ್ರಿವಾಲ್ ನೋಟಿನಲ್ಲಿ ಫೋಟೋ ವಿವಾದಕ್ಕೆ ರಾಮ್ ಕದಮ್ ತಿರುಗೇಟು ನೀಡಿದ್ದಾರೆ. ಮುಂಬರುವ ಚುನಾವಣೆಯನ್ನು ನೋಡಿ ಕೆಲ ರಾಜಕೀಯ ನಾಯಕರು ಕರೆನ್ಸಿ ನೋಟಿನಲ್ಲಿ ಹಿಂದೂ ದೇವರ ಫೋಟೋಗಳನ್ನು ಹಾಕಲು ಒತ್ತಾಯಿಸಿದ್ದಾರೆ. ಆದರೆ ಆ ನಾಯಕರು ಹೃದಯದಿಂದ ಈ ಮಾತು ಹೇಳಿದ್ದರೆ ದೇಶ ಒಪ್ಪಿಕೊಳ್ಳುತ್ತಿತ್ತು. ಆದರೆ ಹೇಳಿಕೆ ನೀಡಿದ ನಾಯಕ ಇತಿಹಾಸ ತಿಳಿದಿದೆ. ಇವರು ನಮ್ಮ ದೇವರನ್ನು ಕೇವಲ ಚುನಾವಣೆ ಬಂದಾಗ ಮಾತ್ರ ನೆನಪಿಸಿಕೊಳ್ಳುತ್ತಾರೆ ಎಂದು ರಾಮ್ ಕದಮ್ ಅರವಿಂದ್ ಕೇಜ್ರಿವಾಲ್ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ.

Scroll to load tweet…

ಆಮ್ ಆದ್ಮಿಯಿಂದ ಮತ್ತೆ ಹಿಂದೂ ವಿರೋಧಿ ಹೇಳಿಕೆ, ದೇವಸ್ಥಾನ ಶೋಷಣೆ ಕೇಂದ್ರ ಎಂದ ಆಪ್ ಅಧ್ಯಕ್ಷ

ಅರವಿಂದ್ ಕೇಜ್ರಿವಾಲ್ ಹೇಳಿಕೆಯಿಂದ ವಿವಾದ
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಾರ್ಟಿ ಇದೀಗ ಹಿಂದೂ ಮತಗಳನ್ನು ಸೆಳೆಯುವ ಯತ್ನದಲ್ಲಿದೆ. ಆಮ್ ಆದ್ಮಿ ಪಾರ್ಟಿ ಹಾಗೂ ಅರವಿಂದ್ ಕೇಜ್ರಿವಾಲ್ ಹಿಂದೂಗಳಿಂದ ಅಂತರ ಕಾಯ್ದುಕೊಂಡಿದ್ದಾರೆ, ಹಿಂದೂ ವಿರೋಧಿ ಎಂಬ ಹಣೆಪಟ್ಟಿಗಳಿವೆ. ಇದನ್ನು ತೊಡೆದು ಹಾಕಿ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಹಿಂದೂ ಮತಗಳನ್ನು ಸಳೆಯಲು ಹಲವು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿ ಭಾರತೀಯ ರೂಪಾಯಿ ನೋಟಿನಲ್ಲಿ ಗಣೇಶ ಹಾಗೂ ಲಕ್ಷ್ಮೀ ಫೋಟೋಗಳನ್ನು ಹಾಕಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

 ಕಂಸನ ವಂಶಸ್ಥರ ನಾಶಕ್ಕೆ ದೇವರು ನನ್ನ ಕಳಿಸಿದ್ದಾರೆ 
ಗುಜರಾತ್ ಚುನಾವಣಾ ಪ್ರಚಾರದ ವೇಳೆ ಹಿಂದೂ ವಿರೋಧಿ’ ಎಂಬ ಪೋಸ್ಟರ್‌ಗಳು ಗುಜರಾತಿನಲ್ಲಿ ಪ್ರತ್ಯಕ್ಷವಾದ ಬೆನ್ನಲ್ಲೇ ಕೇಜ್ರಿವಾಲ್‌, ತಿರುಗೇಟು ನೀಡಿದ್ದರು. ‘ನಾನು ಕೃಷ್ಣ ಜನ್ಮಾಷ್ಟಮಿಯಂದು ಜನಿಸಿದ್ದೇನೆ. ದೇವರು ಕಂಸನ ವಂಶಸ್ಥರನ್ನು ಕೊನೆಗಾಣಿಸಿ ಜನರನ್ನು ಭ್ರಷ್ಟಾಚಾರ ಹಾಗೂ ಗೂಂಡಾಗಿರಿಯಿಂದ ಮುಕ್ತಿ ನೀಡುವ ವಿಶೇಷ ಕಾರ‍್ಯಕ್ಕೆ ನನ್ನನ್ನು ಭೂಮಿಗೆ ಕಳುಹಿಸಿದ್ದಾರೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ‘ನಾವೆಲ್ಲ ದೇವರ ಆಸೆಯನ್ನು ನೆರವೇರಿಸಲು ಜೊತೆಯಾಗಿ ಕೆಲಸ ಮಾಡೋಣ. ದೇವರು ಹಾಗೂ ಜನತೆ ನನ್ನೊಂದಿಗಿದ್ದಾರೆ. ಜನರಿಗೆ ಬದಲಾವಣೆ ಬೇಕಾಗಿದೆ, ಅದು ಸಿಗದೇ ಜನರು ನಿರಾಶರಾಗಿದ್ದಾರೆ’ ಎಂದು ಕೇಜ್ರಿವಾಲ್‌ ತಮ್ಮ ಗುಜರಾತ್‌ ಭೇಟಿಯ ಮೊದಲ ದಿನ ಹೇಳಿದ್ದಾರೆ.