ಆಮ್ ಆದ್ಮಿಯಿಂದ ಮತ್ತೆ ಹಿಂದೂ ವಿರೋಧಿ ಹೇಳಿಕೆ, ದೇವಸ್ಥಾನ ಶೋಷಣೆ ಕೇಂದ್ರ ಎಂದ ಆಪ್ ಅಧ್ಯಕ್ಷ

ಆಮ್ ಆದ್ಮಿ ಪಾರ್ಟಿ ಮತ್ತೆ ಹಿಂದೂ ವಿರೋಧಿ ನಡೆಯಿಂದ ಆಕ್ರೋಶ ಭುಗಿಲೆದ್ದಿದೆ. ಮತಾಂತರ ವೇದಿಕೆಯಲ್ಲಿ ಸಚಿವ ರಾಜೇಂದ್ರ ಪಾಲ್ ಹಿಂದೂ ವಿರೋಧಿ ಪ್ರತಿಜ್ಞೆ, ಮನೀಶ್ ಸಿಸೋಡಿಯಾ ರಾಮ ಮಂದಿರಕ್ಕೆ ವಿರೋಧ ಹೇಳಿಕೆ ಬಳಿಕ ಇದೀಗ ಆಪ್ ಅಧ್ಯಕ್ಷ ದೇವಸ್ಥಾನ ವಿರುದ್ಧ ಹೇಳಿಕೆ ನೀಡಿದ್ದಾರೆ.

AAP Gujarat President calls Hindu temples as sites of exploitation after insulting PM Modi and Women ckm

ಅಹಮ್ಮದಾಬಾದ್(ಅ.11): ಆಮ್ ಆದ್ಮಿ ಪಾರ್ಟಿ ಮತ್ತೆ ಹಿಂದೂ ವಿರೋಧಿ ನಡೆ ಭಾರಿ ಆಕ್ರೋಶಕ್ಕೆ ಕಾರಣಾಗಿದೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಭೇಟಿ ವೇಳೆ ಅತ್ಯಂತ ಕೆಟ್ಟ ಪದಗಳ ಮೂಲಕ ನಿಂದಿಸಿದ ಆಮ್ ಆದ್ಮಿ ಗುಜರಾತ್ ಅಧ್ಯಕ್ಷ ಗೋಪಾಲ್ ಇಟಾಲಿಯಾ ಇದೀಗ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಹಿಂದೂ ದೇವಸ್ಥಾನಗಳು ಶೋಷಣೆಯ ಕೇಂದ್ರ ಎಂದು ಗೋಪಾಲ್ ಇಟಾಲಿಯಾ ಹೇಳಿದ್ದಾರೆ. ಮಹಿಳೆಯರು ಹಿಂದೂ ದೇವಸ್ಥಾನಕ್ಕೆ ಹೋಗಲೇಬೇಡಿ. ಅದು ಭಕ್ತಿಯ ಕೇಂದ್ರ ಅಲ್ಲ ಶೋಷಣೆಯ ಕೇಂದ್ರ ಎಂದು ಗೋಪಾಲ್ ಇಟಾಲಿಯಾ ಹೇಳಿದ್ದಾರೆ. ಈಗಾಗಲೇ ಭಾರಿ ವಿವಾದ ಸೃಷ್ಟಿಸಿರುವ ಗೋಪಾಲ್ ಇಟಾಲಿಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಗೋಪಾಲ್ ಇಟಾಲಿಯಾ ವಿರುದ್ಧ ಹರಿಹಾಯ್ದಿದ್ದಾರೆ. 

ಪ್ರಧಾನಿ ಮೋದಿ ನೀಚ ವ್ಯಕ್ತಿ, ಭಾರತೀಯರನ್ನು ಮೋದಿ ಸಿ( ಹಿಂದಿ ಭಾಷೆಯ ಕೆಟ್ಟ ಪದದ ಮೊದಲ ಅಕ್ಷರ)ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ವಿಡಿಯೋ ಬೆನ್ನಲ್ಲೇ ಇದೀಗ ಹಿಂದೂ ಧಾರ್ಮಿಕ ಕೇಂದ್ರ ಶೋಷಣೆ ಸ್ಥಳ ಎಂದಿದ್ದಾರೆ.  

 

 

ಕೆಟ್ಟ ಪದಗಳ ಬಳಸಿ ಪ್ರಧಾನಿ ಮೋದಿ ನಿಂದಿಸಿದ ಗುಜರಾತ್ ಆಪ್ ಅಧ್ಯಕ್ಷ, ಭಾರಿ ಆಕ್ರೋಶ!

ಮೋದಿಗೆ ‘ನೀಚ ವ್ಯಕ್ತಿ’ ಎಂದ ಆಪ್‌ ನಾಯಕ: ಬಿಜೆಪಿ ಆರೋಪ
ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ನೀಚ್‌ ಆದ್ಮಿ’ (ಕೀಳು ಜಾತಿಯ ವ್ಯಕ್ತಿ) ಎಂದು ಕರೆದಿದ್ದಾರೆ ಎನ್ನಲಾದ ಗುಜರಾತ್‌ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥನ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ. ಈ ಹೇಳಿಕೆ ಮೂಲಕ ಪ್ರಧಾನಿ ಹುದ್ದೆಗೆ ಹಾಗೂ ಗುಜರಾತಿಗಳಿಗೆ ಆಪ್‌ ಅವಮಾನ ಮಾಡಿದೆ ಎಂದು ಆರೋಪಿಸಿದೆ. ಈ ವಿಡಿಯೋ 2019ರ ಗುಜರಾತ್‌ ಸಾರ್ವತ್ರಿಕ ಚುನಾವಣೆಯ ವೇಳೆಯದ್ದು ಎಂದು ಹೇಳಲಾಗುತ್ತಿದೆ.‘ಈ ರೀತಿಯ ಭಾಷೆಯನ್ನು ಬಳಸಿದ್ದು ಆಮ್‌ ಆದ್ಮಿ ಪಕ್ಷದ ವ್ಯವಹಾರಿಕತೆಯನ್ನು ತೋರಿಸುತ್ತದೆ. ದೇಶದ ಎಲ್ಲಾ ಪ್ರಧಾನಿಗಳು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುತ್ತಾರೆ. ಈ ಹಿನ್ನಲೆಯಲ್ಲಿ ಪ್ರಧಾನಿಗೆ ಅವಮಾನ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಹೇಳಿದ್ದಾರೆ. ‘ಗುಜರಾತ್‌ನ್ನು ಮೋದಿ ಪ್ರತಿನಿಧಿಸುವುದರಿಂದ ಈ ರೀತಿಯ ಭಾಷೆ ಬಳಕೆಯಿಂದ ಗುಜರಾತ್‌ಗೆ ಅವಮಾನಿಸಿದೆ’ ಎಂದು ಪಾತ್ರಾ ಆರೋಪಿಸಿದ್ದಾರೆ. 

ದೆಹಲಿಯ ಆಪ್‌ ಸಚಿವನಿಂದ Hindu ವಿರೋಧಿ ಪ್ರಮಾಣ: ಗೌತಮ್ ವಜಾ ಮಾಡಲು BJP ಆಗ್ರಹ

ರಾಜೇಂದ್ರ ಪಾಲ್ ಹಿಂದೂ ವಿರೋಧಿ ಹೇಳಿಕೆ
ಹಿಂದೂಗಳನ್ನು ಬೌದ್ಧ ಧರ್ಮಕ್ಕೆ ಮತಾಂತರಿಸುವ ಸಮಾರಂಭದಲ್ಲಿ ಪಾಲ್ಗೊಂಡಿದ್ದಲ್ಲದೆ, ಹಿಂದೂ ದೇವರ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿದ್ದ ದಿಲ್ಲಿ ಸಚಿವ ರಾಜೇಂದ್ರ ಪಾಲ್‌ ಗೌತಮ್‌ ಅವರು ತಮ್ಮ ಸ್ಥಾನಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಅ.5ರಂದು ನಡೆದ ಬೌದ್ಧ ಧರ್ಮದ ಮತಾಂತರ ಕಾರ‍್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ‘ಬ್ರಹ್ಮ, ವಿಷ್ಣು, ಮಹೇಶ್ವರರ ಮೇಲೆ ನನಗೆ ನಂಬಿಕೆ ಇಲ್ಲ’ ಎಂದು ಪ್ರತಿಜ್ಞಾ ವಿಧೀ ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಗೌತಮ್‌ ಹಾಗೂ ಆಪ್‌ ವಿರುದ್ಧ ಕಿಡಿಕಾರಿ ಪ್ರತಿಭಟನೆ ಆರಂಭಿಸಿತ್ತು. ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ಗೂ ಗೌತಮ್‌ ಹೇಳಿಕೆ ಮುಜುಗರ ತಂದಿತ್ತು.

ಆದರೆ ಭಾನುವಾರ ರಾಜೀನಾಮೆ ಘೋಷಿಸಿರುವ ಗೌತಮ್‌, ‘ಬಿಜೆಪಿ ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತಿದೆ. ಅಲ್ಲದೇ ತನ್ನ ನಡೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನಿಂದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಹಾಗೂ ಪಕ್ಷ ಮುಜುಗರಕ್ಕೆ ಈಡಾಗಬಾರದು. ನಾನು ಪಕ್ಷದ ನಿಜವಾದ ಸೈನಿಕ. ನಾನು ಬಾಬಾ ಸಾಹೇಬ್‌ ಅಂಬೇಡ್ಕರ್‌ ಹಾಗೂ ಗೌತಮ ಬುದ್ಧ ಅವರ ಆದರ್ಶಗಳನ್ನು ಪಾಲಿಸುತ್ತೇನೆ’ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios