Asianet Suvarna News Asianet Suvarna News

'ಬೆಂಗಳೂರು ಗಲಭೆಯನ್ನೇಕೆ ರಾಹುಲ್ ಗಾಂಧಿ ಖಂಡಿಸಿಲ್ಲ? ಧೈರ್ಯವಿಲ್ಲವೇ?'

ಬೆಂಗಳೂರು ಗಲಭೆ ಖಂಡಿಸಲು ರಾಹುಲ್‌ಗೆ ಧೈರ್ಯವಿಲ್ಲವೇ?| ‘ಫೇಸ್ಬುಕ್‌ ಆರೋಪ’ಕ್ಕೆ ಕೇಂದ್ರ ಸರ್ಕಾರ ತಿರುಗೇಟು

BJP Slams Rahul Gandhi For Not Condemning Bengaluru Riot
Author
Bangalore, First Published Aug 17, 2020, 7:52 AM IST

ನವದೆಹಲಿ(ಆ.17):  ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಭಾರತದಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳನ್ನು ನಿಯಂತ್ರಿಸುತ್ತಿವೆ ಎಂಬ ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕೆಗೆ ಕೇಂದ್ರ ಸಂಪರ್ಕ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ತೀಕ್ಷ$್ಣ ತಿರುಗೇಟು ನೀಡಿದ್ದಾರೆ.

ಬೆಂಗಳೂರು ಗಲಭೆ ಪ್ರಕ​ರಣ ಸಿಬಿ​ಐಗೆ ವಹಿ​ಸುವ ಪ್ರಶ್ನೆಯೇ ಇಲ್ಲ: ಅಶ್ವ​ತ್ಥ​ನಾ​ರಾ​ಯಣ್‌

‘ತಮ್ಮ ಪಕ್ಷದವರ ಮೇಲೇ ಪ್ರಭಾವ ಬೀರಲು ಸಾಧ್ಯವಿಲ್ಲದ ‘ಸೋತವರು’ ಇಡೀ ಜಗತ್ತನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿದೆ ಎಂದು ಅಲವತ್ತುಕೊಳ್ಳುತ್ತಾರೆ. ಚುನಾವಣೆಗೂ ಮುನ್ನ ನೀವು ಫೇಸ್‌ಬುಕ್‌ ದತ್ತಾಂಶಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಕೇಂಬ್ರಿಜ್‌ ಅನಾಲಿಟಿಕಾ ಜೊತೆ ಸೇರಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಿರಿ. ಈಗ ನಮ್ಮನ್ನು ಪ್ರಶ್ನಿಸುತ್ತೀರಾ? ವಾಸ್ತವ ಏನೆಂದರೆ ಇಂದು ಮಾಹಿತಿಯ ಲಭ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಸತ್ತಾತ್ಮಕಗೊಂಡಿದೆ. ಇವು ಇಂದು ನಿಮ್ಮ ಕುಟುಂಬದ ನಿಯಂತ್ರಣದಲ್ಲಿಲ್ಲ. ಬಹುಶಃ ಅದೇ ನಿಮಗೆ ನೋವು ತರುತ್ತಿದೆ. ಅಂದಹಾಗೆ ಬೆಂಗಳೂರು ಗಲಭೆಯನ್ನು ನೀವು ಖಂಡಿಸಿದ ಬಗ್ಗೆ ಎಲ್ಲೂ ಕೇಳಿಸಲಿಲ್ಲ. ನಿಮ್ಮ ಧೈರ್ಯ ಉಡುಗಿಹೋಯಿತೇ’ ಎಂದು ರವಿಶಂಕರ ಪ್ರಸಾದ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ಅಖಂಡಗೇ ಟಿಕೆಟ್‌, ಅನ್ಯರಿಗೆ ಇಲ್ಲ: ಡಿಕೆಶಿ ಸ್ಪಷ್ಟನೆ

ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ‘ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳನ್ನು ಭಾರತದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿವೆ. ಈ ಜಾಲತಾಣಗಳನ್ನು ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರುತ್ತಿವೆ. ಅಮೆರಿಕದ ಮಾಧ್ಯಮಗಳು ಕೊನೆಗೂ ಫೇಸ್‌ಬುಕ್‌ನ ಬಗ್ಗೆ ಸತ್ಯ ಹೊರಗೆಡವಿವೆ’ ಎಂದು ಟ್ವೀಟ್‌ ಮಾಡಿದ್ದರು. ಕಾಂಗ್ರೆಸ್‌ ನಾಯಕರಾದ ಅಜಯ್‌ ಮಾಕನ್‌, ಪಿ.ಚಿದಂಬರಂ, ಶಶಿ ತರೂರ್‌, ರಣದೀಪ್‌ ಸಿಂಗ್‌ ಸುರ್ಜೆವಾಲಾ ಮುಂತಾದವರೂ ಈ ಕುರಿತು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು.

Follow Us:
Download App:
  • android
  • ios