ಪ್ರಖರ ಮಾತುಗಳಿಂದಲೇ ಎದುರಾಳಿಗಳನ್ನು ಮಣಿಸುತ್ತಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಬಿಜೆಪಿಯಿಂದ ಹೊರಬಂದಿದ್ದಾರೆ. ಸೋಶಿಯಲ್ ಮೀಡಿಯಾ, ಸುದ್ದಿಗೋಷ್ಠಿ, ಸುದ್ದಿ ವಾಹನಿಗಳ ಚರ್ಚೆಯಲ್ಲಿ ಪೂನಾವಾಲ ಹಲವರ ಬೆವರಿಳಿಸಿದ್ದಾರೆ. ದಿಢೀರ್ ರಾಜೀನಾಮೆ ಇದೀಗ ಕೋಲಾಹಲ ಸೃಷ್ಟಿಸಿದೆ.
ನವದೆಹಲಿ (ಜು.31) ನೀಟ್ ಪ್ರಶ್ನೆ ಪತ್ರಿಕೆ ಹೋರಾಟದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಶಾಕ್ ಎದುರಾದಿದೆ. ಪ್ರತಿ ಹಂತದಲ್ಲೂ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಜನಪ್ರಿಯ ಮುಖಂಡ ಶೆಹಜಾದ್ ಪೂನವಾಲ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದಾರೆ.
ಶೆಹಜಾಜ್ ಪೂನವಾಲ ತಮ್ಮ ಪ್ರಖರ ಮಾತುಗಳಿಂದಲೇ ಎದುರಾಗಳಿಗಳನ್ನು ಮಣಿಸುತ್ತಿದ್ದರು. ತಮಾಷೆ, ಹಾಸ್ಯ, ವ್ಯಂಗ್ಯದ ಜೊತೆ ಅಂಕಿ ಅಂಶಗಳನ್ನು, ದಾಖಲೆಗಳನ್ನು ಹೇಳುತ್ತಾ ಚರ್ಚೆಗಳಲ್ಲಿ ಬಿಜೆಪಿ ವಿರೋಧಿಗಳನ್ನು ಮಣಿಸುತ್ತಿದ್ದರು. ಶೆಹಜಾಜ್ ಪೂನವಾರ ಥಗ್ ಲೈಫ್ ಅನ್ನೋ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಶೆಹಜಾಜ್ ಪೂನವಾಲ ಅವರ ಮಾತುಗಳಿಗೆ ಉತ್ತರಿಸಲು ತಡಕಾಡಿದ ಹಲವು ನಾಯಕರು ನಗೆಪಾಟಲಿಗೀಡಾದ ಘಟನೆಗಳು ನಡೆದಿದೆ. ಅಷ್ಟರ ಮಟ್ಟಿಗೆ ಶೆಹಜಾದ್ ಪೂನವಾಲ ಬಿಜೆಪಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು. ನೀಟ್ ಹೋರಾಟ, ಪ್ರತಿಭಟನೆ ವಿಚಾರದಲ್ಲೂ ಶೆಹಜಾದ್ ಪೂನಾವಲ ಪ್ರಖರವಾಗಿ ಕೇಂದ್ರ ಸರ್ಕಾರದ ನಿಲುವು ನಿರ್ಧಾರಗಳನ್ನು ಸಮರ್ಥಿಸಿಕೊಂಡಿದ್ದು. ಇದೀಗ ಶೆಹಜಾದ್ ಬಿಜೆಪಿಯಿಂದ ಹೊರಬಂದಿದ್ದಾರೆ.
ಧಿಢೀರ್ ರಾಜೀನಾಮೆಗೆ ಕಾರಣವೇನು?
ಶೆಹಜಾದ್ ಪೂನಾವಾಲ ಬಿಜೆಪಿಯಿಂದ ಹೊರಬಂದಿರುವ ಅಧಿಕೃತ ಪತ್ರ ಬಹಿರಂಗವಾಗಿಲ್ಲ. ವೈಯುಕ್ತಿಕ ಕಾರಣಗಳಿಂದ ಬಿಜೆಪಿಯಿಂದ ಹೊರಬಂದಿರುವುದಾಗಿ ವರದಿಯಾಗಿದೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಪ್ರೊಫೈಲ್ ಬದಲಿಸಿದ್ದದಾರೆ. ನನ್ನ ಧರ್ಮ ಮುಸ್ಲಿಂ, ಆದರೆ ನನ್ನ ಸಂಸ್ಕೃತಿ ಹಿಂದೂ ಎಂದು ಹೇಳಿಕೊಂಡಿದ್ದಾರೆ.ಇದಕ್ಕೂ ಮೊದಲು ಬಿಜೆಪಿ ವಕ್ತಾರ ಎಂದು ಪ್ರೊಫೈಲ್‌ನಲ್ಲಿ ಉಲ್ಲೇಖಿಸಿದ್ದರು. ಇದೀಗ ಬಿಜಿಪಿ ವಕ್ತಾರ ಅನ್ನೋ ಸ್ಥಾನವನ್ನು ಪ್ರೊಫೈಲ್‌ನಿಂದ ತೆಗೆದಿದ್ದಾರೆ.
ಜೀವನ ಪರ್ಯಂತ ಪ್ರಧಾನಿ ಮೋದಿ ಅಭಿಮಾನಿ
ಬಿಜೆಪಿಯಿಂದ ಹೊರಬಂದಿರುವ ಶೆಹಜಾದ್ ಪೂನವಾಲ ತಾನು ಜೀವನ ಪರ್ಯಂತ ನರೇಂದ್ರ ಮೋದಿಯ ಅಭಿಮಾನಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾನು ಬಿಜೆಪಿಯಿಂದ ದೂರವಾದರೂ ಮೋದಿಯ ಅಭಿಮಾನಿಯಾಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತನ್ನ ಸಹೋದರ ತೆಹ್ಸೀನ್ ಪೂನವಾಲ ಇರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರುವ ಸಾಧ್ಯತೆಗಳು ದೂರವಾಗಿದೆ.

2017ರಲ್ಲಿ ಬಿಜೆಪಿ ಸೇರಿಕೊಂಡಿದ್ದ ಪೂನವಾಲ
ಶೆಹಜಾದ್ ಪೂನಾವಾಲ ಹಾಗೂ ಸಹೋದರ ತೆಹ್ಸೀನ್ ಪೂನವಾಲ ಇಬ್ಬರು ಕಾಂಗ್ರೆಸ್ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಆದರೆ 2017ರಲ್ಲಿ ಶೆಹಜಾದ್ ಪೂನವಾಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಶೆಹಜಾದ್ ಪೂನವಾಲ ಮಾತುಗಳು, ಅಂಕಿ ಅಂಶ ಹೇಳುವ ರೀತಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವ ರೀತಿಯಿಂದ ಬಿಜೆಪಿ ಹೈಕಮಾಂಡ್ ಗಮನಸೆಳೆದಿದ್ದರು. ಹೀಗಾಗಿ ಅಷ್ಟೇ ವೇಗದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸ್ಥಾನ ಗಿಟ್ಟಿಸಿಕೊಂಡಿದ್ದರು.


