Asianet Suvarna News Asianet Suvarna News

ಮುಂಬೈಯಿಂದ ಬಾಲಿವುಡ್‌ ಹೊರ ಹಾಕಲು ಬಿಜೆಪಿ ಸಂಚು: ನವಾಬ್ ಮಲಿಕ್‌

*ಮುಂಬೈಯಿಂದ ಬಾಲಿವುಡ್‌ ಹೊರಹಾಕಲು ಬಿಜೆಪಿ ಸಂಚು
*ಎನ್‌ಸಿಬಿ ಅಧಿಕಾರಿ ತಮ್ಮ ವಿರುದ್ಧ ಕ್ರಮಕ್ಕೆ ಹೆದರುತ್ತಿದ್ದಾರೆ
*ಡ್ರಗ್ಸ್ ಪ್ರಕರಣದಲ್ಲಿ ಕೆಲವರನ್ನು ಸಮೀರ್ ವಾಂಖೇಡೆ ಕೈ ಬಿಟ್ಟಿದ್ದಾರೆ

BJP playing Drugs case trick to move Bollywood out of Mumbai said Nawab Malik
Author
Bengaluru, First Published Oct 29, 2021, 12:31 PM IST
  • Facebook
  • Twitter
  • Whatsapp

ಮುಂಬೈ (ಅ. 29 ) : ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಆರ್ಯನ್‌ ಖಾನ್ (Aryan Khan) ಡ್ರಗ್ಸ್ ಪ್ರಕರಣವು "ಬಾಲಿವುಡ್ ಅನ್ನು ಮುಂಬೈನಿಂದ ಸ್ಥಳಾಂತರಿಸಲು ಬಿಜೆಪಿ (BJP) ಮಾಡಿರುವ ಸಂಚು ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್  ಹೇಳಿದ್ದಾರೆ. ಜತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ನೋಯ್ಡಾದಲ್ಲಿ (Noida) ಫಿಲ್ಮ್ ಸಿಟಿ ಸ್ಥಾಪಿಸುವ ಕುರಿತು ಚಲನಚಿತ್ರೋದ್ಯಮ ಪ್ರತಿನಿಧಿಗಳ ಜತೆ ನಡೆಸಿದ ಸಭೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.

Aryan Khanಗೆ ಬೇಲ್: ವಕೀಲರ ತಂಡದ ಜೊತೆ ಪೋಸ್ ಕೊಟ್ಟ ಶಾರೂಖ್ ಮುಖದಲ್ಲಿ ಬಿಗ್ ಸ್ಮೈಲ್

ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ನವಾಬ್ ಮಲಿಕ್ (Nawab Malik) "ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣವು ಬಾಲಿವುಡ್ ಅನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸುವ ನಿಟ್ಟಿನಲ್ಲಿ ಬಿಜೆಪಿಯ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಇದು ಬಾಲಿವುಡ್‌ ಮಾನಹಾನಿ ಮಾಡಲು ಬಿಜೆಪಿಯೇ ನಡೆಸಿದ ಪಿತೂರಿ" ಎಂದು ಹೇಳಿದ್ದಾರೆ.

NCB ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ವಾಗ್ದಾಳಿ!

"ಎನ್‌ಸಿಬಿ (NCB) ಅಧಿಕಾರಿ ಸಮೀರ್ ವಾಂಖೇಡೆ (Sameer Wankhade) ಬಂಧನ ಭಯದಿಂದ ರಕ್ಷಣೆ ಕೋರಿ ಬಾಂಬೆ ಹೈಕೋರ್ಟ್‌ಗೆ ಮೆಟ್ಟಿಲೇರಿದ್ದರು. ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಆರ್ಯನ್ ಖಾನ್ ಅವರನ್ನು ಎಸಿಬಿ ಕಚೇರಿಗೆ ಎಳೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕಿರಣ್ ಗೋಸಾವಿ (Kiran Gosavi) ಈಗ ಕಂಬಿ ಹಿಂದೆ ಬಿದ್ದಿದ್ದಾನೆ. ಆರ್ಯನ್ ಖಾನ್ ಮತ್ತು ಇತರರಿಗೆ ಜಾಮೀನು ನೀಡದಂತೆ ನೋಡಿಕೊಳ್ಳಲು ಎಲ್ಲವನ್ನೂ ಮಾಡುತ್ತಿದ್ದ ವ್ಯಕ್ತಿ, ನಿನ್ನೆ  ನ್ಯಾಯಾಲಯದ ಮೆಟ್ಟಿಲೇರುತ್ತಿದ್ದನು" 

Drugs Case: ಆರ್ಯನ್ ಜೊತೆ ಸೆಲ್ಫೀ ತೆಗೆದಿದ್ದ ಕೆಪಿ ಗೋಸಾವಿ ಅರೆಸ್ಟ್

"ಸಮೀರ್ ವಾಂಖೆಡೆ ತನ್ನನ್ನು ಬಂಧಿಸದಂತೆ ಮುಂಬೈ ಪೊಲೀಸರ (Mumbai Police) ವಿರುದ್ಧ ತಡೆಯಾಜ್ಞೆ ಕೋರಿ ಬಾಂಬೆ ಹೈಕೋರ್ಟ್‌ಗೆ (Bombay HC) ಮೊರೆ ಹೋಗಿದ್ದರು. ರಕ್ಷಣೆ ಕೋರಿ ಕಳೆದ ವಾರ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ಅವರು ನಿಜವಾಗಿಯೂ ಏನಾದರೂ ತಪ್ಪು ಮಾಡಿರಬೇಕು ಹಾಗಾಗಿಯೇ  ಅವರು ತಮ್ಮ ವಿರುದ್ಧ ಕ್ರಮಕ್ಕೆ ಹೆದರುತ್ತಿದ್ದಾರೆ" ಎಂದು ನವಾಬ್ ಮಲಿಕ್ ಹೇಳಿದ್ದಾರೆ

ಡ್ರಗ್ಸ್ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಕಿರಣ್ ಗೋಸಾವಿ ಅವರನ್ನು 2018 ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ  (Pune) ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಅಕ್ಟೋಬರ್ 3 ರಂದು ಗೋವಾ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿಯ ನಂತರ ಆರ್ಯನ್ ಖಾನ್ ಜೊತೆಗಿನ ಗೋಸಾವಿಯ ಸೆಲ್ಫಿ ವೈರಲ್ ಆಗಿತ್ತು. ಮೂರು ದಿನಗಳ ನೋಟಿಸ್ ನೀಡದೆ ವಾಂಖೆಡೆ ಅವರನ್ನು ಬಂಧಿಸುವುದಿಲ್ಲ ಎಂದು ಮುಂಬೈ ಪೊಲೀಸರು ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ. ಮುಂಬೈ ಪೊಲೀಸರು ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಇದು ವೈಯಕ್ತಿಕ ಜಗಳವಲ್ಲ

ಡ್ರಗ್ಸ್ ಪ್ರಕರಣದಲ್ಲಿ ಕೆಲವರನ್ನು ಸಮೀರ್ ವಾಂಖೇಡೆ ಕೈ ಬಿಟ್ಟಿದ್ದಾರೆ "ಇದು ವೈಯಕ್ತಿಕ ಜಗಳವಲ್ಲ. ನನ್ನ ಎಲ್ಲಾ ಆರೋಪಗಳಿಗೂ ಸಾಕ್ಷ್ಯಾಧಾರಾಗಳಿವೆ. ವಾಂಖೆಡೆ ನನ್ನ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ" ಎಂದು ಮಲಿಕ್ ಹೇಳಿದ್ದಾರೆ. ಕಳೆದ 25 ದಿನಗಳಿಂದ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಕಿಂಗ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ನಿನ್ನೆ ಜಾಮೀನು ಸಿಕ್ಕಿತ್ತು. ಡ್ರಗ್ಸ್ ಆನ್ ಕ್ರೂಸ್ ಪ್ರಕರಣಕ್ಕೆ(Drugs on Cruise) ಸಂಬಂಧಿಸಿದಂತೆ ಆರ್ಯನ್ ಖಾನ್ (Aryan Khan)ಜಾಮೀನಿಗಾಗಿ ಹೋರಾಟ ನಡೆಸಿದ ವಕೀಲರ ತಂಡದೊಂದಿಗೆ ಬಾಲಿವುಡ್ ನಟ ಶಾರುಖ್ ಖಾನ್ ಗುರುವಾರ ಪೋಸ್ ನೀಡುವ ಮೂಲಕ ಹರ್ಷ್‌ ವ್ಯಕ್ತಪಡಿಸಿದ್ದರು.

Follow Us:
Download App:
  • android
  • ios