Asianet Suvarna News Asianet Suvarna News

ಚುನಾವಣೆಗೂ ಮುನ್ನ ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಬಿಜೆಪಿ ನಾಯಕನ ಹತ್ಯೆ

ಛತ್ತೀಸ್‌ಗಢದಲ್ಲಿ ಚುನಾವಣೆಗೆ ಎರಡು ದಿನ ಇರುವಾಗ ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಶನಿವಾರ ನಡೆದಿದೆ. ಮೃತ ರತನ್‌ ಜಿ.ಪಂ ಸದಸ್ಯರಾಗಿದ್ದು, ನಾರಾಯಣಪುರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದರು.

BJP leader killed by naxals in Chhattisgarh Ahead of Assembly elections akb
Author
First Published Nov 5, 2023, 12:12 PM IST

ರಾಯಪುರ: ಛತ್ತೀಸ್‌ಗಢದಲ್ಲಿ ಚುನಾವಣೆಗೆ ಎರಡು ದಿನ ಇರುವಾಗ ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಶನಿವಾರ ನಡೆದಿದೆ. ಮೃತ ರತನ್‌ ಜಿ.ಪಂ ಸದಸ್ಯರಾಗಿದ್ದು, ನಾರಾಯಣಪುರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಕೌಶಲ್‌ನಗರ್‌ನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಇವರ ಮೇಲೆ ದಾಳಿ ನಡೆದಿದೆ. ಘಟನೆ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಜ್ಯದಲ್ಲಿ ನ.7ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ.

ಅಲುವಾ ಬಾಲಕಿ ರೇಪ್ ಪ್ರಕರಣದಲ್ಲಿ ಅಶ್ವಕ್ ಆಲಂ ದೋಷಿ

ಕೊಚ್ಚಿ: ಕೇರಳದ ಅಲುವಾದಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಅಶ್ವಕ್ ಆಲಂನನ್ನು (Ashwak Alam) ದೋಷಿ ಎಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ನ.9ರಂದು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. ಘಟನೆ ನಡೆದ 99 ದಿನಗಳಲ್ಲೇ ತೀರ್ಪು ಹೊರಡಿಸಿದೆ. ಕಳೆದ ಜು.28ರಂದು ಬಿಹಾರದಿಂದ ಬಂದಿದ್ದ ವಲಸೆ ಕಾರ್ಮಿಕರ ಐದು ವರ್ಷದ ಮಗುವನ್ನು ವಲಸೆ ಕಾರ್ಮಿಕನೇ ಆಗಿದ್ದ ಅಶ್ವಕ್ ಅತ್ಯಾಚಾರ ಗೈದು ಕೊಲೆ (Aluva girl rape case) ಮಾಡಿದ್ದ. ಬಳಿಕ ಮಗುವಿನ ದೇಹವನ್ನು ಇಲ್ಲಿನ ಮಾರುಕಟ್ಟೆಯ ಹಿಂಬದಿ ಇದ್ದ ಜಾಗದಲ್ಲಿ ಬಿಸಾಡಿದ್ದ.

ನ.19ಕ್ಕೆ ಏರಿಂಡಿಯಾದಲ್ಲಿ ಪ್ರಯಾಣ ಮಾಡದಿರಿ: ಖಾಲಿಸ್ತಾನ್ ಉಗ್ರನಿಂದ ಸಿಖ್ಖರಿಗೆ ಎಚ್ಚರಿಕೆ

ಔಷಧಿ ಕಾರ್ಖಾನೆಯಲ್ಲಿ ಬೆಂಕಿಗೆ 8 ಜನ ಬಲಿ

ಮುಂಬೈ: ಔಷಧ ಕಾರ್ಖಾನೆಯಲ್ಲಿ (medicine factory) ಶಾರ್ಟ್‌ ಸರ್ಕೀಟ್‌ನಿಂದಾಗಿ ಅಗ್ನಿ ದುರಂತ ಸಂಭವಿಸಿದೆ. ಇದರಿಂದಾಗಿ 8 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ.ಮಹಾರಾಷ್ಟ್ರದ ರಾಯಗಢದಲ್ಲಿ ಶುಕ್ರವಾರ  ಈ ದುರ್ಘಟನೆ ನಡೆದಿದೆ. ವಿದ್ಯುತ್‌ ಅವಘಡದಿಂದಾಗಿ ಟ್ಯಾಂಕ್‌ನಲ್ಲಿ ತುಂಬಿಟ್ಟಿದ್ದ ಕೆಮಿಕಲ್‌ಗೆ ಬೆಂಕಿ ತಾಗಿ ಬೆಂಕಿ ಉಲ್ಬಣಿಸಿದೆ. ಈ ಸಮಯದಲ್ಲಿ ಸ್ಥಳದಲ್ಲಿ 11 ಮಂದಿ ಕೆಲಸ ಮಾಡುತ್ತಿದ್ದರು. ಈ ಪೈಕಿ 8 ಮಂದಿಯ ದೇಹವನ್ನು ಹೊರತೆಗೆಯಲಾಗಿದೆ. ಇನ್ನು ಮೂವರು ಕಾಣೆಯಾಗಿದ್ದಾರೆ. ಅವರಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಎನ್‌ಡಿಆರ್‌ಎಫ್ ಟೀಂ (NDRF team)ಅಧಿಕಾರಿಗಳು ತಿಳಿಸಿದ್ದಾರೆ. 

ಶಂಕಿತ ಉಗ್ರರ ಕಾಲಿಗೆ ಜಿಪಿಎಸ್ ಅಳವಡಿಕೆ: ಕಾಶ್ಮೀರ ಪೊಲೀಸರಿಂದ ಹೊಸ ಪ್ರಯೋಗ

ಬಡತನವೊಂದೇ ಜಾತಿ ಎಂದ ಪ್ರಧಾನಿ ತಾವು ಒಬಿಸಿ ಎಂದಿದ್ದೇಕೆ?

ಜಗ್ದಾಲಪುರ (ಛತ್ತೀಸ್‌ಗಢ) : ಪ್ರಧಾನಿ ಮೋದಿ ಅವರು ಬಡತನ ಒಂದೇ ಜಾತಿ ಎಂದ ಮೇಲೆ ತಾವು ಹಿಂದುಳಿದ ವರ್ಗದವರು ಎಂದು ಹೇಳಿದ್ದು ಏಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಇಲ್ಲಿ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್, 'ಬಿಜೆಪಿಗರು ಆದಿವಾಸಿಗಳಿಗೆ ವನವಾಸಿಗಳೆಂದು ಕರೆದು ಅವಮಾನ ಮಾಡಿದ್ದಾರೆ. ಆದಿವಾಸಿಗಳ ಮೇಲೆ ಮೂತ್ರ ಮಾಡಿದ್ದರು. ಈಗ ಹೆಸರು ಬದಲಿಸಿ ಆದಿವಾಸಿಗಳನ್ನು ಪ್ರಾಣಿಗಳಂತೆ ಪರಿಗಣಿಸಿದ್ದಾರೆ. ಅವರು ನಿಮ್ಮ ಭೂಮಿಯನ್ನು ಅದಾನಿಗೆ ಮಾರಾಟ ಮಾಡಿ ಆ ಹಣದಿಂದ ಚುನಾವಣೆಗೆ ಖರ್ಚು ಮಾಡಿ ಮೋಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದಿಲ್ಲಿ ಗಾಳಿ ಮಲಿನ ಮಟ್ಟ 100 ಪಟ್ಟು ಹೆಚ್ಚಳ :ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಕಾಶ್ಮೀರದ ನೌಕರರ ಪ್ರತಿಭಟನೆಗೆ ನಿರ್ಬಂಧ: ವಿಪಕ್ಷಗಳಿಂದ ತೀವ್ರ ಕಿಡಿಕಿಡಿ

ಶ್ರೀನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಮ್ಮುಕಾಶ್ಮೀರದ ಸರ್ಕಾರಿ ನೌಕರರು ಉದ್ದೇಶಿಸಿರುವ ಪ್ರತಿಭಟನೆಗೆ ಸರ್ಕಾರ ನಿರ್ಬಂಧ ಹೇರಿದೆ. ಸರ್ಕಾರಿ ನೌಕರರ ಒಕ್ಕೂಟದ ಜೊತೆಗೆ ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿ ನಡೆದಿದ್ದು, ಆದ್ಯತೆಯ ಮೇರೆಗೆ ಈಡೇರಿಸುವ ಭರವಸೆ ನೀಡಲಾಗಿದೆ. ಆದಾಗ್ಯೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದೆ. ಈ ನಡುವೆ ನ್ಯಾಷನಲ್ ಕಾನ್ಸರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ 'ಪ್ರತಿಭಟನೆ ಹತ್ತಿಕ್ಕುವ ಮೂಲಕ ಸಾಂವಿಧಾನಿಕ ಹಕ್ಕನ್ನು ನಿಗ್ರಹಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

Follow Us:
Download App:
  • android
  • ios