Asianet Suvarna News Asianet Suvarna News

ಶಂಕಿತ ಉಗ್ರರ ಕಾಲಿಗೆ ಜಿಪಿಎಸ್ ಅಳವಡಿಕೆ: ಕಾಶ್ಮೀರ ಪೊಲೀಸರಿಂದ ಹೊಸ ಪ್ರಯೋಗ

ಜಾಮೀನಿನ ಮೇಲೆ ಬಿಡುಗಡೆಯಾದ ಶಂಕಿತ ಉಗ್ರರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಅಂಥವರ ಕಾಲಿಗೆ ಜಿಪಿ ಎಸ್ ಆಧರಿತ ಬಳೆ ಅಳವಡಿಸುವ ಪ್ರಯೋಗವೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರಂಭಿಸಿದ್ದಾರೆ.

GPS to suspected terrorist Kashmir police Applies GPS to suspected terrorists leg in First time in the country akb
Author
First Published Nov 5, 2023, 10:18 AM IST

ಶ್ರೀನಗರ: ಜಾಮೀನಿನ ಮೇಲೆ ಬಿಡುಗಡೆಯಾದ ಶಂಕಿತ ಉಗ್ರರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಅಂಥವರ ಕಾಲಿಗೆ ಜಿಪಿ ಎಸ್ ಆಧರಿತ ಬಳೆ ಅಳವಡಿಸುವ ಪ್ರಯೋಗವೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಆರಂಭಿಸಿದ್ದಾರೆ.

ಇಂಥ ಪ್ರಯೋಗ ದೇಶದಲ್ಲೇ ಮೊದಲು. ಈ ಸಾಧನಗಳನ್ನು ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಬಳಸಲಾಗುತ್ತಿದ್ದು, ಭಾರತದಲ್ಲಿ ಇದೇ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಫುಲಾಂ ಮೊಹ ಮ್ಮದ್ ಭಟ್ ಎಂಬ ವ್ಯಕ್ತಿಯ ಮಧ್ಯಂತರ ಜಾಮೀನು ಅರ್ಜಿಯನ್ನು ಆಲಿಸಿದ ಜಮ್ಮು ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯ, ಅವರಿಗೆ ಜಿಪಿಎಸ್ ಆಧಾರಿತ ಸಾಧನ ಅಳವಡಿಸಿ ಜಾಮೀನು ಮಂಜೂರು ಮಾಡಿತು. 

ಇಸ್ರೇಲ್‌ ಕಟ್ಟಿಹಾಕಲು ಸುರಂಗದಲ್ಲೇ ಹೊಂಚು ಹಾಕಿದ 40000 ಉಗ್ರರು: ಸುರಂಗಗಳಲ್ಲಿ ಶಸ್ತ್ರಾಸ್ತ್ರ, ಆಹಾರ ಸಂಗ್ರಹ

ಭಟ್ ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿತನಾಗಿದ್ದು, ಆತನಿಗೆ ಹಲವು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕವಿರುವ ಶಂಕೆಯ ಮೇಲೆ ಬಂಧಿಸಲಾಗಿತ್ತು. ಪ್ರಸ್ತುತ ಈ ಸಾಧನವನ್ನು ದೇಶದ್ರೋಹ ಪ್ರಕರಣದಡಿ ಬಂಧಿತರಾಗುವ ಆರೋಪಿಗಳಿಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ.

ದಿಲ್ಲಿ ಗಾಳಿ ಮಲಿನ ಮಟ್ಟ 100 ಪಟ್ಟು ಹೆಚ್ಚಳ :ವಿಶ್ವ ಆರೋಗ್ಯ ಸಂಸ್ಥೆ ಕಳವಳ

Follow Us:
Download App:
  • android
  • ios