ಚಳಿ ತಡೆಗೆ ಟೀಶರ್ಟ್‌ನೊಳಗೆ ಥರ್ಮಲ್ಸ್ ಬಳಕೆ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರ ಟೀಕೆ
ರಾಹುಲ್ ಗಾಂಧಿಯ ಟೀಶರ್ಟ್ ಕಾಲರಿನ ಜೂಮ್ ಮಾಡಿದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಪೋಸ್ಟ್ ಮಾಡಿದ್ದು, ‘ಬೆಕ್ಕು ಚೀಲದಿಂದ ಹೊರಗಿದೆ. ತೋಳಿಲ್ಲದ ಥರ್ಮಲ್ , ಟೀಶರ್ಟ್ ರಾಹುಲ್ ಗಾಂಧಿಯ ನಕಲಿ ನಿರೂಪಣೆಯನ್ನು ಬಹಿರಂಗಪಡಿಸುತ್ತದೆ ಎಂದಿದ್ದಾರೆ.
ನವದೆಹಲಿ: ಕೊರೆವ ಚಳಿಯ ನಡುವೆಯೂ ರಾಹುಲ್ ಗಾಂಧಿ ಕೇವಲ ಟೀಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿರುವ ಸುದ್ದಿ ಚರ್ಚೆಯಲ್ಲಿರುವ ಹೊತ್ತಿನಲ್ಲೇ, ಚಳಿ ತಡೆಯಲು ರಾಹುಲ್ ಟೀಶರ್ಚ್‌ನೊಳಗೆ ಥರ್ಮಲ್ಸ್ (ದೇಹದಲ್ಲಿ ಉಷ್ಣಾಂಶ ಉಂಟು ಮಾಡುವ) ಧರಿಸಿದ್ದಾರೆ. ಇದು ಪ್ರಚಾರದ ಗಿಮಿಕ್ ಎಂದು ಬಿಜೆಪಿ ಆರೋಪಿಸಿದೆ. ಆದರೆ ಇಂಥ ಆರೋಪ ಮಾಡುವವರು ‘ಹತಾಶೆ ತಳಿಯ ಭಕ್ತರು’ ಎಂದು ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ರಾಹುಲ್ ಗಾಂಧಿಯ (Rahul Gandhi) ಟೀಶರ್ಟ್ ಕಾಲರಿನ (T Shirt Collar) ಜೂಮ್ ಮಾಡಿದ ಫೋಟೋವನ್ನು ಟ್ವಿಟ್ಟರ್‌ನಲ್ಲಿ (Twitter) ಬಿಜೆಪಿ (BJP) ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಪೋಸ್ಟ್ ಮಾಡಿದ್ದು, ‘ಬೆಕ್ಕು ಚೀಲದಿಂದ ಹೊರಗಿದೆ. ತೋಳಿಲ್ಲದ ಥರ್ಮಲ್ (Thermal) , ಟೀಶರ್ಟ್ ರಾಹುಲ್ ಗಾಂಧಿಯ ನಕಲಿ ನಿರೂಪಣೆಯನ್ನು ಬಹಿರಂಗಪಡಿಸುತ್ತದೆ. ಚಳಿಗಾಲದಲ್ಲಿ (Cold Season) ಚಳಿಯ ಅನುಭವ ಸಾಮಾನ್ಯ. ಆದರೆ ಇದು ನಕಲಿ ಪ್ರಚಾರಕ್ಕಾಗಿ ಗಮನ ಸೆಳೆಯುವ ಗಿಮಿಕ್ ಹೊರತು ಬೇರೇನಲ್ಲ’ ಎಂದು ಬರೆದುಕೊಂಡಿದ್ದಾರೆ.
ಆದರೆ, ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇಟ್ ‘ಭಕ್ತರದು ಹತಾಶೆಯ ತಳಿ. ಅವರು ರಾಹುಲ್ ಗಾಂಧಿಯವರ ಕುತ್ತಿಗೆ ಮತ್ತು ಎದೆಯ ಮೇಲೆ ಟೀಶರ್ಟ್‌ನಿಂದ ಉಂಟಾದ ಸುಕ್ಕುಗಳನ್ನು ಜೂಮ್ ಮಾಡಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಹಾಗೂ, ಕಾಂಗ್ರೆಸ್‌ನ ರುಚಿರಾ ಚತುರ್ವೇದಿ ‘ಬಿಳಿ ಟೀಶರ್ಟ್‌ನಿಂದ 2 ರೂ. ಟ್ರೋಲ್‌ಗಳು ಏಕೆ ಚಡಪಡಿಸುತ್ತಿವೆ’ ಎಂದೂ ಬಿಜೆಪಿ ಕಾಲೆಳೆದಿದ್ದಾರೆ.
ಇದನ್ನು ಓದಿ: ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕ ನಾಯಿ!
ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿಯವರ ಟೀ ಶರ್ಟ್ ಬಿಜೆಪಿ ನಾಯಕರು ಮತ್ತು ಪಕ್ಷದ ಬೆಂಬಲಿಗರ ಗಮನ ಪಡೆದುಕೊಂಡಿದೆ. ದೆಹಲಿಯ ಶೀತ ವಾತಾವರಣದಲ್ಲಿಯೂ ಕಾಂಗ್ರೆಸ್ ನಾಯಕ ಕೇವಲ ಬಿಳಿ ಟೀ-ಶರ್ಟ್ ಧರಿಸಿದ್ದನ್ನು ಕಂಡು, 50 ವರ್ಷ ವಯಸ್ಸಿನ ರಾಹುಲ್ ಗಾಂಧಿ ಚಳಿಯ ತಾಪಮಾನವನ್ನು ಧಿಕ್ಕರಿಸುವುದನ್ನು ನೋಡಿ ಜನರು ದಿಗ್ಭ್ರಮೆಗೊಂಡರು. ಕಾಂಗ್ರೆಸ್ ಬೆಂಬಲಿಗರು ಅವರನ್ನು ಫಿಟ್‌ನೆಸ್ ಐಕಾನ್ ಎಂದು ಶ್ಲಾಘಿಸಿದರೆ, ಬಿಜೆಪಿ ಟೀಕೆ ಮಾಡಿದೆ. ದುಬಾರಿ ಬೆಲೆಯ ಟೀ - ಶರ್ಟ್ ಅಥವಾ ಟೀ-ಶರ್ಟ್ ಒಳಗಡೆ ಥರ್ಮಲ್ಸ್ ಧರಿಸಿದ್ದರು ಎಂಬ ಇತ್ತೀಚಿನ ಹೇಳಿಕೆಯಾಗಿರಲಿ, ಅವರನ್ನು ವಿರೋಧಿಸುವ ಅಥವಾ ಟೀಕಿಸುವ ಅವಕಾಶವನ್ನು ಬಿಜೆಪಿ ಎಂದಿಗೂ ಕಳೆದುಕೊಂಡಿಲ್ಲ.
ಇದೇ ರೀತಿ, ಮಂಗಳವಾರ ದೆಹಲಿಯಲ್ಲಿ ಭಾರತ್ ಜೋಡೋ ಯಾತ್ರೆ ಪುನಾರಂಭಗೊಂಡ ಕೆಲವು ದಿನಗಳ ನಂತರ, ಬಿಜೆಪಿಯನ್ನು ಬೆಂಬಲಿಸುವ ಹಲವಾರು ಪಕ್ಷದ ಕಾರ್ಯಕರ್ತರು ಶೀತ ಹವಾಮಾನವನ್ನು ತಡೆಯಲು ರಾಹುಲ್ ಗಾಂಧಿ ಥರ್ಮಲ್ ಧರಿಸಿದ್ದಾರೆ ಎನ್ನಲಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಕಾಂಗ್ರೆಸ್ ನಾಯಕನ ಕುತ್ತಿಗೆಯ ಭಾಗಕ್ಕೆ ಜೂಮ್ ಆಗುತ್ತದೆ ಮತ್ತು ಟೀ ಶರ್ಟ್‌ನೊಳಗೆ ಬಟ್ಟೆಯ ಮತ್ತೊಂದು ಪದರವನ್ನು ಧರಿಸಿರುವುದನ್ನು ಸೆರೆಹಿಡಿಯುತ್ತದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಪುನಾರಂಭ ಯುಪಿಯಲ್ಲಿ ರಾಹುಲ್‌ಗೆ ಭರ್ಜರಿ ಸ್ವಾಗತ
ರಾಹುಲ್ ಗಾಂಧಿ ಬಣ್ಣ ಬಯಲು..? ಬಿಜೆಪಿ ಟೀಕೆ ಹೀಗಿದೆ ನೋಡಿ..
ಇನ್ನೊಂದೆಡೆ, ಬಿಜೆಪಿಯದ್ದು ಹತಾಶ ಪ್ರತಿಕ್ರಿಯೆ ಎಂದು ಕರೆಯುವ ಮೂಲಕ ಕಾಂಗ್ರೆಸ್ ಪ್ರತ್ಯುತ್ತರ ನೀಡಿದೆ.
ಈ ಮಧ್ಯೆ, ರಾಜಕೀಯ ವಿಶ್ಲೇಷಕ ಹಿಮಾಂಶು ಜೈನ್ ಕೂಡ ರಾಹುಲ್ ಗಾಂಧಿ ಕೇವಲ ಟೀ ಶರ್ಟ್ ಧರಿಸಿರುವುದು ನಕಲಿ ಎಂದು ಸುಳಿವು ನೀಡಿದ್ದಾರೆ. ಕಾಂಗ್ರೆಸ್ ನಾಯಕ ಥರ್ಮಲ್ ಅಥವಾ ಇನ್ನೊಂದು ಪದರದ ಬಟ್ಟೆಯನ್ನು ಧರಿಸುತ್ತಾರೆ ಎಂದು ಸೂಚಿಸಲು ಅವರು ಸರಣಿ ಟ್ವೀಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್‌ನಲ್ಲಿ, "...ಅವರು ಕೆಳಗೆ ಬೆಚ್ಚಗಿನ ಬಟ್ಟೆಗಳನ್ನು ಹೊಂದಿದ್ದಾರೆಂದು ನಾನು ಭಾವಿಸುತ್ತೇನೆ." ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಬಹಳ ಕಡೆ ಓಡಾಡಬೇಕು; ಅವರು ಓಡಾಡಿದಷ್ಟು ಬಿಜೆಪಿಗೆ ಲಾಭ: ಪ್ರಲ್ಹಾದ್ ಜೋಶಿ