ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ, 9 ದಿನಗಳ ವಿರಾಮದ ಬಳಿಕ ಮಂಗಳವಾರ ಪುನಾರಂಭಗೊಂಡಿದ್ದು, ಗಾಜಿಯಾಬಾದ್‌ ಮೂಲಕ ಉತ್ತರಪ್ರದೇಶವನ್ನು ಪ್ರವೇಶಿಸಿದೆ. ಈ ವೇಳೆ ರಾಹುಲ್‌ ಸೇರಿದಂತೆ ಪಕ್ಷದ ನಾಯಕರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದ್ದಾರೆ.

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ, 9 ದಿನಗಳ ವಿರಾಮದ ಬಳಿಕ ಮಂಗಳವಾರ ಪುನಾರಂಭಗೊಂಡಿದ್ದು, ಗಾಜಿಯಾಬಾದ್‌ ಮೂಲಕ ಉತ್ತರಪ್ರದೇಶವನ್ನು ಪ್ರವೇಶಿಸಿದೆ. ಈ ವೇಳೆ ರಾಹುಲ್‌ ಸೇರಿದಂತೆ ಪಕ್ಷದ ನಾಯಕರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದ್ದಾರೆ. ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ, ವೇಣುಗೋಪಾಲ್‌, ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅನಿಲ್‌ ಕುಮಾರ್‌ ಚೌಧರಿ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ನಡುವೆ ಪ್ರಿಯಾಂಕಾ ರಾಹುಲ್‌ ಗಾಂಧಿ ಅವರನ್ನು ಸೇನಾನಿ ಎಂದು ಬಣ್ಣಿಸಿದ್ದಾರೆ. ವಿಪಕ್ಷಗಳು ರಾಹುಲ್‌ ವಿರುದ್ಧ ಸಾಕಷ್ಟುಹಣ ಖರ್ಚು ಮಾಡಿ ಪಿತೂರಿ ಮಾಡಿದರು, ಅವನ ವರ್ಚಸ್ಸು ಕಡಿಮೆಯಾಗಿಲ್ಲ. ಭಾರತ್‌ ಜೋಡೋ ಯಾತ್ರೆಯಲ್ಲಿ ಜನ ಅವನೊಂದಿಗೆ ನಿಂತು ಬೆಂಬಲಿಸಿದ್ದಾರೆ. ಯಾತ್ರೆ ವೇಳೆ ರಾಹುಲ್‌ ಜನರ ಕಷ್ಟಗಳಿಗೆ ಕಿವಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದಾನಿ, ಅಂಬಾರಿ ದೊಡ್ಡ ದೊಡ್ಡ ರಾಜಕಾರಣಿಗಳು, ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆ, ಮಾಧ್ಯಮ ಸೇರಿದಂತೆ ಎಲ್ಲರನ್ನೂ ಖರೀದಿಸಿದರು, ಆದರೆ ಅವರು ನನ್ನ ತಮ್ಮನನ್ನು ಖರೀದಿಸಲು ಸಾಧ್ಯವಾಗಲಿಲ್ಲ, ಆಗುವುದೂ ಇಲ್ಲ ಎಂದು ಪ್ರಿಯಾಂಕಾ ಹೇಳಿದರು.


2024ರ ಲೋಕಸಭಾ ಚನಾವಣೆಗೆ ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ, ಕಮಲ್‌ನಾಥ್ ಭವಿಷ್ಯ!

ಬಿಜೆಪಿ ಆರ್‌ಎಸ್‌ಎಸ್‌ಗೆ ಧನ್ಯವಾದ, ಇವರೇ ನನ್ನ ಗುರು ಎಂದ ರಾಹುಲ್ ಗಾಂಧಿ!