ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕ ನಾಯಿ!
ಹರ್ಯಾಣ ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಪ್ರಿಯಾಂಕ ಗಾಂಧಿ ಅವರ ಸಾಕು ನಾಯಿ ಲೂನಾ ಹೆಜ್ಜೆ ಹಾಕಿದೆ.
ನವದೆಹಲಿ: ಹರ್ಯಾಣ ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಪ್ರಿಯಾಂಕ ಗಾಂಧಿ ಅವರ ಸಾಕು ನಾಯಿ ಲೂನಾ ಹೆಜ್ಜೆ ಹಾಕಿದೆ. ಇದೇ ವೇಳೆ ಬಾಕ್ಸರ್ ವಿಜೇಂದರ್ ಸಿಂಗ್ ಕೂಡ ರಾಹುಲ್ ಜತೆ ಹೆಜ್ಜೆ ಹಾಕಿದ್ದಾರೆ. ರಾಹುಲ್ ಗಾಂಧಿಗಿಂತ ವೇಗವಾಗಿ ಲೂನಾ ಹೆಜ್ಜೆಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನನ್ನ ಲೂನಾವನ್ನು ಅಪಹರಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಅವರು ಟ್ವೀಟರ್‌ನಲ್ಲಿ ರಾಹುಲ್ ಕಾಲೆಳಿದಿದ್ದಾರೆ. ಈ ಬಗೆಗಿನ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು, ಲೂನಾಗೆ ರಾಹುಲ್ ಮೇಲಿರುವ ಪ್ರೀತಿಯನ್ನು ವರ್ಣಿಸಿದ್ದಾರೆ.