ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿತಾ ಕಾಂಗ್ರೆಸ್? EVM ಬೊಟ್ಟು ಮಾಡಿದ ಪಿತ್ರೋಡ!
ಲೋಕಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಲಾಗಿದೆ. ಕಾಂಗ್ರೆಸ್ ಸಾಗರೋತ್ತರ ಅಧ್ಯಕ್ಷ, ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡ ಈ ಬಾರಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಹೀಗೆ ಹೋದರೆ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲಲಿದೆ ಎಂದಿದೆ.
ನವದೆಹಲಿ(ಡಿ.28) ಲೋಕಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿತಾ ಅನ್ನೋ ಪ್ರಶ್ನೆ ಎದುರಾಗಿದೆ. 2024ರ ಲೋಕಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ ಎಚ್ಚರಿಕೆ ನೀಡಲಾಗಿದೆ. ಕಾಂಗ್ರೆಸ್ ಸಾಗರೋತ್ತರ ಅಧ್ಯಕ್ಷ, ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡ ಎಚ್ಚರಿಕೆ ನೀಡಿದ್ದು, ತಕ್ಷಣವೇ ಇವಿಎಂ ಹಗರಣ ಸರಿಪಡಿಸಲು ಸೂಚನೆ ನೀಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಇವಿಎಂನಿಂದಲೇ ಗೆಲ್ಲುತ್ತಿದೆ. ಈ ಬಾರಿಯೂ ಇವಿಎಂ ಕುರಿತು ಕಾಂಗ್ರೆಸ್ ಎಚ್ಚರಿಕೆ ವಹಿಸದಿದ್ದರೆ ಲೋಕಸಭೆಯಲ್ಲಿ 400 ಸ್ಥಾನ ಗೆಲ್ಲಲಿದೆ ಎಂದು ಸ್ಯಾಮ್ ಪಿತ್ರೋಡ ಹೇಳಿದ್ದಾರೆ.
ಕಾಂಗ್ರೆಸ್ ಈಗಾಗಲೇ ಇವಿಎಂ ಕುರಿತು ಹಲವು ಬಾರಿ ದೂರು ಸಲ್ಲಿಸಿದೆ. ಆದರೆ ಚುನಾವಣಾ ಆಯೋಗ ಉತ್ತರ ನೀಡಿಲ್ಲ. ಬಿಜೆಪಿ ಸರ್ಕಾರ ನಡೆಸುತ್ತಿರುವ ಅತೀ ದೊಡ್ಡ ಹಗರಣಗಳಲ್ಲಿ ಇವಿಎಂ ಹಗರಣ ಕೂಡ ಒಂದು. ಇತ್ತೀಚಿನ ವಿಧಾನಸಭೆ ಚುನಾವಣೆಗಳ ಫಲಿತಾಂಶ ದೂರಕ್ಕಿಡಿ, ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಕೇಂದ್ರ ಬಿಜೆಪಿ ಇವಿಎಂ ಹಗರಣವನ್ನು ಈ ಬಾರಿಯೂ ಮುಂದುವರಿಸಲಿದೆ. ಅದಕ್ಕೂ ಮೊದಲೇ ಕಾಂಗ್ರೆಸ್ ಹೋರಾಟದ ಮೂಲಕ ಇವಿಎಂ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಬಿಜೆಪಿ 400 ಸ್ಥಾನ ಗೆಲ್ಲಲಿದೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
'ರಾಮ, ಹನುಮಂತ, ದೇವಸ್ಥಾನ ನಿಮಗೆ ಕೆಲ್ಸ ಕೊಡಿಸೋದಿಲ್ಲ..' ವಿವಾದ ಎಬ್ಬಿಸಿದ ಸ್ಯಾಮ್ ಪಿತ್ರೋಡಾ ಹೇಳಿಕೆ!
ಸ್ಯಾಮ್ ಪಿತ್ರೋಡಾ ಮಾತುಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ಇವಿಎಂ ಮೂಲಕವೇ ಎರಡು ಚುನಾವಣೆ ಗೆದ್ದಿದೆ. ಇವಿಎಂ ಅತೀ ದೊಡ್ಡ ಹಗರಣವಾಗಿದೆ. 2024ರ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಯಾವುದೇ ಕಾರಣಗಳಿಲ್ಲ. ಪ್ರಜಾಪ್ರಭುತ್ವವನ್ನು ಕಗ್ಗೂಲೆ ಮಾಡಿ, ತಮ್ಮ ಅಧಿಕಾರ ಹಣ ಬಳಸಿ ಚುನಾವಣೆ ಗೆಲ್ಲುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತ ಸ್ಯಾಮ್ ಪಿತ್ರೋಡ ಮಾತಿಗೆ ವಿರೋಧಗಳು ವ್ಯಕ್ತವಾಗಿದೆ. ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆ ಗೆದ್ದು ಸರ್ಕಾರ ರಚಿಸಿದೆ. ಆದರೆ ಈ ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಇವಿಎಂ ಹ್ಯಾಕ್ ಮಾಡಿ ಗೆಲ್ಲುತ್ತಿದ್ದರೆ, ಕಾಂಗ್ರೆಸ್ ಒಂದೂ ರಾಜ್ಯದಲ್ಲೂ ಅಧಿಕಾರಕ್ಕೆ ಬರುತ್ತಿರಲಿಲ್ಲ. ಇವಿಎಂ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರನ್ನು ಚುನಾವಣಾ ಆಯೋಗ ನಾಟಕ ಎಂದು ದಾಖಳೆ ಸಮೇತ ಉತ್ತರ ನೀಡಿದೆ. ಇದೀಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ, ಚುನಾವಣೆಗೊ ಮೊದಲೇ ಸೋಲೊಪ್ಪಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಸಿಖ್ ನರಮೇಧ: ಆಗಿದ್ದಾಗೋಯ್ತು ಎಂದಿದ್ದ ಪಿತ್ರೋಡಾ ಕ್ಷಮೆಯಾಚನೆ!