Asianet Suvarna News Asianet Suvarna News

Bizarre case:ಬರ್ತ್‌ಡೆ ವಿಶ್ ಮಾಡಿಲ್ಲ, ಮಾತು ಬಿಟ್ಟ ಬಾಯ್‌ಫ್ರೆಂಡ್, ಪೊಲೀಸರಿಗೆ ದೂರು ನೀಡಿದ ಯುವತಿ!

  • ಪ್ರಣಯ ಹಕ್ಕಿಗಳ ನಡುವೆ ವೈಮನಸ್ಸು, ಪೊಲೀಸ್ ಮೆಟ್ಟೇಲೇರಿತು ಏಕ್ ಲವ್ ಸ್ಟೋರಿ
  • ಪೀತಿಸುವ ಹುಡುಗ ಮಾತೇ ಆಡುತ್ತಿಲ್ಲ, ಪ್ರೀತಿ ಉಳಿಸಿಕೊಡಿ ಎಂದ ಹುಡುಗಿ
  • ಪೊಲೀಸರ ಮುಂದೆ ಅಳಲು ತೋಡಿಕೊಂಡ ಯುವತಿಗೆ ಪೊಲೀಸರ ಸರ್ಪ್ರೈಸ್
Bizarre case Woman approached police after her boyfriend stopped talking to her in Madhya pradesh ckm
Author
Bengaluru, First Published Nov 21, 2021, 3:41 AM IST
  • Facebook
  • Twitter
  • Whatsapp

ಮಧ್ಯ ಪ್ರದೇಶ(ನ.21):  ಪೀತಿಸುವ(Love) ಹೃದಯಗಳ ನಡುವೆ ಮೈಮನಸ್ಸು ಬಂದರೆ ಕತೆ ಮುಗಿಯಿತು. ದಶಕಗಳ ಹಿಂದಿನ ಪ್ರೀತಿಯಂತಲ್ಲ, ಒಂದೆರೆಡು ಮಾತಿಗೆ ಬ್ರೇಕ್ ಅಪ್. ಆದರೆ ಇಲ್ಲೊಂದು ಪ್ರೀತಿಸುವ ಜೋಡಿ(Couple) ಪ್ರೀತಿ ಉಳಿಸಿಕೊಳ್ಳಲು ಪೊಲೀಸ್ ಠಾಣೆ ಮೆಟ್ಟೇಲೇರಿದ ಘಟನೆ ನಡೆದಿದೆ. ಬರ್ತ್‌ಡೆಗೆ(Birthday) ಬಾಯ್‌ಫ್ರೆಂಡ್‌(Boyfriend) ಶುಭಾಶಯ ಹೇಳದ ಗೆಳತಿ ಮೇಲೆ ಸಿಟ್ಟಾದ ಹುಡುಗ, ಮಾತು ಬಿಟ್ಟಿದ್ದಾನೆ. ಪರಿಣಾಮ ಆಕೆ ಪೊಲೀಸರಿಗೆ ದೂರು ನೀಡಿ ಹೊಸ ಅಧ್ಯಾಯ ಆರಂಭಿಸಿದ್ದಾಳೆ.

ಇದು ವಿಚಿತ್ರವಾಗಿದ್ದರೂ, ಯುವತಿ(Women) ಮುಂದೆ ಬೇರೆ ದಾರಿಗಳೇ ಇರಲಿಲ್ಲ. ಮಧ್ಯಪ್ರದೇಶದ ಚಿಂದ್ವಾರದಲ್ಲಿ ಈ ಘಟನೆ ನಡೆದಿದೆ. ಚಿಂದ್ವಾರದ ಹುಡುಗಿ, ಸರಾನಿ ಗ್ರಾಮದ ಹುಡುಗನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ. ಇವರಿಬ್ಬರು ಅತ್ಯಂತ ರೋಮ್ಯಾಂಟಿಕ್ ಪ್ರೀತಿ.  ಚೊಕ್ಕ ಪ್ರೀತಿಯಲ್ಲಿ ಒಂದಷ್ಟು ಹರಟೆ, ಸುತ್ತಾಟ, ಐಸ್‌ಕ್ರೀಂ, ಬೈಕ್ ರೈಡ್ ಇವರ ಪ್ರೀತಿಯಲ್ಲೂ ಇತ್ತು. ಚಿಕ್ಕ ಪುಟ್ಟ ವೈಮನಸ್ಸು, ಜಗಳೊಂದಿಗೆ ಸಂಬಂಧ ಸಿನಿಮಾ ಹಾಡಿನಂತೆ ಮುಂದುವರಿಯುತ್ತಿತ್ತು.

Viral Video: ಗ್ರ್ಯಾಂಡ್ ವೆಡ್ಡಿಂಗ್ ಎಂಟ್ರಿ ಪ್ಲಾನ್, ದೊಪ್ಪಂತ ಕೆಳಗೆ ಬಿದ್ದ ಜೋಡಿ

ಚಾಟಿಂಗ್, ಮೀಟಿಂಗ್ ನಡುವೆ ಹುಡುಗಿ ಒಂದು ವಿಚಾರ ಮರೆತೆ ಬಿಟ್ಟಿದ್ದಾಳೆ. ಹುಡುಗನ ಹುಟ್ಟು ಹಬ್ಬಕ್ಕೆ ಶುಭಕೋರಲು ಹುಡುಗಿ ಮರೆತಿದ್ದಾಳೆ. ಹೆಚ್ಚಿನ ಘಟನೆಗಳಲ್ಲಿ ಹುಡುಗ ಮರೆತು ಕೊನೆಗೆ ಆಕೆಯ ಕೋಪ ತಣಿಸಲು ಹರಸಾಹಸ ಮಾಡಿದ ಅದೆಷ್ಟೋ ಉದಾಹರಣೆಗಳಿವೆ. ಆದರೆ ಇಲ್ಲ, ಇತರ ಕಾರಣಗಳಿಂದ ಹುಡುಗಿ, ತನ್ನ ಗಳೆಯನ ಹುಟ್ಟು ಹಬ್ಬಕ್ಕೆ ಶುಬಕೋರಿಲ್ಲ. ವಿಷಯ ಇಷ್ಟೇ ನೋಡಿ. ಲವ್ವಲ್ಲಿ ಬಿದ್ರೆ ಇದಕ್ಕಿಂತ ಚಿಕ್ಕ ವಿಷಯ ಕೂಡ ದೊಡ್ಡ ಜಗಳಗ್ಗೆ ಕಾರಣವಾಗಬಲ್ಲದು. ಕೆಲವೊಮ್ಮೆ ಆಕಾಶ ಕಳಚಿ ತಲೆ ಮೇಲೆ ಬೀಳುವ ವಿಷಯ ತಮಾಷೆಯಾಗಿ ಕಾಣಿಸಬಹುದು.

ಪ್ರೀತಿ ಇಷ್ಟು ಮುಂದೆ ಸಾಗಿದರೂ ಹುಟ್ಟುಹಬ್ಬಕ್ಕೆ ಶುಭಕೋರದ ಗೆಳತಿ ಮೇಲ ಬಾಯ್‌ಫ್ರೆಂಡ್ ಸಿಟ್ಟಾಗಿದ್ದಾನೆ. ಮಧ್ಯರಾತ್ರಿ ಗೆಳತಿ ಕರೆ ಮಾಡಿ ವಿಶ್ ಮಾಡುತ್ತಾಳೆ. ತನಗೆ ಗಿಫ್ಟ್ ನೀಡುತ್ತಾಳೆ, ಅದರಲ್ಲೂ ಒಂದು ಸ್ಪೆಷಲ್ ಗಿಫ್ಟ್ ನಿರೀಕ್ಷಿಸಿದ್ದ ಬಾಯ್‌ಫ್ರೆಂಡ್‌ಗೆ ಗಳೆತಿ ಶುಭಕೋರಲೇ ಇಲ್ಲ. ಹುಡುಗನ ಕೋಪ ಆರಲೇ ಇಲ್ಲ. ತನ್ನ ಇನಿಯ ಸಿಟ್ಟಲ್ಲಿದ್ದಾನೆ ಅನ್ನೋದು ಅರ್ಥವಾಗಲು ಗೆಳತಿಗೆ ಒಂದು ದಿನ ಬೇಕಾಯ್ತು. ಅಷ್ಟರಲ್ಲೇ ಗೆಳಯ ಒಂದು ನಿರ್ಧಾರಕ್ಕೂ ಬಂದಿದ್ದ. ತಾನು ಆಕೆಯ ಜೊತೆ ಮಾತನಾಡುವುದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡಿದ್ದ.

ಇತ್ತ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ಶುಭಕೋರಿಲ್ಲ ಅನ್ನೋ ಸಂಕಟ ಒಂದೆಡೆ, ಮತ್ತೊಂದೆಡೆ ತನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಅನ್ನೋ ಆತಂಕ. ಒಂದೆರೆಡು ದಿನ ಸತತ ಫೋನ್ ಮಾಡಿದ್ದಾಳೆ. ಮೂರನೇ ದಿನ ಹುಡುಗನ ಹುಡುಕಿಕೊಂಡು ಹೋಗಿದ್ದಾಳೆ. ಭೇಟಿಯಾದರೂ ಹುಡುಗ ಒಂದು ಮಾತು ಆಡಿಲ್ಲ. ನೇರವಾಗಿ ಬೈಕ್ ಏರಿ ಹೊರಟೆ ಬಿಟ್ಟಿದ್ದಾನೆ. 

ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವಜೋಡಿ!

ಲವ್ ಸಿನಿಮಾ ರೀತಿ ಹುಡುಗಿ ಒಂದಷ್ಟು ಕಣ್ಣೀರು, ಕರ್ಚಿಫ್ ಒದ್ದೆ ಮಾಡಿಕೊಂಡು ಹಿಂತುರುಗಿದ್ದಾಳೆ. ವ್ಯಾಟ್ಸ್‌ಆ್ಯಪ್ , ಮೇಸೆಜ್ ಸೇರಿದಂತ ಎಲ್ಲಾ ಆ್ಯಪ್ ಮೂಲಕ ಕ್ಷಮಿಸು ಎಂದಿದ್ದಾಳೆ. ಆದರೂ ಹುಡುಗನ ಕೋಪ ತಣ್ಣಗಾಗಿಲ್ಲ. ಮಾತು ಆಡಲೇ ಇಲ್ಲ. ಈಕೆಯ ಎಲ್ಲಾ ಪ್ರಯತ್ನಗಳು ವಿಫಲಗೊಂಡಿತ್ತು. ಬೇರೆ ದಾರಿ ಕಾಣದೇ ಕೊನೆಗೆ ಪೊಲೀಸ್ ಠಾಣೆ ಮೆಟ್ಟಲೇರಿದ್ದಾಳೆ. 

ತನ್ನ ಬಾಯ್‌ಫ್ರೆಂಡ್ ಮಾತನಾಡುತ್ತಿಲ್ಲ, ಆತನ ಬಳಿ ಮಾತನಾಡಲು ಹೇಳಿ. ನನ್ನ ಪ್ರೀತಿಯನ್ನು ಉಳಿಸಿಕೊಡಿ ಎಂದು ಪೊಲೀಸರ ಮುಂದೆ ಅತ್ತಿದ್ದಾಳೆ. ಈಕೆಯ ಅಳುವಿಗೆ ಪೊಲೀಸರ ಹೃದಯವೂ ಕರಗಿದೆ. ಆಕೆಯಿಂದ ನಂಬರ್ ತೆಗೆದು ಫೋನ್ ಮಾಡಿದ್ದಾರೆ. ಪೊಲೀಸ್ ಠಾಣೆಗೆ ಬರಲು ಸೂಚಿಸಿದ್ದಾರೆ. ಗೆಳತಿ ಏನೋ ಮಾಡಿಕೊಂಡಿದ್ದಾಳೆ ಎಂದು ಗಾಬರಿಯಿಂದ ಪೊಲೀಸ್ ಠಾಣೆಗೆ ಬಂದ ಬಾಯ್‌ಫ್ರೆಂಡ್‌ಗೆ ವಿಷಯ ತಿಳಿದಿದೆ. ಇತ್ತ ಪೊಲೀಸರು ಇಬ್ಬರನ್ನೂ ಕೂರಿಸಿಕೊಂಡು ಕೌನ್ಸಿಲಿಂಗ್ ಮಾಡಿದ್ದಾರೆ.

ವೈಮನಸ್ಸು ದೂರ ಮಾಡಿದ್ದಾರೆ. ಬಳಿಕ ನಿಮ್ಮ ಪ್ರೀತಿ ಗಟ್ಟಿಯಾಗಲು ಮದುವೆಯಾಗಿ ಎಂದು ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲ ಪೋಷಕರಿಗೂ ಮಾಹಿತಿ ನೀಡಿದ್ದಾರೆ. ಇತ್ತ ಎರಡು ಕುಟುಂಬದ ಪೋಷಕರು ಒಪ್ಪಿದ್ದಾರೆ. ಚಿಂದ್ವಾರದ ಆರ್ಯಸಮಾಜ ಮಂದಿರದಲ್ಲಿ ಪ್ರಣಯ ಹಕ್ಕಿಗಳು ಮದುವೆಯಾಗಿದ್ದಾರೆ. 
 

Follow Us:
Download App:
  • android
  • ios