ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವಜೋಡಿ!

* ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಪ್ರಸಂಗ

* ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವಜೋಡಿ!

* ಪ್ರವಾ​ಹದ ಕಾರಣ ಪಾತ್ರೆ​ಯಲ್ಲಿ ತೇಲಿ​ಕೊಂಡು ಬಂದ​ರು

Amid heavy rains in Kerala bride and groom use cauldron to reach wedding venue pod

ಅಲಪ್ಪುಳ(ಅ.19): ದೇಶದಲ್ಲಿ ಕೊರೋನಾ ವೈರಸ್‌(Coronavirus) ಅಬ್ಬರ ಉತ್ತುಂಗ ಸ್ಥಿತಿಯಲ್ಲಿದ್ದಾಗ ಕೇರಳದಲ್ಲಿ(Kerala) ನಡೆದ ಕೆಲ ಮದುವೆಯ(Wedding) ಫೋಟೋಶೂಟ್‌ಗಳು ಕೋವಿಡ್‌ ಜಾಗೃತಿ ಮೂಡಿಸಿದ್ದವು. ಆದರೆ ಇದೀಗ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ(Rain) ಕೇರಳದ ಕೆಲ ಜಿಲ್ಲೆಗಳು ನದಿಗಳಂತೆ ಭಾಸವಾಗಿವೆ. ಈ ಹಿನ್ನೆಲೆಯಲ್ಲಿ ಸೋಮವಾರ ವಿವಾಹದ ಬಾಂಧವ್ಯಕ್ಕೆ ಕಾಲಿಟ್ಟನವ ಜೋಡಿಯೊಂದು ಅಡುಗೆ ಮಾಡುವ ಪಾತ್ರೆಯನ್ನೇ ದೋಣಿಯಾಗಿಸಿಕೊಂಡು ಅದರಲ್ಲಿ ಮದುವೆ ಧಿರಿಸಿನಲ್ಲಿ ಕಲ್ಯಾಣ ಮಂಟಪಕ್ಕೆ ಬಂದಿದೆ.

ಕೊರಳಿಗೆ ಹೂವಿನ ಹಾರ ಹಾಕಿಕೊಂಡಿರುವ ವಧು-ವರ ಅಡುಗೆ ಪಾತ್ರೆಯಲ್ಲಿ ಕುಳಿತಿದ್ದು, ಆ ಪಾತ್ರೆಯು ಮೊಳಕಾಲು ಉದ್ದದ ನೀರಿನಲ್ಲಿ ತೇಲುತ್ತಿದೆ. ಆರೋಗ್ಯ ಕಾರ್ಯಕರ್ತರಾಗಿರುವ ಆಕಾಶ್‌ ಮತ್ತು ಐಶ್ವರ್ಯ ಎಂಬುವರೇ ಅಡುಗೆ ಪಾತ್ರೆಯಲ್ಲಿ ದೋಣಿ ವಿಹಾರ ಮಾಡಿದ ನವ ಜೋಡಿ. ಈ ವಿಡಿಯೋ ಟೀವಿ ವಾಹಿನಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಧು-ವರ, ‘ಸೋಮವಾರ ಮದುವೆ ನಿಶ್ಚಯವಾಗಿತ್ತು. ಆದರೆ ಮನೆಯಿಂದ ಕಲ್ಯಾಣ ಮಂಟಪಕ್ಕೆ ಹೋಗಲು ವಾಹನಗಳ ವ್ಯವಸ್ಥೆ ಇರಲಿಲ್ಲ. ಹಾಗೆಂದು ಈ ಶುಭ ಗಳಿಗೆಯಲ್ಲಿ ಮದುವೆಯಾಗಲೇಬೇಕು ಎಂದು ತೀರ್ಮಾನಿಸಲಾಗಿತ್ತು. ಜತೆಗೆ ಕೋವಿಡ್‌ ಕಾರಣಕ್ಕೆ ಕಮ್ಮಿ ಜನರನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಅಡುಗೆ ಪಾತ್ರೆಯಲ್ಲೇ ಕಲ್ಯಾಣ ಮಂಟಪಕ್ಕೆ ಬಂದೆವು’ ಎಂದಿದ್ದಾರೆ.

ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ!

ಕೇರಳದಲ್ಲಿ(Kerala) ಸುರಿದ ಭಾರೀ ಮಳೆ(Rain), ಪ್ರವಾಹ(Flood), ಭೂಕುಸಿತದಿಂದ(Landslide) ಭಾರೀ ಸಾವು ನೋವು ಉಂಟಾಗಿದೆ. ಕೇರಳ ರಣಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾಜ್ಯ ಮತ್ತು ಕೇಂದ್ರ ರಕ್ಷಣಾ ತಂಡಗಳು(Rescue Teams) ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ವೇಳೆ ಮಳೆ ಸೃಷ್ಟಿಸಿರುವ ಭೀಕರತೆ ಗೋಚರವಾಗುತ್ತಿದೆ. ಅವಶೇಷ ತೆರವು ವೇಳೆ ಪತ್ತೆಯಾಗಿರುವ ಶವಗಳು ಮನಕಲಕುವ ಕತೆಗಳನ್ನು ಹೇಳುತ್ತಿವೆ.

ಭಾನುವಾರ ಮೂರು ಮಕ್ಕಳು ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿತ್ತು. ಸೋಮವಾರ ತಾಯಿ(Mother) ಹಾಗೂ ಮಗು​ವಿನ ಶವವು ತಪ್ಪಿ​ಕೊಂಡ ಸ್ಥಿತಿ​ಯಲ್ಲೇ ಪತ್ತೆ​ಯಾ​ಗಿದೆ. ಈ ದೃಶ್ಯವನ್ನು ಕಂಡು ಖುದ್ದು ರಕ್ಷಣಾ ತಂಡ​ಗಳೇ ಕಣ್ಣೀರು ಹಾಕಿ​ವೆ.

ಸಂಬಂಧಿಕರ ಮದುವೆಗೆ ಬಂದಿದ್ದ ತಾಯಿ ಹಾಗೂ ಮಳೆಗೆ ಕುಸಿದ ಮನೆಯ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿರುವ ಈ ದಾರುಣ ಘಟನೆ ಕೇರಳದ ಇಡುಕ್ಕಿ(Idukki) ಜಿಲ್ಲೆಯಲ್ಲಿ ನಡೆದಿದೆ. ಅವಶೇಷಗಳನ್ನು ತೆಗೆ​ಯು​ವ ಸಮಯದಲ್ಲಿ ತಾಯಿ-ಮಗ ಇಬ್ಬರೂ ತಬ್ಬಿಕೊಂಡು ಮಲಗಿರುವ ಸ್ಥಿತಿ​ಯ​ಲ್ಲಿ​ದ್ದರು. ಇದೇ ವೇಳೆ, ಮತ್ತೊಂದು ಮಗು ತೊಟ್ಟಿಲಿನಲ್ಲೇ ಸಾವನ್ನಪ್ಪಿರುವ ದಾರುಣ ದೃಶ್ಯ ಕಂಡು​ಬಂತು.

ಮೃತ ತಾಯಿ ಮಗನನ್ನು ಫೌಝಿಯಾ (28) ಮತ್ತು ಅಮೀನ್‌(10) ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿಯುವ ಮೊದಲು ಮನೆಯ ಒಳಗೆ ನೀರು ನುಗ್ಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಂಬಂಧಿಕರೊಬ್ಬರಿಗೆ ಇವರು ಕಳಿ​ಸಿ​ದ್ದ​ರು. ಆದರೆ ಕೆಲವು ಹೊತ್ತಿ​ನಲ್ಲೇ ಜಲ​ಪ್ರ​ಳ​ಯವು ಇವ​ರನ್ನು ಆಪೋ​ಶನ ತೆಗೆ​ದು​ಕೊಂಡಿ​ದೆ.

Latest Videos
Follow Us:
Download App:
  • android
  • ios