'ನನ್ನ ಗಂಡನಿಗೆ ಪುರುಷತ್ವವಿಲ್ಲ' ಮದುವೆ ಮರುದಿನ ದೂರು ಕೊಟ್ಟ ವಧು
* ಗಂಡನ ಕುಟುಂಬದ ವಿರುದ್ಧ ವರದಕ್ಷಿಣೆ ದೂರು
* ಮದುವೆಯಾದ ದಿನ ಗಂಡನ ನಪುಂಸಕತ್ವ ಬಹಿರಂಗ
* ತವರಿಗೆ ವಾಪಸ್ ಆದ ವಧು
* ಮದುವೆಗೆ ಮಾಡಿದ್ದ ಖರ್ಚು ನೀಡಲು ಒತ್ತಾಯ
ವಿಜಯವಾಡ( ಜೂ. 13) ಹೊಸದಾಗಿ ಮದುವೆಯಾದ ಮಹಿಳೆಯೊಬ್ಬರು ತನ್ನ ಗಂಡ ಮತ್ತು ಕುಟುಂಬದವರ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನವವಿವಾಹಿತ ದೂರು ದಾಖಲಿಸಿದ್ದಾರೆ. 20 ವರ್ಷದ ಮಹಿಳೆ, ತೆನಾಲಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏಪ್ರಿಲ್ 4 ರಂದು ವಿಜಯವಾಡದ ಖಾಸಗಿ ಸಲಹಾ ಕಂಪನಿಯ ಉದ್ಯೋಗಿಯೊಂದಿಗೆ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಆಕೆಯ ಕುಟುಂಬ 10 ಲಕ್ಷ ರೂಪಾಯಿ ವರದಕ್ಷಿಣೆ ನೀಡಿತ್ತು. ಕೆನಡಾಕ್ಕೆ ತೆರಳಿ ಅಲ್ಲಿಯೆ ಸೆಟಲ್ ಆಗಬೇಕು ಎಂದಿದ್ದ ಗಂಡ ಇನ್ನು ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದ.
ಪುರುಷತ್ವ ಕಡಿಮೆಯಾಗಲು ಪೋರ್ನ್ ಕಾರಣವಾ?
ಮದುವೆ ದಿನ ಗಂಡ-ಹೆಂಡತಿ ಫಸ್ಟ್ ನೈಟ್ ಕೋಣೆ ಸೆರಿದ್ದಾರೆ. ಅಲ್ಲಿ ಆಕೆಗೆ ಶಾಕಿಂಗ್ ವಿಚಾರವೊಂದು ಗೊತ್ತಾಗಿದೆ. ತನ್ನ ಗಂಡ ನಪುಂಸಕ ಎನ್ನುವುದು ಅರಿವಿಗೆ ಬಂದಿದೆ. ಇತ್ತ ವಧುವಿನ ಕುಟುಂಬದವರು ಮರುದಿನದ ರಿಸಪ್ಶನ್ ಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ತನ್ನಪೋಷಕರಿಗೆ ವಿಚಾರ ತಿಳಿಸಿದ ವಧು ಅಲ್ಲಿಂದ ನೇರವಾಗಿ ತವರು ಮನೆಗೆ ಬಂದಿದ್ದಾಳೆ.
ಇದಾದ ಮೇಲೆ ಗಂಡಿನ ಕಡೆಯವರು ವಧುವಿನ ಮನೆಗೆ ಬಂದಿದ್ದಾರೆ. ಮದುವೆಗೆ ಮಾಡಿದ ಖರ್ಚು-ವೆಚ್ಚ ಹಿಂದಕ್ಕೆ ನೀಡಲು ಯುವತಿ ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಗಂಡಿನ ಕಡೆಯವರು ಯುವತಿ ಪೋಷಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದಾದ ಮೇಲೆ ಮಹಿಳೆ ಪೊಲೀಸರಿಗೆ ದೂರು ನೀಡುವ ತೀರ್ಮಾನ ಮಾಡಿದ್ದಾರೆ.