28 ಪತ್ನಿಯರೆದುರು 37ನೇ ಮದುವೆಯಾದ ಮುದುಕ!
* ವೃದ್ಧನಿಗೆ 37ನೇ ಮದುವೆ
* 28 ಪತ್ನಿಯರು, 35 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ ಸುಂದರ ಯುವತಿಯೊಬ್ಬಳೊಂದಿಗೆ ಮದುವೆಯಾದ ಅಜ್ಜ
* ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ನವದೆಹಲಿ(ಜೂ.10): ಮದುವೆ ಎಂಬುವುದು ಇಬ್ಬರ ಜೀವನವನ್ನು ಒಂದಾಗಿಸುತ್ತದೆ ಎಂಬ ಮಾತಿದೆ. ಅತ್ಯಂತ ಪವಿತ್ರ ಬಂಧವಾಗಿರುವ ಇದರಲ್ಲಿ ಪತಿ, ಪತ್ನಿ ಹಾಗೂ ಮಕ್ಕಳೆಂಬ ಲೋಕವಿರುತ್ತದೆ. ಇನ್ನು ಇವತ್ತಿನ ಕಾಲದಲ್ಲಿ ಒಬ್ಬ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಸಾಕಾಗಿ ಬಿಡುತ್ತದೆ. ಆದರೆ ಇಲ್ಲೊಬ್ಬ ಮಹಾಶಯ ಊಹಿಸಲು ಸಾಧ್ಯವಾಗದಷ್ಟು ಬಾರಿ ಮದುವೆಯಾಗಿದ್ದಾರೆ. ಹೌದು ಈ ವೃದ್ಧ ಒಂದೆರಡಲ್ಲ, ಬರೋಬ್ಬರಿ 37 ಮದುವೆಯಾಗಿದ್ದಾನೆ. ಇತ್ತೀಚೆಗಷ್ಟೇ ಈತ ತನ್ನ 28 ಪತ್ನಿಯರು, 35 ಮಕ್ಕಳು ಹಾಗೂ 126 ಮೊಮ್ಮಕ್ಕಳ ಸಮ್ಮುಖದಲ್ಲಿ ಸುಂದರ ಯುವತಿಯೊಬ್ಬಳೊಂದಿಗೆ ಮದುವೆಯಾಗಿದ್ದಾನೆ.
ತನ್ನ ಮದುವೆಗೆ ಕುಡಿದು ಬಂದವ ಡ್ಯಾನ್ಸ್ ಮಾಡು ಎಂದ.. ವಿವಾಹ ಕ್ಯಾನ್ಸಲ್!
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್:
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ವೈರಲ್ ಆಗುವುದು ಸಹಜ. ಆದರೆ ಸದ್ಯ ಈ ಮದುವೆ ದೃಶ್ಉಗಳು ವೈರಲ್ ಆಗಿದ್ದು, ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಆದರೆ ಈ ವಿಡಿಯೋ ಯಾವಾಗದ್ದು ಹಾಗೂ ಎಲ್ಲಿಯದ್ದು ಎಂಬುವುದು ತಿಳಿದು ಬಂದಿಲ್ಲವಾದರೂ, ವೃದ್ಧ ವ್ಯಕ್ತಿ ಯುವತಿಯನ್ನು ಅಪ್ಪಿಕೊಂಡು, ಮದುವೆಯಾದ ದೃಶ್ಯಗಳಿವೆ. ಈ ಯುವತಿ ವೃದ್ಧನ ಮೂವತ್ತೇಳನೇ ಪತ್ನಿ ಎನ್ನಲಾಗಿದೆ. ಇನ್ನು ಇಲ್ಲಿ ಸಂಭ್ರಮಿಸುತ್ತಿರುವವರು ಬೇರಾರೂ ಅಲ್ಲ, ಇವರು ವೃದ್ಧನ 28 ಪತ್ನಿಯರು, 35 ಮಕ್ಕಳು ಹಾಗೂ 126 ಮೊಮ್ಮಕ್ಕಳೇ ಆಗಿದ್ದಾರೆ.
ಮಗಳ ಮದುವೆ, ಲಾಕ್‌ಡೌನ್ ನಿಯಮ ಗಾಳಿಗೆ ತೂರಿದ ಬಿಜೆಪಿ ಶಾಸಕನಿಗೆ ಕಂಟಕ!
ವಿಡಿಯೋ ಮೇಲೆ ಮೀಮ್ಸ್
ಈ ವಿಡಿಯೋ ಭಾರೀ ವೈರಲ್ ಆಗಿದೆ. ಅನೇಕ ಮಂದಿ ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ. ಅನೇಕ ಮಂದಿ ಮೀಮ್ಸ್ ಕೂಡಾ ಮಾಡಿದ್ದಾರೆ. ಅದರಲ್ಲೂ ನೆಟ್ಟಿಗನೊಬ್ಬ ಎಷ್ಟೊಳ್ಳೆ ಅದೃಷ್ಟ. ಇಲ್ಲಿ ಒಬ್ಬಳನ್ನೇ ನೋಡಿಕೊಳ್ಳುವುದು ಕಷ್ಟ ಎಂದಿದ್ದಾನೆ.