Asianet Suvarna News Asianet Suvarna News

ಕಾಫಿ ಕಿಂಗ್‌ ಸಿದ್ಧಾರ್ಥರ ಜೀವನ ಚರಿತ್ರೆ 2022ಕ್ಕೆ ಬಿಡುಗಡೆ!

*ಕಾಫಿ ಕಿಂಗ್‌ ಸಿದ್ಧಾರ್ಥರ ಜೀವನ ಚರಿತ್ರೆ 2022ಕ್ಕೆ ಬಿಡುಗಡೆ!
*ಸಿಧ್ದಾರ್ಥ ಜೀವನದ ಹಲವು ಆಯಾಮಗಳ ಅನಾವರಣ
*ದೇಶಾದ್ಯಂತ ಚರ್ಚೆಯಾಗಿದ್ದ ಸಿದ್ಧಾರ್ತ ಆತ್ಮಹತ್ಯೆ ಪ್ರಕರಣ 

Biography of Coffee King VG Siddhartha to be released in 2022
Author
Bengaluru, First Published Oct 28, 2021, 10:27 AM IST
  • Facebook
  • Twitter
  • Whatsapp

ನವದೆಹಲಿ (ಅ. 28) : ದೇಶಾದ್ಯಂತ ‘ಕೆಫೆ ಕಾಫಿ ಡೇ’ (Cafe coffee day) ಮಳಿಗೆಗಳ ಸ್ಥಾಪನೆ ಮುಖಾಂತರ ಪ್ರಖ್ಯಾತರಾಗಿದ್ದ ದಿ. ವಿ.ಜಿ ಸಿದ್ಧಾರ್ಥ (VG Siddhartha) ಅವರ ಜೀವನ ಚರಿತ್ರೆ ಕುರಿತ ಪುಸ್ತಕವು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಎಂದು ಪ್ರಕಾಶಕ ಸಂಸ್ಥೆ ಪ್ಯಾನ್‌ ಮ್ಯಾಕ್‌ಮಿಲನ್‌  ಇಂಡಿಯಾ ಹೇಳಿದೆ. ‘ಕಾಫಿ ಕಿಂಗ್‌: ದಿ ಸ್ವಿಫ್ಟ್‌ ರೈಸ್‌ ಅಂಡ್‌ ಸಡನ್‌ ಡೆತ್‌ ಆಫ್‌ ಕೆಫೆ ಕಾಫಿ ಡೇ ಫೌಂಡರ್‌ ವಿ.ಜಿ. ಸಿದ್ಧಾರ್ಥ’(ಕಾಫಿಯ ರಾಜ: ಕಾಫಿ ಉದ್ಯಮದಲ್ಲಿ ತ್ವರಿತ ಸಾಧನೆ ಮತ್ತು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಆಕಸ್ಮಿಕ ಸಾವು) - Coffee King:The Swift Rise and Sudden Death of Cafe  Coffee Day Founder V. G. Siddhartha ಹೆಸರಿನ ಜೀವನ ಚರಿತ್ರೆಯ ಈ ಪುಸ್ತಕವು ಸಿದ್ಧಾರ್ಥ ಅವರು ಓರ್ವ ಉದ್ಯಮಿಯಾಗಿ ಮಾಡಿದ ಸಾಧನೆ ಮತ್ತು ಅವರ ಆರ್ಥಿಕ ಬಿಕ್ಕಟ್ಟುಗಳು ಕೊನೆಗೆ ಆಘಾತಗೊಳಿಸಿದ ಅವರ ಸಾವಿನ ವಿಚಾರಗಳನ್ನು ಒಳಗೊಂಡಿದೆ ಎಂದು ಈ ಪುಸ್ತಕದ ಕರ್ತೃಗಳಾದ ಉದ್ಯಮ ಪತ್ರಕರ್ತರಾದ ರುಕ್ಮಿಣಿ ರಾವ್‌ (Rukminia Rao) ಮತ್ತು ಪ್ರಸನ್‌ಜಿತ್‌ ದತ್ತಾ (Prosenjit Datta) ಹೇಳಿದ್ದಾರೆ. ಉದ್ಯಮದಲ್ಲಿ ತೀವ್ರ ನಷ್ಟಹೊಂದಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಅವರು 2019ರ ಜು.31ರಂದು ಮಂಗಳೂರಿನ ಬಳಿ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು.

ಕಾಫಿ ಡೇ ಸಿದ್ಧಾರ್ಥ್‌ಗೆ ಮುಳುವಾಗಿದ್ದೇ ಈ ವ್ಯವಹಾರವಾ? ಆಂತರಿಕ ತನಿಖೆಯಿಂದ ಬಯಲಾದ ಅಂಶಗಳು

ಜಿ. ಸಿದ್ಧಾರ್ಥಸ್ ಜೀವನಚರಿತ್ರೆ ಭಾರತದ ಅತಿದೊಡ್ಡ ಕಾಫಿ ಚೈನ್ ರಚಿಸಿದ ವ್ಯಕ್ತಿಯ ಕತೆಯಷ್ಟೇ ಅಲ್ಲದೇ ಅದಕ್ಕಿಂತ ಹೆಚ್ಚಿನದನ್ನು ತಿಳಿಸಲಿದೆ.  ಉದ್ಯಮ ಪತ್ರಕರ್ತರಾದ ರುಕ್ಮಿಣಿ ರಾವ್‌ ಮತ್ತು ಪ್ರಸನ್‌ಜಿತ್‌ ದತ್ತಾ ಅವರು ಸಿದ್ಧಾರ್ಥರ ಜೀವನವನ್ನು ಆಳವಾಗಿ ಅಧ್ಯಯನ ಮಾಡಿ ಈ ಪುಸ್ತಕ ಹೊರತಂದಿದ್ದಾರೆ ಎಂದು ಪ್ಯಾನ್ ಮ್ಯಾಕ್‌ಮಿಲನ್  ಇಂಡಿಯಾ  (Pan Macmillan India) ಸಂಪಾದಕೀಯ ಮುಖ್ಯಸ್ಥರಾದ ತೀಸ್ತಾ ಗುಹಾ ಸರ್ಕಾರ್ (Teesta Guha Sarkar) ಹೇಳಿದ್ದಾರೆ. 

ಬದಲಾವಣೆ ಆರಂಭ;   ಮಾಳವಿಕ ಹೆಗ್ಡೆ ಕೆಫೆ ಕಾಫಿ ಡೇಗೆ ನೂತನ ಸಿಇಒ

"ಈ ಪುಸ್ತಕಕ್ಕಾಗಿ ನಾವು ಸಂಶೋಧನೆಯಲ್ಲಿ ತೊಡಗಿದಾಗ, ದಿವಂಗತ ವಿ.ಜಿ.ಸಿದ್ಧಾರ್ಥ ಅವರು ಮೇಲ್ನೋಟಕ್ಕೆ ಕಾಣುವುದಕ್ಕಿಂತ ಮಿಗಿಲಾಗಿ ಸಂಕೀರ್ಣವಾದ ಸಂಸ್ಥೆಯೊಂದನ್ನು ನಿರ್ಮಿಸಿದ್ದಾರೆ, ಹಾಗಾಗಿ ಸಿದ್ಧಾರ್ಥರ  ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನಾವು ಅತ್ಯಂತ ಸೂಕ್ಷ್ಮವಾಗಿ ಪ್ರತಿ ವಿಷಯದ ಬಗ್ಗೆ ಅಧ್ಯಯನ ನಡೆಸಿದ್ದೆವೆ" ಎಂದು ಪ್ರಸನ್‌ಜಿತ್‌ ದತ್ತಾ ಹೇಳಿದ್ದಾರೆ. "ಸಿದ್ಧಾರ್ಥರ ಬಗೆಗಿನ ಹಲವು ಅಂಶಗಳು ಜನರಿಗೆ ಇನ್ನೂ ತಿಳಿದಿಲ್ಲ ಹಾಗಾಗಿ ಪುಸ್ತಕದಲ್ಲಿ ಅವರ ಸಮಗ್ರ ಭಾವಚಿತ್ರವನ್ನು ಪ್ರಸ್ತುತಪಡಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ" ಎಂದು ಪುಸ್ತಕದ ಕುರಿತು ರುಕ್ಮಿಣಿ ರಾವ್ ಹೇಳಿದ್ದಾರೆ.

4900 ಕೋಟಿಯಿಂದ ಒಂದೇ ಸಾರಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ..ಕಾರಣ

ಸಿದ್ದಾರ್ಥ್ ಆತ್ಮಹತ್ಯೆ ಪ್ರಕರಣ ಇಡೀ ದೇಶಾದ್ಯಂತ ಚರ್ಚೆಯಾಗಿತ್ತು. ಬೆಂಗಳೂರಿನಿಂದ ಹೊರಟಿದ್ದ ಸಿದ್ಧಾರ್ಥ, ಸಕಲೇಶಪುರ ಮೂಲಕ ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ 2020, ಜು.29ರಂದು ಮಂಗಳೂರಿಗೆ ಆಗಮಿಸಿದ್ದರು. ಸಂಜೆ ವೇಳೆ ಕೇರಳ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಜಪ್ಪಿನಮೊಗರು ನೇತ್ರಾವತಿ ಸೇತುವೆಯಿಂದ ಸಿದ್ಧಾರ್ಥ ದಿಢೀರ್‌ ಕಣ್ಮರೆಯಾಗಿದ್ದರು. ಅವರು ನದಿಗೆ ಧುಮುಕಿರಬಹುದು ಎಂಬ ಸಂಶಯದಲ್ಲಿ ಇಡೀ ಜಿಲ್ಲಾಡಳಿತವೇ ಲಕ್ಷಗಟ್ಟಲೆ ವ್ಯಯಿಸಿ ಹುಡುಕಾಟ ನಡೆಸಿತ್ತು. ಎರಡು ದಿನಗಳ ಬಳಿಕ 2020, ಜು.31 ರಂದು ಸಿದ್ಧಾರ್ಥ ಮೃತದೇಹ 4 ಕಿ.ಮೀ. ದೂರದ ಹೊಯಿಗೆ ಬಜಾರ್‌ ಎಂಬಲ್ಲಿ ಪತ್ತೆಯಾಗಿತ್ತು. 

Follow Us:
Download App:
  • android
  • ios