ನವದೆಹಲಿ (ಡಿ. 07) ಕೆಫೆ ಕಾಫಿ ಡೇಯಲ್ಲಿ ಮಹತ್ವದ ಬದಲಾವಣೆಯಾಗಿದೆ.   ಕಾಫಿ ಡೇ ಎಂಟರ್‌ಪ್ರೈಸಸ್ ಮಂಡಳಿಯು ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಿದೆ. 

ಮಂಡಳಿಯು ನಾನ್ ಎಕ್ಸಿಕ್ಯೂಟಿವ್ ಸ್ವತಂತ್ರ ನಿರ್ದೇಶಕರ ಸಾಮರ್ಥ್ಯದ ಮೂವರು ಹೆಚ್ಚುವರಿ ನಿರ್ದೇಶಕರನ್ನು ಕೂಡ ನೇಮಕ ಮಾಡಿದೆ ಎಂದು ಸಿಸಿಡಿ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಗೆ ಮಾಹಿತಿ ನೀಡಿದೆ.

ಸಿದ್ದಾರ್ಥ್ ಸಾಮ್ರಾಜ್ಯಕ್ಕೆ ಮುಂದಿನ ಉತ್ತರಾಧಿಕಾರಿ ಯಾರು?

ಸಿಎಚ್ ವಸುಂಧರಾ ದೇವಿ, ಗಿರಿ ದೇವನೂರು ಮತ್ತು ಮೋಹನ್ ರಾಘವೇಂದ್ರ ಕೊಂಡಿ ಅವರನ್ನು 2020ರ ಡಿಸೆಂಬರ್ 31ರಿಂದ 2025ರ ಡಿಸೆಂಬರ್ 30ರವರೆಗೆ ಷೇರುದಾರರ ಅನುಮೋದನೆಗೆ ಅನುಗುಣವಾಗಿ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಮಾಳವಿಕಾ ಮೇಲೆ ಕಾಫಿ ಬೆಳೆಗಾರರಿಗೆ ಹಣ ನೀಡದ ಕಾರಣಕ್ಕೆ ಎಫ್ ಐಆರ್ ದಾಖಲಾಗಿತ್ತು. ಮೂಡಿಗೆರೆ ನ್ಯಾಯಾಲಯ  ಜಾಮೀನು ರಹಿತ ವಾರೆಂಟ್ ಸಹ ಜಾರಿ ಮಾಡಿತ್ತು. ಕಾಫಿ ಡೇ ಸಿದ್ಧಾರ್ಥ್ ನೇತ್ರಾವತಿಗೆ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಫಿ ಡೇ ಸಿದ್ಧಾರ್ಥ ಪುತ್ರ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿಗೆ ನಿಶ್ಚಿತಾರ್ಥ ಕೂಡ ನೆರವೇರಿದೆ.