Asianet Suvarna News Asianet Suvarna News

ಆನ್‌ಲೈನ್‌ ಜೂಜು ನಿಷೇಧಿಸುವ ಮಸೂದೆ ತಮಿಳುನಾಡಲ್ಲಿ ಮತ್ತೆ ಪಾಸ್‌

 ರಾಜ್ಯಪಾಲರು ಅಂಕಿತ ಹಾಕದೆ ಮಾಸಾರಂಭದಲ್ಲಿ ವಾಪಸ್‌ ಕಳುಹಿಸಿದ್ದ ಆನ್‌ಲೈನ್‌ ಜೂಜು ನಿಷೇಧಿಸುವ ವಿಧೇಯಕವನ್ನು ತಮಿಳುನಾಡು ವಿಧಾನಸಭೆ ಗುರುವಾರ ಮತ್ತೊಮ್ಮೆ ಸರ್ವಾನುಮತದಿಂದ ಅಂಗೀಕರಿಸಿದೆ.

Bill to ban online gambling passed again in Tamil Nadu Assembly akb
Author
First Published Mar 24, 2023, 6:30 AM IST

ಚೆನ್ನೈ:  ರಾಜ್ಯಪಾಲರು ಅಂಕಿತ ಹಾಕದೆ ಮಾಸಾರಂಭದಲ್ಲಿ ವಾಪಸ್‌ ಕಳುಹಿಸಿದ್ದ ಆನ್‌ಲೈನ್‌ ಜೂಜು ನಿಷೇಧಿಸುವ ವಿಧೇಯಕವನ್ನು ತಮಿಳುನಾಡು ವಿಧಾನಸಭೆ ಗುರುವಾರ ಮತ್ತೊಮ್ಮೆ ಸರ್ವಾನುಮತದಿಂದ ಅಂಗೀಕರಿಸಿದೆ. ಹೀಗಾಗಿ ರಾಜ್ಯಪಾಲ ಆರ್‌.ಎನ್‌.ರವಿ (Governor RN Ravi) ಮರು ಅಂಗೀಕಾರವಾಗಿರುವ ಮಸೂದೆ ವಿಚಾರದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಆನ್‌ಲೈನ್‌ ಜೂಜಿನಲ್ಲಿ (online gambling) ಹಣ ಕಳೆದುಕೊಂಡು ಹಲವಾರು ವ್ಯಕ್ತಿಗಳು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ‘ಭಾರವಾದ ಹೃದಯದೊಂದಿಗೆ ಮಸೂದೆ ಮಂಡಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (MK Stalin) ಹೇಳಿದರು. ಬಳಿಕ ಸ್ಪೀಕರ್‌ ಅವರು ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ಘೋಷಿಸಿದರು.

ಆನ್‌ಲೈನ್‌ ಬೆಟ್ಟಿಂಗ್‌ ಜಾಹೀರಾತು ಪ್ರಸಾರ ಬೇಡ

ಸೈಬರ್‌ ಲೋಕದಲ್ಲಿ ಬಾಜಿ ಅಥವಾ ಬೆಟ್ಟಿಂಗ್‌ ಕಟ್ಟುವುದನ್ನು ನಿಷೇಧಿಸಿ ‘ತಮಿಳುನಾಡು ಗೇಮಿಂಗ್‌ ಮತ್ತು ಪೊಲೀಸ್‌ ಕಾನೂನುಗಳು (Tamil Nadu Gaming and Police Laws)(ತಿದ್ದುಪಡಿ) ಕಾಯ್ದೆ 2021’ ಅನ್ನು ಜಾರಿಗೆ ತರಲಾಗಿತ್ತು. ಅದನ್ನು 2021ರ ಆಗಸ್ಟ್‌ನಲ್ಲಿ ಮದ್ರಾಸ್‌ ಹೈಕೋರ್ಚ್‌ ರದ್ದುಗೊಳಿಸಿತ್ತು. ಹೀಗಾಗಿ 2022ರ ಅ.1ರಂದು ರಾಜ್ಯ ಸರ್ಕಾರ ಆನ್‌ಲೈನ್‌ ಜೂಜು, ಬಾಜಿ ಕಟ್ಟಿಆಡುವ ರಮ್ಮಿ ಮತ್ತು ಪೋಕರ್‌ನಂತಹ (rummy and poker) ಗೇಮ್‌ಗಳನ್ನು ನಿಷೇಧಿಸಿ ಸುಗ್ರೀವಾಜ್ಞೆ (ordinance)ಹೊರಡಿಸಿತ್ತು. ಅದಕ್ಕೆ ರಾಜ್ಯಪಾಲರು ಅ.3ರಂದು ಅಂಕಿತ ಹಾಕಿದ್ದರು. ಅ.17ರಂದು ತಮಿಳುನಾಡು ವಿಧಾನಸಭೆ ವಿಧೇಯಕ ಅಂಗೀಕರಿಸಿತ್ತು. ಅದನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಜ್ಯಪಾಲರು ಮಾಸಾರಂಭದಲ್ಲಿ ವಾಪಸ್‌ ಕಳುಹಿಸಿದ್ದರು. ಇದೀಗ ಅದನ್ನು ಮತ್ತೆ ಅಂಗೀಕರಿಸಿದೆ.

Online Gambling:ಆನ್‌ಲೈನ್‌ ಜೂಜು ಬಂದ್‌ ಮಾಡದಂತೆ  ಸಿಎಂಗೆ ಆಮಿಷ ಒಡ್ಡಿದ್ದರಂತೆ!

ಕೊರೊನಾ (Corona ) ನಮ್ಮ ಜೀವನ (Life) ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಕೊರೊನಾ ಆರಂಭದಲ್ಲಿ ಜನರು ಮನೆಯಲ್ಲಿ ಬಂಧಿಯಾಗಿದ್ದರು. ಇದ್ರಿಂದಾಗಿ ಮನೆಯಲ್ಲಿಯೇ ಮನರಂಜನೆ (Entertainment) ಹುಡುಕಾಟ ಶುರುವಾಗಿತ್ತು. ಆಗ ಜನರು ಆರಿಸಿಕೊಂಡಿದ್ದು ಆನ್ಲೈನ್ ಜೂಜಾಟ (Online gambling) . ಆನ್ಲೈನ್ ಜೂಜಾಟ ಮನರಂಜನೆಯನ್ನು ನೀಡ್ತಿದೆ ನಿಜ, ಆದ್ರೆ  ಇದು ಅನೇಕ ಕಣ್ಣಿಗೆ ಕಾಣದ ಸಮಸ್ಯೆಯನ್ನು ಹುಟ್ಟು ಹಾಕಿದೆ. ಜೂಜಾಟದ ವ್ಯಸನವು ಮಾನಸಿಕ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರ್ತಿದೆ. ಹಾಗೆಯೇ ದಿವಾಳಿತನ ಮತ್ತು ಅಪರಾಧಕ್ಕೆ ಕಾರಣವಾಗುತ್ತಿದೆ. ಆಲ್ಕೋಹಾಲ್ ಮತ್ತು ಮಾದಕ ವ್ಯಸನದಲ್ಲಿ ರೋಗಲಕ್ಷಣಗಳು ದೈಹಿಕವಾಗಿ ಗೋಚರಿಸುತ್ತವೆ. ಆದ್ರೆ ಜೂಜಿನ ವ್ಯಸನ ನಿಮಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. 

ಜೂಜಿನ ಪರಿಣಾಮ ನೋಡಿದಾಗ ಜೂಜುಕೋರ ಮೆದುಳು ಸಕ್ರಿಯಗೊಳ್ಳುತ್ತದೆ.  ಆರೋಗ್ಯವಂತ ಜನರಿಗಿಂತ ಜೂಜುಕೋರರರಲ್ಲಿ ಹೆಚ್ಚಿನ  ಮಟ್ಟದ ಡೋಪಮೈನ್ ಬಿಡುಗಡೆಯಾಗುತ್ತದೆ. ಡೋಪಮೈನ್ ಬಿಡುಗಡೆಯು ಉತ್ಸಾಹದ ಮಟ್ಟವನ್ನು ಹೆಚ್ಚಿಸುವ ಮೂಲಕ, ಅಪಾಯಕಾರಿ ನಿರ್ಧಾರಗಳನ್ನು  ತೆಗೆದುಕೊಳ್ಳಲು ಜೂಜುಕೋರರನ್ನು ಪ್ರೇರೇಪಿಸುತ್ತದೆ.  

ಪ್ರಸ್ತುತ, ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ಪ್ರಕಟಿದಸಿದ ವರದಿ ಪ್ರಕಾರ, ಡಯಾಗ್ನೋಸ್ಟಿಕ್ ಮತ್ತು ಸ್ಟ್ಯಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್ (DSM-5) ಅನ್ನು ಬಳಸಿಕೊಂಡು ಜೂಜಿನ ಅಸ್ವಸ್ಥತೆಯನ್ನು ಕಂಡುಹಿಡಿಯಲಾಗುತ್ತಿದೆ. ಜೂಜಿನ ಅಸ್ವಸ್ಥತೆಯ ಚಿಕಿತ್ಸೆ ಮತ್ತು ನಿವಾರಣೆ ಮಾರ್ಗಸೂಚಿಗಳನ್ನು ಯುಕೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ಎಕ್ಸಲೆನ್ಸ್ ನಿಂದ ಅಭಿವೃದ್ಧಿಪಡಿಸಲಾಗುತ್ತಿದೆ. 2024 ರಲ್ಲಿ ಇದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಜನರ ಆಲೋಚನೆಯನ್ನು ಬದಲಿಸುವ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. 

ಜೂಜು ವ್ಯಸನಕ್ಕೆ ಚಿಕಿತ್ಸೆ : ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ಸ್ (SSRIs) ನಂತಹ ಕೆಲವು ಔಷಧಿಗಳು ಖಿನ್ನತೆಯನ್ನು ದೂರ ಮಾಡುತ್ತವೆ. ಇವು ಜೂಜಿನ ವ್ಯಸನದ ಲಕ್ಷಣಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಮಾನಸಿಕ ಆರೋಗ್ಯ ಸಮಸ್ಯೆಗಳಂತೆ, ಸಹಾಯ ಮತ್ತು ಚಿಕಿತ್ಸೆಯನ್ನು ತ್ವರಿತವಾಗಿ ಪಡೆದಲ್ಲಿ ಮಾತ್ರ ಈ ವ್ಯಸನದಿಂದ ಬೇಗ ಹೊರ ಬರಲು ಸಾಧ್ಯವಾಗುತ್ತದೆ.

Follow Us:
Download App:
  • android
  • ios