ಏನೇ ಕೆಲಸ ಮಾಡಲಿ, ಬಿಹಾರಿಗಳ ದೀಪಾವಳಿ ಕುಟುಂಬದೊಂದಿಗೆ, ಈ ಟೈಮಲ್ಲಿ 4 ಹೆಚ್ಚು ರೈಲು ಬಿಡಬಾರಾದಾ ಅಶ್ವಿನ್ ವೈಷ್ಣವ್?

ರೈಲು ಪ್ರಯಾಣಿಕರ ಶೋಚನೀಯ ಪರಿಸ್ಥಿತಿಯನ್ನು ಒಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರೈಲ್ವೆ ಇಲಾಖೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

Biharis asks extra train from Mumbai bihar railway line for festival shares video of the train which was fully crowded akb

ಮುಂಬೈ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಹುತೇಕ ದೇಶದ ವಿವಿಧ ಮೂಲೆಗಳಲ್ಲಿ ಉದ್ಯೋಗ ನಿಮಿತ್ತ ವಾಸವಿರುವ ಜನ ತಮ್ಮೂರಿಗೆ ತೆರಳಿ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಬಿಹಾರಿಗಳು ದೇಶದ ವಿವಿಧ ಮಹಾನಗರಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು, ಅವರೂ ಕೂಡ ವರ್ಷದಲ್ಲಿ ಒಮ್ಮೆ ಬರುವ ದೀಪಾವಳಿ ಹಬ್ಬವನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದೇ ಇಲ್ಲ. ಕೇವಲ ವಾಣಿಜ್ಯ ನಗರಿ ಮುಂಬೈನಲ್ಲೇ ಲಕ್ಷಾಂತರ ಜನ ಬಿಹಾರಿಗಳು ಹೊಟೇಲ್‌ ಉದ್ಯಮ, ಸೆಕ್ಯೂರಿಟಿ ಗಾರ್ಡ್‌ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಇವರೆಲ್ಲರೂ ದೀಪಾವಳಿ ಸಂದರ್ಭವನ್ನು ಕುಟುಂಬದೊಂದಿಗೆ ಕಳೆಯುವುದನ್ನು ಮಿಸ್ ಮಾಡಿಕೊಳ್ಳುವುದಕ್ಕೇ ಯಾರೂ ಬಯಸುವುದೇ ಇಲ್ಲ. ಆದರೆ ರೈಲ್ವೆ ಇಲಾಖೆ ಮಾತ್ರ ಈ ಸಂದರ್ಭದಲ್ಲಿ ಹೆಚ್ಚುವರಿ ರೈಲುಗಳನ್ನು ಬಿಟ್ಟಿಲ್ಲ. ಹೀಗಾಗಿ ಈ ಕಾರ್ಮಿಕರು ರೈಲಿನಲ್ಲಿ ರೈಲಿನ ನಡೆದಾಡುವ ಜಾಗದಲ್ಲೇ ಕುಳಿತುಕೊಂಡು ನಿಂತುಕೊಂಡು ದಿನಗಟ್ಟಲೇ ರೈಲು ಪ್ರಯಾಣ ಮಾಡಿ ಊರು ತಲುಪಿದ್ದರೆ ಈ ರೈಲು ಪ್ರಯಾಣಿಕರ ಶೋಚನೀಯ ಪರಿಸ್ಥಿತಿಯನ್ನು ಒಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರೈಲ್ವೆ ಇಲಾಖೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಪಿಯೂಷ್ ಸಿಂಗ್ ಎಂಬುವವರು 52 ಸೆಕೆಂಡ್‌ಗಳ ವೀಡಿಯೋ ಮಾಡಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಅತ್ತಿತ್ತ ಓಡಾಡುವ ಜಾಗದಲ್ಲೂ ಜನ ತುಂಬಿ ತುಳುಕಿರುವುದರಿಂದ ಟಾಯ್ಲೆಟ್‌ಗೆ ಹೋಗಲು ಬಯಸುವವರು ಮೇಲಿನಿಂದಲೇ ಜೇಡರ ಹುಳುವಿನಂತೆ ಮೇಲ್ಬಾಗ ಸೀಟಿನ ಬದಿ ಕಾಲಿಡುತ್ತಾ ನಡೆದಾಡುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ಶೇರ್ ಮಾಡಿರುವ ಅವರು 'ಛಠ್‌ ಪೂಜಾ ಬರೀ ಹಬ್ಬವಲ್ಲ, ಅದೊಂದು ಭಾವನೆ ಹಾಗೂ ಅದೊಂದು ಕುಟುಂಬದವರೆಲ್ಲಾ ಒಟ್ಟು ಸೇರುವ ಹಬ್ಬ, ಯಾವುದೇ ಬಿಹಾರಿ ಹಾಗೂ ಪೂರ್ವಾಂಚಲಿ ಈ ಹಬ್ಬವನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ, ಅದರಲ್ಲೂ ವಿಶೇಷವಾಗಿ ಕಾರ್ಮಿಕವರ್ಗದ ಜನ ಇದನ್ನು ಮಿಸ್ ಮಾಡಿಕೊಳ್ಳಲು ಬಯಸುವುದೇ ಇಲ್ಲ, ಪ್ರಿಯ ರೈಲ್ವೆ ಸಚಿವರೇ ಈ ಸಂದರ್ಭದಲ್ಲಾದರೂ ಈ ಭಾಗಕ್ಕೆ ಕೆಲವು ಎಕ್ಸ್ಟ್ರಾ ರೈಲುಗಳನ್ನು ಬಿಡಲು ಸಾಧ್ಯವಿಲ್ಲವೇ? ಇವರು ಈ ರೀತಿ ಸಂಚರಿಸುವುದನ್ನು ನೋಡುವುದಕ್ಕೆ ಬಹಳ ಬೇಸರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. 

ವಂದೇ ಭಾರತ್ ರೈಲೇಕೆ ಮೋದಿಗೆ ಅಚ್ಚುಮೆಚ್ಚು? ಅವರೇ ಯಾಕೆ ಉದ್ಘಾಟಿಸೋದು?

ಇವರು ವಾಣಿಜ್ಯ ರಾಜಧಾನಿಯಲ್ಲಿ ದಿನದ ತಿಂಗಳಿಡಿ 24*7 ಕಾಲ ಕೆಲಸ ಮಾಡುತ್ತಿರುತ್ತಾರೆ. ಆರ್ಥಿಕತೆಯ ಸ್ಥಿರತೆಗೆ ಇವರ ಕೊಡುಗೆ ಅಪಾರವಾಗಿದೆ. ಇವರು ಹೆಚ್ಚೆಂದರೆ ವರ್ಷದಲ್ಲಿ ಕೇವಲ 15 ದಿನ ಛಠ್‌ ಪೂಜೆಯ ಸಮಯದಲ್ಲಿ ಊರಿಗೆ ಹೋಗುತ್ತಾರೆ. ಅವರಿಗೆ ಪ್ರಯಾಣ ಎಂದರೆ ರೈಲೇ ಆಗಿದೆ. ಇಡೀ ವರ್ಷದಲ್ಲಿ ಅವರು ಈ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಇರಲು ಬಯಸುತ್ತಾರೆ. ಆದರೆ ಇವರು ಪ್ರಯಾಣಿಸುವ ರೀತಿ ನೋಡಿ ಬಹಳ ಬೇಸರವಾಯ್ತು ಎಂದು ಬರೆದುಕೊಂಡಿದ್ದಾರೆ. 

ಬಂಗಾಳದಿಂದ ಬಾಂಗ್ಲಾ ಮೂಲಕ ತ್ರಿಪುರಾಗೆ ರೈಲು: 38 ಗಂಟೆಯ ಪ್ರಯಾಣ ಈಗ 12ಕ್ಕೆ ಇಳಿಕೆ

ಇದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು,ಅನೇಕ ಹೆಚ್ಚುವರಿ  ಹಾಗೂ ರಜಾ ರೈಲುಗಳನ್ನು ಪರಿಚಯಿಸಲಾಗಿದೆ. ನಾನೇ ಒಂದನ್ನು ಬುಕ್ ಮಾಡಿದ್ದೇನೆ  ಟಿಕೆಟ್‌ಗಳು  ಬೇಕಾದಷ್ಟಿದ್ದವು.  ಆದರೆ ಪ್ರಯಾಣದ ಸುಮಾರು 3 ವಾರಗಳ ಮೊದಲು ದೃಢೀಕರಿಸಲ್ಪಟ್ಟವು. ಇಂದು ಪ್ರಯಾಣಿಸುತ್ತಿದ್ದೇನೆ. ನಿಸ್ಸಂಶಯವಾಗಿ, ಇನ್ನೂ ಉತ್ತಮ  ಹಾಗೂ ಅಗ್ಗದ ರೈಲನ್ನು ಪರಿಚಯಿಸಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಪಿಯೂಷ್ ಸಿಂಗ್, ಈ ಮಾರ್ಗದಲ್ಲಿ ಖಚಿತವಾದ ಟಿಕೆಟ್‌ಗಳೇ ಇಲ್ಲ ಎಂದು ಹೇಳಿದ್ದಾರೆ.

 

Latest Videos
Follow Us:
Download App:
  • android
  • ios