ದೇಶದಲ್ಲಿನ 40 ದಿನ ಲಾಕ್‌ಡೌನ್ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ನಿಜ. ಆದರೆ ಪರಿಸರ ನಳನಳಿಸುತ್ತಿದೆ. ಮಾಲಿನ್ಯ ಪ್ರಮಾಣ ತಗ್ಗಿದೆ. ಹೀಗಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಕಾಣಿಸುತ್ತಿದ್ದ ಪರ್ವತ-ಶಿಖರಗಳು ಈಗ ಕಾಣಿಸುತ್ತಿದೆ. ಇದೀಗ ಬಿಹಾರಗ ನಿವಾಸಿಗಳಿಗೆ ವಿಶ್ವದ ಅತೀ ಎತ್ತರದ ಶಿಖರ್ ಮೌಂಟ್ ಎವರೆಸ್ಟ್ ಸುಂದರವಾಗಿ ಕಾಣಿಸುತ್ತಿದೆ. 

ಬಿಹಾರ(ಮೇ.04): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ವಾಯುಮಾಲಿನ್ಯ ಪ್ರಮಾಣ ತಗ್ಗಿದೆ. ಇದರಿಂದ ಪರಿಸರ, ಪ್ರಾಣಿ ಪಕ್ಷಿಗಳು ಸಂತಸದಿಂದ ನಲಿದಾಡುತ್ತಿದೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಪರ್ವತ ಶಿಖರಗಳು ಗೋಚರಿಸಿದ್ದು ಸುದ್ದಿಯಾಗಿತ್ತು. ಇದೀಗ ಇದೆಲ್ಲವನ್ನು ಮೀರಿಸುವ ಹಾಗೇ ಬಿಹಾರದ ಜನತೆಗೆ ಚೀನಾ ಹಾಗೂ ನೇಪಾಳಗ ಗಡಿ ಭಾಗದಲ್ಲಿರುವ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರ್ ಗೋಚರಿಸುತ್ತಿದೆ.

ಲಾಕ್‌ಡೌನ್ ಕಮಾಲ್, ಈಗ ಸಹಾರನ್ಪುರದಿಂದ್ಲೂ ಕಾಣಿಸ್ತಿದೆ ಹಿಮಾಚಲ ಪರ್ವತ!

ಹಲವು ದಶಕಗಳ ಬಳಿಕ ಈ ದೃಶ್ಯ ಕಾಣಸಿಕ್ಕಿದೆ. ಬಿಹಾರದ ಸಿಂಘಿವಾಹಿನಿ ಗ್ರಾಮದ ನಿವಾಸಿಗಳು ತಮ್ಮ ಮನೆಗಳಿಂದ ದೂರದ ಚೀನಾ ಹಾಗೂ ನೇಪಾಳ ಗಡಿಭಾಗದಲ್ಲಿರುವ ಮೌಂಟ್ ಎವರೆಸ್ಟ್ ಶಿಖರವನ್ನು ವೀಕ್ಷಿಸುತ್ತಿದ್ದಾರೆ. ಭಾರತೀಯ ಅರಣ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಕಸ್ವಾನ್ ಈ ಅಪೂರ್ವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಬಿಹಾರದ ಜನತೆ ದಶಕಗಳ ಬಳಿಕ ಮೌಂಟ್ ಎವರೆಸ್ಟ್ ಶಿಖರ ವೀಕ್ಷಿಸುತ್ತಿದ್ದಾರೆ ಎಂದು ಪೋಸ್ಟ್ ಹಾಕಿದ್ದಾರೆ.

Scroll to load tweet…

ಗಾರ್ಡನ್‌ ಸಿಟಿ ಎಂದಿದ್ದು ಸುಮ್ಮನೆಯಲ್ಲ, ಬೆಂಗಳೂರಿನ ಚಂದವನ್ನೊಮ್ಮೆ ನೋಡಿ

ಲಾಕ್‌ಡೌನ್ ಪರಿಣಾಮ ಗಂಗಾ ನದಿ, ಯಮುನಾ ನದಿ ಸೇರಿದಂತೆ ಹಲವು ನದಿಗಳು ಶುದ್ದವಾಗಿದೆ. ಇನ್ನು ಪಂಜಾಬ್‌ನ ಜಲಂಧರ್‌ನಿಂದ ಹಿಮಾಚಲ ಪ್ರದೇಶ, ಸಹಾರಾನ್ಪುರದಿಂದಲೂ ಹಿಮಾಚಲ ಪ್ರದೇಶ ಗೋಚರಿಸಿದೆ. ದೇಶದಲ ಹಲವು ನಗರಗಳು ಮಾಲಿನ್ಯ ಪ್ರಮಾಣ ಕಡಿಮೆಯಾದ ಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಕಂಗೊಳಿಸುತ್ತಿದೆ. ಪ್ರಾಣಿ ಪಕ್ಷಿಗಳು ಚಿಲಿಪಿಲಿ ಸದ್ದುಗಳು ಕೇಳಿಸುತ್ತಿದೆ. ಇವೆಲ್ಲಾ ಲಾಕ್‌ಡೌನ್ ಪರಿಣಾಮವಾಗಿದೆ.