ನವದೆಹಲಿ(ಏ.29): ಇತ್ತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಇದನ್ನು ತಡೆಯಲು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಲಾಗಿದೆ. ಜನರು ಇದನ್ನು ಪಾಲಿಸುತ್ತಿದ್ದಾರೆ ಕೂಡಾ. ಯಾರೆಲ್ಲಾ ರಸ್ತೆಗಿಳಿಯುತ್ತಿದ್ದಾರೋ ಅವರೆಲ್ಲರಿಗೂ ಪೊಲೀಸರು ತಮ್ಮದೇ ಧಾಟಿಯಲ್ಲಿ ಅರ್ಥೈಸುತ್ತಿದ್ದಾರೆ. ಹೀಗಿರುವಾಗ ಪರಿಸರ ಮಾಲಿಬ್ಯ ಕೂಡಾ ಗಣನೀಯವಾಗಿ ಇಳಿಕೆಯಾಗಿದೆ. ಇದರ ಪರಿಣಾಮ ಎಂಬಂತೆ ಬೆಂಗಳೂರಿನ ವೃಷಭಾವತಿ ಹಾಗೂ ಗಂಗಾ, ಯಮುನಾ ನದಿ ಸೇರಿ ಅನೇಕ ನದಿಗಳು ಶುದ್ಧವಾಗಿವೆ. ವಾಯು ಮಾಲಿನ್ಯವೂ ಗಣನೀಯವಾಗಿ ಇಳಿಕರೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಪಂಜಾಬ್‌ನ ಜಲಂಧರ್‌ನಿಂದ ಹಿಮಾಚಲ ಬೆಟ್ಟಗಳು ಗೋಚರಿಸಿದ್ದು, ಈಗ ಸಹಾರನ್ಪುರದಿಂದಲೂ ಪರ್ವತ ಶ್ರೇಣಿಯ ಮನಮೋಹಕ ದೃಶ್ಯ ಕಾಣಲಾರಂಭಿಸಿದೆ.

ದಶಕಗಳ ನಂತ್ರ ಜಲಂಧರ್ ನಿವಾಸಿಗಳಿಗೆ ಹಿಮಾಚಲ ಪರ್ವತ ಶ್ರೇಣಿ ದರ್ಶನ

ಹೌದು ಐಎಫ್‌ಎಸ್‌ ಅಧಿಕಾರಿ ಪ್ರವೀಣ್ ಕಾಸ್ವಾನ್ ಹಾಗೂ ರಮೇಶ್ ಪಾಂಡೆ ಟ್ವಿಟರ್‌ನಲ್ಲಿ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರ್ ಆಗಿದೆ. ಲಾಕ್‌ಡೌನ್ ಜನರನ್ನು ಕೊರೋನಾದಿಂದ ಕಾಪಾಡುವುದರೊಂದಿಗೆ ಪ್ರಕೃತಿ ಮತ್ತೆ ತನ್ನಿಂತಾನಾಗೇ ಮೊದಲಿನಂತಾಗಲು ಸಹಾಯ ಮಾಡಿದೆ.

ಇನ್ನು ಟ್ವಿಟರ್‌ನಲ್ಲಿ ಪೋಟೋ ಶೇರ್ ಮಾಡಿಕೊಂಡಿರುವ ರಮೇಶ್ ಪಾಂಡೆ 'ಹಿಮದಿಂದಾವೃತವಾದ ಪರ್ವತ ಶ್ರೇಣಿಗಳು ಈಗ ಸಹಾರನ್ಪುರದಿಂದ ಕಾಣಲಾರಂಭಿಸಿವೆ. ಲಾಕ್‌ಡೌನ್ ಹಾಗೂ ಮಳೆ ಗಾಲಿಯ ಗುಣಮಟ್ಟ ಹೆಚ್ಚಿಸಿದೆ. ಈ ಫೋಟೋಗಳನ್ನು ಆದಾಯ ತೆರಿಗೆ ಇನ್ಸ್‌ಪೆಕ್ಟರ್ ದುಷ್ಯಂತ್ ಎಂಬವರು ಸೋಮವಾರ ಸಂಜೆ ವಸಂತ್ ವಿಹಾರ್ ಕಾಲೋನಿಯಿಂದ ಕ್ಲಿಕ್ ಮಾಡಿದ್ದಾರೆ' ಎಂದು ಬರೆದಿದ್ದಾರೆ.

ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ: ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!

150-200 ಕಿ. ಮೀ ದೂರವಿದೆ ಈ ಪರ್ವತ ಶ್ರೇಣಿಗಳು

ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಪ್ರವೀಣ್ 'ನೀವು ಸಹಾನ್‌ಪುರ್‌ನಿಂದ ಹಿಮದಿಂದಾವೃತವಾದ ಪರ್ವತವನ್ನು ನೋಡಿದ್ದೀರಾ ಎಂದರೆ ಹೀಗೆ ನೋಡಲು ಸಿಗುವುದು ಬಲು ಅಪರೂಪ ಎನ್ನುತ್ತಾರೆ. ಈ ಪರ್ವತ ಶ್ರೇಣಿಗಳು ಸಹಾರನ್ಪುರದಿಂದ 150-200 ಕಿ. ಮೀಟರ್ ದೂರದಲ್ಲಿವೆ. ಈ ಹಿಂದೆ ಇಲ್ಲಿನ ಜನರು ಮಿಸ್ ಮಾಡಿಕೊಂಡಿದ್ದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆಂಬ ವಿಶ್ವಾಸ ನನಗಿದೆ' ಎಂದ್ದಾರೆ.