ತಮ್ಮ ಮನೆಯ ದನದ ಕೊಟ್ಟಿಗೆ ಸಮೀಪ ಈತ ನಿಲ್ಲಿಸಿರುವ ಆಡಿ ಕಾರ್‌ನ ಚಿತ್ರ ಈಗ ವೈರಲ್ ಆಗಿದೆ. ಯುಟ್ಯೂಬರ್ ಆಗಿರುವ ಹರ್ಷ್ ರಜಪೂತ್ ತಾವು ಮಾಡಿದ ವಿಡಿಯೋಗಳಿಂದ ಬಂದ ಆದಾಯದಿಂದಲೇ ಈ ಕಾರ್ ಖರೀದಿಸಿದ್ದಾರೆ.
ನವದೆಹಲಿ (ಮಾ.5): ನೀವು ಪ್ರತಿದಿನ ಯೂಟ್ಯೂಬ್ ಬಳಕೆ ಮಾಡುವವರಲ್ಲಿ ಒಬ್ಬರಾಗಿದ್ದರೆ, ನೀವು ಒಬ್ಬ ರಿಪೋರ್ಟರ್‌ಅನ್ನು ಖಂಡಿತಾ ಗಮನಿಸಿ ಇರುತ್ತೀರಿ. ಮಾಸ್ಕ್ ಹಾಕಿಕೊಂಡಿರುವ ಈ ರಿಪೋರ್ಟರ್ ಯಾವುದೋ ವ್ಯಕ್ತಿಗಳ ಬಳಿಕ ಬಂದು ಕೆಲವೊಂದು ಪ್ರಶ್ನೆಗಳನ್ನು ಮಾಡುವ ವಿಡಿಯೋ ಅದು. ತಮ್ಮ ರಿಪೋರ್ಟಿಂಗ್‌ನ ತಮಾಷೆಯ ವಿಡಿಯೋಗಳನ್ನು ಮಾಡಿ ತಮ್ಮ ಚಾನೆಲ್ ಹಾಗೂ ಶಾರ್ಟ್ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಅವರ ಈ ವಿಡಿಯೋಗಳನ್ನು ಸಾಕಷ್ಟು ಜನರು ವೀಕ್ಷಣೆ ಮಾಡುತ್ತಾರೆ. ಈ ರಿಪೋರ್ಟರ್ ಬೇರೆ ಯಾರೂ ಅಲ್ಲ, ಹರ್ಷ್ ರಜಪೂತ್ ಎನ್ನುವ ಯೂಟ್ಯೂಬರ್. ಇತ್ತೀಚೆಗೆ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅವರು ಮಾಡಿರುವ ಪೋಸ್ಟ್ ಇದಾಗಿದ್ದರೂ, ಈಗ ವೈರಲ್ ಆಗಿದೆ. ಅದಕ್ಕೆ ಕಾರಣ ತಮ್ಮ ಐಷಾರಾಮಿ ಆಡಿ ಕಾರ್‌ಅನ್ನು ಅವರು ದನದ ಕಟ್ಟಿಗೆಯ ಪಕ್ಕದಲ್ಲಿ ಪಾರ್ಕ್ ಮಾಡಿರುವ ಕಾರಣಕ್ಕೆ. ಈ ಚಿತ್ರ ನವೆಂಬರ್‌ನದ್ದಾಗಿದ್ದರೂ, ಈಗ ವೈರಲ್ ಆಗಿರುವುದರ ಹಿಂದೆ ಕಾರಣವೂ ಇದೆ. ಅವರು ಈ ಆಡಿ ಕಾರ್‌ಅನ್ನು ಯೂಟ್ಯೂಬ್‌ನಿಂದ ಬಂದ ಆದಾಯದಿಂದ ಗಳಿಸಿದ್ದು ಎನ್ನುವುದು ಹೊಸ ಸುದ್ದಿ.
ಯಾರಿವರು ಹರ್ಷ್ ರಜಪೂತ್: ಹರ್ಷ ರಜಪೂತ್ ಜನಪ್ರಿಯ ಯೂಟ್ಯೂಬರ್, ಇವರು ಬಿಹಾರ ಮೂಲದವರು. ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಸುಮಾರು 40 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಔರಂಗಾಬಾದ್‌ನ ಜಸೋಯಾ ನಿವಾಸಿಯಾಗಿರುವ 27 ವರ್ಷದ ಯುಟ್ಯೂಬರ್ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು ಎನ್ನುವ ಮಾಹಿತಿ ಕೂಡ ಇದೆ.
ವ್ಯಕ್ತಿಯ ಕಿವಿಯಿಂದ ಹೊರಬಂತು ಜೇಡ, ವಿಡಿಯೋ ನೋಡಿ ದಂಗಾದ ಜನ!
ಇವರ ತಂದೆ ಬಿಹಾರ ಪೊಲೀಸ್‌ನಲ್ಲಿ ಹೋಮ್ ಗಾರ್ಡ್ ಆಗಿದ್ದಾರೆ. ಹರ್ಷ್ ತಮ್ಮ ವಿಡಿಯೋಗಳ ಮೂಲಕ ಮೆಚ್ಚುಗೆಯ ಜೊತೆಗೆ ಹಣವನ್ನೂ ಗಳಿಸಿದ್ದಾರೆ. ಅವರು ಯೂಟ್ಯೂಬ್ ಆಡ್ಸೆನ್ಸ್‌ನಿಂದ ಒಂದು ತಿಂಗಳಲ್ಲಿ 8 ಲಕ್ಷ ರೂಪಾಯಿಗಳವರೆಗೆ ಗಳಿಸಿದ್ದಾರೆ ಎಂದು ಆಜ್‌ತಕ್ ವರದಿ ಮಾಡಿದೆ. ಇದಲ್ಲದೆ, ಅವರು ಬ್ರ್ಯಾಂಡ್ ಪ್ರಚಾರದಿಂದ ಇನ್ನಷ್ಟು ಹೆಚ್ಚಿನ ಹಣ ಗಳಿಸುತ್ತಾರೆ. ಜೂನ್ 2022 ರಿಂದ ಅಕ್ಟೋಬರ್ 2022 ರವರೆಗೆ, ಹರ್ಷ್ ಆಡ್ಸೆನ್ಸ್‌ನಿಂದ ಪ್ರತಿ ತಿಂಗಳು ಸರಾಸರಿ 4.5 ಲಕ್ಷ ರೂ.ಸಂಪಾದನೆ ಮಾಡುತ್ತಾರೆ ಎನ್ನಲಾಗಿದೆ.
Valentines Day: ಮದುವೆ ಪ್ರಮಾಣಪತ್ರವನ್ನು ತನ್ನ ಕೈಗೆ ಹಚ್ಚೆ ಹಾಕಿಸ್ಕೊಂಡು ಪತ್ನಿಗೆ ಸರ್‌ಪ್ರೈಸ್ ನೀಡಿದ ಪತಿ..!
ಇನ್ನು ಹರ್ಷ್ ರಜಪೂತ್ ತಮ್ಮ ವಿಡಿಯೋದಲ್ಲಿ ಸಾಕಷ್ಟು ನಿಂದನಾರ್ಹ ಪದಗಳನ್ನು ಬಳಸುತ್ತಾರೆ ಎನ್ನುವ ಆರೋಪಗಳೂ ಇವೆ. ಇವರ ಅತ್ಯಂತ ಜನಪ್ರಿಯ ವಿಡಿಯೋವನ್ನು 20 ಲಕ್ಷ ಮಂದಿ ವೀಕ್ಷಿಸಿದ್ದು, ಹೆಚ್ಚಿನವರು ಇವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
