ವ್ಯಕ್ತಿಯ ಕಿವಿಯಿಂದ ಹೊರಬಂತು ಜೇಡ, ವಿಡಿಯೋ ನೋಡಿ ದಂಗಾದ ಜನ!

ವೈರಲ್‌ ವಿಡಿಯೋದಲ್ಲಿ ಮಲಗಿದ್ದ ವ್ಯಕ್ತಿಯ ಕಿವಿಗೆ ಇನ್ನೊಬ್ಬ ವ್ಯಕ್ತಿ ಔಷಧವನ್ನು ಹಾಕುತ್ತಾನೆ. ಕಿವಿಯ ಒಳಗೆ ಔಷಧಿ ಹೋದ ಬಳಿಕ, ಜೀವಂತ ಜೇಡ ಅಲ್ಲಿಂದ ಹೊರಬರುತ್ತದೆ.

viral video Big spider crawls out of mans ear terrifies netizens san

ನವದೆಹಲಿ (ಮಾ.5): ಜೇಡವೊಂದು ನಿಮ್ಮ ಎದುರುಗಡೆ ಕಂಡಾಗ ನಿಮ್ಮ ಮೊದಲ ಪ್ರತಿಕ್ರಿಯೆ ಏನಿರಬಹುದು ಎಂದು ನೀವು ಯಾವಾಗಲಾದರೂ ಯೋಚಿಸಿದ್ದೀರಾ? ಒಂದೋ ಹೆದರಿಕೆಯಿಂದ ಓಡಬಹುದು ಅಥವಾ ಸ್ವಲ್ಪ ದೂರದಲ್ಲಿ ನಿಂತು ಅದರ ಚಲನವಲಗಳನ್ನು ನೋಡಬಹುದು? ಹಾಗೇನಾದರೂ ಅದೇ ಜೇಡ ನಿಮ್ಮ ಮೈಮೇಲೆ ಹತ್ತಿದಾಗ ಅಥವಾ ಕೆಟ್ಟ ಪರಿಸ್ಥಿತಿಯಲ್ಲಿ ನಿಮ್ಮ ಕಿವಿಯ ಒಳಗೆ ಹೊಕ್ಕಿದಾಗ ಏನಾಗಬಹುದು ಎಂದಾದರೂ ಯೋಚಿಸಿದ್ದೀರಾ? ಬಹುಶಃ ಇಂಥ ಯೋಚನೆ ಮಾಡಿದರೆ, ಕೆಲವರಿಗೆ ನಡುಕ ಉಂಟಾಗಬಹುದು. ದುರಾದೃಷ್ಟವಶಾತ್‌, ಇಂಥದ್ದೊಂದು ಕೆಟ್ಟ ಸಂಗತಿ ಈಗ ನಿಜವಾಗಿದೆ. ವ್ಯಕ್ತಿಯೊಬ್ಬನ ಕಿವಿಯಿಂದ ಜೀವಂತ ಜೇಡ ಹೊರಬಂದಿರುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಆಡ್ಲಿ ಟೆರಿಫಯಿಂಗ್‌ ಎನ್ನುವ ಟ್ವಿಟರ್‌ ಪೇಜ್‌, ದಿನಾಂಕ ಹಾಗೂ ಸ್ಥಳ ರಹಿತವಾದ ವಿಡಿಯೋವೊಂದನ್ನು ತನ್ನ ಪೇಜ್‌ನಲ್ಲಿ ಹಂಚಿಕೊಂಡಿದೆ. ಈ ವೈರಲ್‌ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಲಗಿಕೊಂಡಿದ್ದಾನೆ. ಆಗ ಇನ್ನೊಬ್ಬ ವ್ಯಕ್ತಿ ಆತನ ಕಿವಿಯಲ್ಲಿ ಯಾವುದೋ ಔಷಧವನ್ನು ಹಾಕಿತ್ತಾರೆ. ಔಷಧ ಕಿವಿಯ ಒಳಗೆ ಹೋದ ಬೆನ್ನಲ್ಲಿಯೇ ಜೀವಂತ ಜೇಡ ಕಿವಿಯಿಂದ ಹೊರಬರುತ್ತದೆ. ಇದು ವಿಡಿಯೋದಲ್ಲಿರವ ವ್ಯಕ್ತಿಗಳಿಗೆ ಮಾತ್ರವಲ್ಲ, ನೋಡಿದ ವ್ಯಕ್ತಿಗಳಿಗೂ ಅಚ್ಚರಿ ಹುಟ್ಟಿಸಿದೆ. ಆದರೆ, ಈ ವಿಡಿಯೋದ ದೃಢೀಕರಣವನ್ನು ಏಷ್ಯಾನೆಟ್‌ ನ್ಯೂಸ್‌ ಮಾಡಿಲ್ಲ.


ಆಡ್ಲಿ ಟೆರಿಫಯಿಂಗ್‌ (Oddly Terrifying) ಈ ವಿಡಿಯೋವನ್ನು ಹಂಚಿಕೊಂಡ ಬಳಿಕ, 57 ಲಕ್ಷ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಲೈಕ್‌ ಹಾಗೂ ಕಾಮೆಂಟ್‌ಗಳೂ ಬಂದಿವೆ.

ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಯಶ್‌ ಸಿನಿಮಾ ನಟಿಯ ಹಾಟ್‌ ಆವತಾರ!

ನೆಟ್ಟಿಗರ ಕಾಮೆಂಟ್‌ಗಳು: ರಾತ್ರಿಯ ವೇಳೆ ನನ್ನ ಕಿವಿ ತುರಿಸಲು ಆರಂಭಿಸಿದರೆ, ಬಹುಶಃ ನನ್ನ ಕಿವಿಯ ಒಳಗೆ ಇದು ಸೇರಿಸಿಕೊಂಡಿರಬಹುದು ಎಂದು ನನಗನಿಸುತ್ತದೆ' ಎಂದು ಈ ಪೋಸ್‌ನ ಕಾಮೆಂಟ್‌ ವಿಭಾಗದಲ್ಲಿ ವ್ಯಕ್ತಿಯೊಬ್ಬ ಬರೆದಿದ್ದಾರೆ. ' ಕೆಲವು ವರ್ಷಗಳ ಹಿಂದೆ, ನನ್ನ ಕಿವಿಯಲ್ಲಿ ಕೂಡ ಹೀಗೆ ಹುಳ ಹೊಕ್ಕಿತ್ತು. ಆಗ ನಾನು ಬಿಸಿಲಲ್ಲಿ ನಿಂತುಕೊಂಡು ಅದನ್ನು ಹೊರಹಾಕಿದ್ದೆ' ಎಂದು ಬರೆದುಕೊಂಡಿದ್ದಾರೆ.

 

ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ: 70ರ ಹರೆಯದ 'ಚಿರ ಯುವತಿ' ಮದುವೆಯಾದ 75 ವರ್ಷದ 'ಚಿರ ಯುವಕ'

'ಸರಿಯಾಗಿ ಇಂಥದ್ದೇ ಘಟನೆ ಇಂದು ಎದುರಾಯ್ತು. ನನ್ನ ಕಿವಿಯಲ್ಲಿ ಏನೋ ಇದೆ ಎಂದು ರೋಗಿಯೊಬ್ಬ ನನ್ನ ಬಳಿಕ ಬಂದಿದ್ದ. ನಾನು ಒಟೋಸ್ಕೋಪ್‌ಅನ್ನು ಆಕೆಯ ಕಿವಿಯ ಒಳಗೆ ಹಾಕಿದ್ದೇ, ಅದಲ್ಲಿನ ಹುಳ ನೋಡಿ ಆಕೆ ಓಡಿಹೋದಳು ಎಂದು ಬರೆದಿದ್ದಾರೆ. ಕೊನೆಗೆ ಆಕೆಯ ಕಿವಿಗೆ ಬೆಳಕನ್ನು ಹಾಕಿ ಹುಳವನ್ನು ಹೊರತೆಗೆಯಲಾಯಿತು ಎಂದಿದ್ದಾರೆ.
 

Latest Videos
Follow Us:
Download App:
  • android
  • ios