ಆನ್‌ಲೈನ್‌ನಲ್ಲಿ ಡ್ರೋನ್ ಆರ್ಡರ್ ಮಾಡಿದವನಿಗೆ ಬಂತು ಒಂದು ಕೆಜಿ ಆಲುಗಡ್ಡೆ
ಇಲ್ಲೊಂದು ಕಡೆ ಆನ್‌ಲೈನ್‌ನಲ್ಲಿ ಡ್ರೋನ್ ಕ್ಯಾಮರಾ ಖರೀದಿಗೆ ಮುಂದಾದ ವ್ಯಕ್ತಿಗೆ ಒಂದು ಕೆಜಿ ಆಲುಗಡ್ಡೆ ಬಂದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದೆ.
ನಲಂದಾ: ಆನ್‌ಲೈನ್ ಮಾರುಕಟ್ಟೆ ಚಾಲ್ತಿಗೆ ಬಂದ ಮೇಲೆ ಬಹುತೇಕರ ಬದುಕು ಮತ್ತಷ್ಟು ಸುಗಮವಾಗಿದೆ. ಆದರೆ ಈ ಆನ್‌ಲೈನ್ ಖರೀದಿ ವೇಳೆ ಸಾಕಷ್ಟು ಎಡವಟ್ಟುಗಳಾಗುತ್ತವೆ. ನಾವು ಆರ್ಡರ್ ಮಾಡಿದ್ದು ಒಂದಾದರೆ ಸಿಗುವುದು ಮತ್ತೊಂದು. ಇಂತಹ ಹಲವು ಘಟನೆಗಳು ಈಗಾಗಲೇ ಸಾಕಷ್ಟು ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಆನ್‌ಲೈನ್‌ನಲ್ಲಿ ಡ್ರೋನ್ ಕ್ಯಾಮರಾ ಖರೀದಿಗೆ ಮುಂದಾದ ವ್ಯಕ್ತಿಗೆ ಒಂದು ಕೆಜಿ ಆಲುಗಡ್ಡೆ ಬಂದಿದೆ. ಬಿಹಾರದಲ್ಲಿ ಈ ಘಟನೆ ನಡೆದಿದೆ.
ಡ್ರೋನ್ ಆರ್ಡರ್ ಮಾಡಿದ ವ್ಯಕ್ತಿ ಬಾಕ್ಸ್ ತೆರೆಯುತ್ತಿರುವ ವೇಳೆ ಅದರ ಒಳಗೆ ಬಟಾಟೆ ಕಾಣಿಸುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಬಿಹಾರದ (Bihar) ನಲಂದಾ (Naland) ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಡ್ರೋನ್ ಕ್ಯಾಮರಾ (Drone camera) ಆರ್ಡರ್ ಮಾಡಿದ್ದು, ಕ್ಯಾಮರಾ ಇಂದು ಬರುತ್ತೆ ನಾಳೆ ಬರುತ್ತೆ ಅಂತ ಅದಕ್ಕಾಗಿ ಕಾಯುತ್ತಾ ಕುಳಿತಿದ್ದರು. ಆದರೆ ಈ ಕ್ಯಾಮರಾದ ಆರ್ಡರ್ ಕೈ ತಲುಪಿದ ಬಳಿಕ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸರದಿ ಅವರದಾಗಿದೆ. ಏಕೆಂದರೆ ಅವರಿಗೆ ಕ್ಯಾಮರಾ ಬದಲು ಸಾಂಬಾರಿಗೆ ಬಳಸುವ ತರಕಾರಿ ಬಂದಿತ್ತು.
ಬಿಹಾರದ ನಲಂದಾ ಜಿಲ್ಲೆಯ ಪರ್ವಾಲ್‌ಪುರದ ಚೇತನ್ ಕುಮಾರ್ (Chetan kumar) ಎಂಬುವವರೇ ಹೀಗೆ ಆನ್‌ಲೈನ್‌ನಲ್ಲಿ ಡ್ರೋನ್ ಕ್ಯಾಮರಾ ಆರ್ಡರ್ ಮಾಡಿ ಮೋಸ ಹೋದವರು. ಬ್ಯುಸಿನೆಸ್ ಮ್ಯಾನ್ ಆಗಿರುವ ಚೇತನ್‌ಕುಮಾರ್ ಆನ್‌ಮೈನ್ ವೆಬ್‌ಸೈಟ್‌ವೊಂದರಲ್ಲಿ ಡ್ರೋನ್ ಕ್ಯಾಮರಾ ಬುಕ್ ಮಾಡಿ, ಸಂಪೂರ್ಣ ನಗದನ್ನು ಆನ್‌ಲೈನ್‌ನಲ್ಲೇ ಪಾವತಿ ಮಾಡಿದ್ದರು. ನಂತರ ಡೆಲಿವರಿ ಏಜೆಂಟ್ (Delivery agent) ಇವರಿಗೆ ಕ್ಯಾಮರಾ ಪಾರ್ಸೆಲ್ ನೀಡಿದ್ದಾರೆ. ಆದರೆ ಈ ಪಾರ್ಸೆಲ್ ನೋಡಿದ ಕೂಡಲೇ ಚೇತನ್ ಅವರಿಗೆ ಸಂಶಯ ಬಂದಿದ್ದು, ಆತನ ಕೈಯಲ್ಲೇ ಈ ಪಾರ್ಸೆಲ್ ಬಾಕ್ಸ್ ಅನ್ನು ಒಪನ್ ಮಾಡಲು ಹೇಳಿದ್ದಾರೆ. ಅಲ್ಲದೇ ಡೆಲಿವರಿ ಬಾಯ್ ಪಾರ್ಸೆಲ್ ಒಪನ್ ಮಾಡುತ್ತಿರುವ ದರಶ್ಯವನ್ನು ಅವರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ಸೀಲ್ ಆಗಿದ್ದ ಬಾಕ್ಸ್ ಒಳಗೆ ಹತ್ತಿಪ್ಪತ್ತು ಬಾಟಾಟೆ ಇರುವುದು ಕಾಣಿಸಿದೆ.
Flipkart Big Billion Daysನಲ್ಲಿ ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್; ಬಂದಿದ್ದು ಡಿಟರ್ಜೆಂಟ್ ಸೋಪ್..!
ಈ ಬಗ್ಗೆ ಸ್ಥಳೀಯ ಪೊಲೀಸರನ್ನು ವಿಚಾರಿಸಿದಾಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದು ವೇಳೆ ದೂರು ದಾಖಲಾಗಿದ್ದರೆ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಇಂತಹ ಹಲವು ಘಟನೆಗಳು ಈ ಹಿಂದೆಯೂ ಹಲವು ನಡೆದಿವೆ. ಅಹ್ಮದಾಬಾದ್‌ನ ಐಐಎಂನ ಪದವೀಧರರೊಬ್ಬರಿಗೆ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ತಮ್ಮ ತಂದೆಗೆ ಲ್ಯಾಪ್‌ಟಾರ್ಪ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಲ್ಯಾಪ್‌ಟಾಪ್ ಬದಲು ಗಡಿ ಡಿಟರ್ಜೆಂಟ್ ಸೋಪ್ ಪ್ಯಾಕ್ ಬಂದಿತ್ತು. ಐಐಎಂ ಪದವೀಧರೆ ಯಶಸ್ವಿ ಶರ್ಮಾ ಅವರಿಗೆ ಫ್ಲಿಪ್‌ಕಾರ್ಟ್, ಲ್ಯಾಪ್‌ಟಾಪ್ ಬದಲು ಗಡಿ ಡಿಟರ್ಜೆಂಟ್ ಸೋಪ್ (Ghadi Detergent Soap) ಪ್ಯಾಕೆಟ್‌ಗಳನ್ನು ಡೆಲಿವರಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಸ್ತುತ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ (Big Billion Days) ಸೇಲ್ ನಡೆಯುತ್ತಿದ್ದು, ಈ ಸಮಯದಲ್ಲಿ ಇದನ್ನು ಖರೀದಿ ಮಾಡಲಾಗಿದೆ. ಆದರೆ ಫ್ಲಿಪ್‌ಕಾರ್ಟ್ ತನ್ನ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದೂ ಶರ್ಮಾ ದೂರಿದ್ದಾರೆ.
ಸ್ವಿಗ್ಗಿಯಲ್ಲಿ ಜನರು ಹೆಚ್ಚು ಆರ್ಡರ್ ಮಾಡಿರೋದು ಆಹಾರವನ್ನಲ್ಲ, ಇದನ್ನಂತೆ !
ಪ್ರತಿಯೊಂದು ವಸ್ತುಗಳು ಈಗ ಆನ್‌ಲೈನ್‌ನಲ್ಲಿ ಸಿಗುತ್ತವೆ. ಸೂಜಿಯಿಂದ ಹಿಡಿದು ವಾಷಿಂಗ್ ಮೆಷಿನ್ ಪ್ರಿಡ್ಜ್‌ವರೆಗೆ ಅಕ್ಕಿಯಿಂದ ಹಿಡಿದು ಅನ್ನ, ದೋಸೆಯವರೆಗೆ ಜನ ಆನ್‌ಲೈನ್‌ನಲ್ಲಿ ಆರ್ಡರ್ ಮಾಡ್ತಾರೆ. ಆನ್‌ಲೈನ್ ಆರ್ಡರ್ ಮಾಡುವುದರಿಂದ, ಸ್ಥಳಕ್ಕೆ ಹೋಗಿ ಶಾಪಿಂಗ್ ಮಾಡುವ ಸಮಯವೂ ಉಳಿಯುವ ಜೊತೆಗೆ ಸಾಗಣೆ ವೆಚ್ಚ ಓಡಾಟ ಸುಸ್ತು ಯಾವುದೂ ಇರುವುದಿಲ್ಲ. ತಿಂಡಿ ತಿನಿಸು ತರಕಾರಿಗಳಾದರೆ ಮನೆಯಲ್ಲಿ ಕುಳಿತು ಆರ್ಡರ್ ಮಾಡಿದ ಕೆಲಹೊತ್ತಿನಲ್ಲೇ ಮನೆ ಸೇರುವುದು. ನಗರ ಪ್ರದೇಶಗಳಲ್ಲಿ ಇದು ಸಾಕಷ್ಟು ಜನಪ್ರಿಯವಾಗಿದ್ದು ಈ ಆನ್‌ಲೈನ್ ಸೇವೆಗೆಂದೇ ಸಾಕಷ್ಟು ಆಪ್‌ಗಳಿವೆ. ಆದರೆ ಆನ್‌ಲೈನ್ ಖರೀದಿಯಲ್ಲೂ ಕೆಲವು ಸಮಸ್ಯೆಗಳಿವೆ. ಕೆಲವೊಮ್ಮೆ ನಾವು ಆರ್ಡರ್ ಮಾಡಿರುವುದು ಒಂದಾದರೆ ಬಂದು ತಲುಪುವುದು ಇನ್ನೊಂದು, ಮತ್ತೆ ಕೆಲವೊಮ್ಮೆ ಖರೀದಿಸಿದ ವಸ್ತುಗಳೇ ಡ್ಯಾಮೇಜ್ ಆಗಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ ಆಗಿದೆ.